ಮಂಗಳೂರು,ಅ.16: ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಕಛೇರಿಯಲ್ಲಿ “ಆಯುಷ್ ಹಬ್ಬ-2015“ರ ಆಯೋಜನೆ ಕುರಿತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಆಯುಷ್ ಕಾಲೇಜುಗಳ ಪ್ರಾಂಶುಪಾಲರ ಸಭೆಯು ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಆಯುಷ್ ಅಧಿಕಾರಿ ಡಾ:ದೇವದಾಸ್ ವಹಿಸಿ ಸ್ವಾಗತವನ್ನು ಕೋರಿದರು.
ಆರೋಗ್ಯ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ:ಮಹಮದ್ ಇಕ್ಬಾಲ್‌ರವರು ಆಯುಷ್ ಹಬ್ಬದ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ನೀಡಿದರು. ಆಯುಷ್ ವ್ಶೆದ್ಯಾಧಿಕಾರಿ ಡಾ:ಮುರಳೀಧರ್‌ರವರು ಪ್ರಾಸ್ತಾವಿಕ ಮಾತನಾಡಿದರು ಹಾಗೂ ಆಯುಷ್ ಫೌಂಡೇಷನ್ ಅಧ್ಯಕ್ಷರಾದ ಡಾ:ಆಶಾಜ್ಯೋತಿ.ರೈ ಯವರು ಮಾತನಾಡಿ ಆಯುಷ್ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲು ಸರ್ವರ ಸಹಕಾರ ಕೋರಿದರು.
ಈ ಸಭೆಯಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಂಶುಪಾಲರಾದ ಡಾ:ವಿನಯಚಂದ್ರ ಶೆಟ್ಟಿ, ಡಾ:ಸುರೇಶ್, ಆಳ್ವಾಸ್ ನ್ಯಾಚುರೋಪತಿ ಕಾಲೇಜಿನ ಡಾ:ಮಹೇಶ್ ಪಂಡಿತ್, ಆಳ್ವಾಸ್ ಹೋಮಿಯೋಪತಿ ಕಾಲೇಜಿನ ಡಾ:ವಿ.ವಿ.ಇಟಗಿ, ಪ್ರಸನ್ನ ಆಯುರ್ವೇದ ಕಾಲೇಜಿನ ಡಾ: ಬಿ.ವಿ.ಪ್ರಸನ್ನ, ಕೆ.ವಿ.ಜಿ ಆಯುರ್ವೇದ ಕಾಲೇಜಿನ ಡಾ:ಎನ್.ಎಸ್.ಶೆಟ್ಟರ್, ಎಸ್.ಡಿ.ಎಂ ನ್ಯಾಚೋರೋಪತಿ ಕಾಲೇಜಿನ ಡಾ:ನಂದೀಶ್, ಯೆನೆಪೋಯ ಯುನಿವರ್ಸಿಟಿಯ ಡಾ:ವಿವೇಕಾನಂದ ವರ್ಣೇಕರ್, ಡಾ: ಪ್ರಸನ್ನ ಐತಾಳ್, ಕರ್ನಾಟಕ ಆಯುರ್ವೇದ ಕಾಲೇಜಿನ ಡಾ:ಸಂತೊಷ್ ಕುಮಾರ್, ಡಾ:ಕಾರ್ತಿಕ್ ರೈ, ಮುನಿಯಾಲ್ ಆಯುರ್ವೇದ ಕಾಲೇಜಿನ ಡಾ: ಸತ್ಯನಾರಾಯಣ ಭಟ್, ಎಸ್.ಡಿ.ಎಂ ಆಯುರ್ವೇದ ಕಾಲೇಜಿನ ಡಾ: ರಾಮಚಂದ್ರ ಉಪಸ್ಥಿತರಿದ್ದರು.
*************************************
ಆಯುಷ್ ಕಿಟ್ ವಿತರಣೆ
ಮಂಗಳೂರು,ಅ.16 : ಸದ್ಗುರು ಶ್ರೀ ಮಾತಾ ಅಮೃತಾನಂದ ಮಯಿ ದೇವಿಯವರ 62ನೆಯ ಜನ್ಮದಿನಾಚರಣೆಯ ಪ್ರಯುಕ್ತ ಮಂಗಳೂರಿನ ಅಮೃತ ವಿದ್ಯಾಲಯಂ ಕಟ್ಟಡದಲ್ಲಿ “ಅಮೃತಾ ಆಯುಷ್ ಕಿಟ್“ಗಳನ್ನು ವಿತರಿಸಲಾಯಿತು.
ಹಿರಿಯ ನಾಗರಿಕರ ಅನುಕೂಲಕ್ಕಾಗಿ “ವೇದನಾ ರಹಿತ ಆರಾಮದಾಯಕ ಜೀವನದ“ ಉದ್ದೇಶದಿಂದ ಆಯುಷ್ ಕಿಟ್‌ಗಳನ್ನು ಸಿದ್ಧಪಡಿಸಲಾಗಿದೆ. ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ`ಸೋಜ ವಿತರಿಸಿದರು.
ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಎಂಆರ್‌ಪಿಲ್‌ನ ಮ್ಯಾನೆಜಿಂಗ್ ಡೈರೆಕ್ಟರ್ ಶ್ರೀ.ಹೆಚ್.ಕುಮಾರ್, ಖ್ಯಾತ ಸ್ತ್ರೀರೋಗ ತಜ್ಞ ವೈದ್ಯರಾದ ಡಾ:ಇಂದುಮತಿ ಮಲ್ಯ, ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಶ್ರೀಮತಿ ಶುತಿ ಹೆಗ್ಡೆ, ಶ್ರೀ ವಾಮನ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.