ಕುಂದಾಪುರ: ತಾಲೂಕಿನ ಹಳ್ಳಿಹೊಳೆ ಗ್ರಾಮದ ಚಕ್ರ ಮೈದಾನದ ಬಳಿ ದನವೊಂದು ತೋಟಕ್ಕೆ ಬಂದಿದೆ ಎನ್ನುವ ಕಾರಣಕ್ಕೆ ತೋಟದ ಮಾಲಕ ದನಕ್ಕೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಅಮಾನವೀಯ ಘಟನೆ ನಡೆದಿದ್ದು ಈ ಬಗ್ಗೆ ದೂರು ದಾಖಲಾಗಿದೆ.
ತೋಟದ ಮಾಲೀಕನಾದ ನರಹರಿ ಚಾತ್ರ ಎನ್ನುವಾತ ದನವನ್ನು ಕತ್ತಿಯಿಂದ ಕಡಿದು ಗಾಯಗೊಳಿಸಿದ್ದಾರೆ ಎಂದು ಶಂಕರನಾರಾಯಣ ಠಾಣೆಯಲ್ಲಿ ಸ್ಥಳೀಯ ನಿವಾಸಿ ದನದ ಮಾಲಿಕರಾದ ಸುಕನ್ಯಾ ಅವರು ದೂರು ನೀಡಿದ್ದಾರೆ. ದನ ತೋಟಕ್ಕೆ ಹೋದ ಸಂದರ್ಭ ಸಿಟ್ಟುಗೊಂಡ ನರಹರಿ ಚಾತ್ರ ಕತ್ತಿಯಿಂದ ಕಡಿದು ಗಾಯಗೊಳಿಸಿ ಸುಮಾರು ಸುಮಾರು ರೂ. ೧೫ಸಾವಿರ ನಷ್ಟ ಉಂಟುಮಾಡಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.