ಮಂಗಳೂರು, ಅ.16 : ನಗರದ ಬೈಕಂಪಾಡಿ ಬಳಿ ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಮೃತ ಯುವಕ. ಜೋಕಟ್ಟೆಯ ಕೆಬಿಎಸ್ ಬಳಿಯ ನಿವಾಸಿ ನಾಗೇಶ (28) ಎಂದು ಗುರುತಿಸಲಾಗಿದೆ.
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಅವರು ನಿನ್ನೆ ರಾತ್ರಿಪಾಳಿಯಲ್ಲಿ ಕೆಲಸ ನಿರ್ವಹಿಸಲು ತನ್ನ ಬೈಕ್ ನಲ್ಲಿ ಬರುತ್ತಿದ್ದರು. ಬೈಕಂಪಾಡಿ ಜೋಕಟ್ಟೆ ಪ್ರದೇಶದ ಮಾಡಿಲ ಎಂಬಲ್ಲಿ ತಲುಪಿದಾಗ ದೂರವಾಣಿ ಸಂಸ್ಥೆಯೊಂದು ಕೇಬಲ್ ಅಳವಡಿಕೆ ಕಾಮಗಾರಿಗೆಂದು ರಸ್ತೆಬದಿಯಲ್ಲಿ ನಿಲ್ಲಿಸಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ರಸ್ತೆಗೆ ಬಿದ್ದ ಅವರ ಮೈಮೇಲೆಯೇ ಖಾಸಗಿ ಬಸ್ ಹಾದು ಹೋಗಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಂಗಳೂರು ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.