ಕನ್ನಡ ವಾರ್ತೆಗಳು

ಪ್ರಶಾಂತ್ ಕೊಲೆ ಪ್ರಕರಣದಲ್ಲಿ ಹೆಚ್ಚುತ್ತಿರುವ ವಿದೇಶಿ ಕರೆ : ಬಿ.ಜೆ.ಪಿ ಮುಖಂಡ ಜಗದೀಶ ಅಧಿಕಾರಿಗೂ ಬೆದರಿಕೆ ಕರೆ

Pinterest LinkedIn Tumblr

Threatening_cal_jagadhish

ಮಂಗಳೂರು : ಬಿ.ಜೆ.ಪಿ ಜಿಲ್ಲಾ ಉಪಾಧ್ಯಕ್ಷ ಕೆ. ಪಿ. ಜಗದೀಶ ಅಧಿಕಾರಿ ಅವರಿಗೆ ಜೀವ ಬೆದರಿಕೆಯ ಕರೆ ಬಂದಿರುವುದಾಗಿ ತಿಳಿದು ಬಂದಿದೆ. ಗುರುವಾರ ರಾತ್ರಿ ಅಪರಿಚಿತರಿಂದ ಬೆದರಿಕೆ ಕರೆ ಬಂದಿದ್ದು, ಇಂಟರ್ನೆಟ್ ಕಾಲ್‌ನಲ್ಲಿ ತುಳು ಭಾಷೆಯಲ್ಲಿ ಮಾತನಾಡಿ ಬೆದರಿಕೆಯೊಡ್ಡಿದ ವ್ಯಕ್ತಿ ”ಹಿಂದುತ್ವದ ಬಗ್ಗೆ ಭಾರೀ ಮಾತಾಡ್ತೀರಾ? ಪ್ರಶಾಂತ್ ಪೂಜಾರಿಯ ಬೆಂಬಲಿಗರಾ? ನಮ್ಮ ಟಾರ್ಗೆಟ್ 11 ಮಂದಿ. ನಾವು ಟಾರ್ಗೆಟ್ ಮಾಡಿರುವವರಲ್ಲಿ ನೀವೂ ಒಬ್ಬರು’ ಎಂದೆಲ್ಲ ಧಮ್ಕಿ ಹಾಕಿದ್ದಾರಂತೆ.

ಇದೇ ವೇಳೆ ಜಗದೀಶ ಅಧಿಕಾರಿ ಮರಳಿ ಕರೆ ಮಾಡಿರುವವವರನ್ನೇ ದಬಾಯಿಸಿರುವುದಾಗಿ ಹೇಳಿದ್ದಾರೆ. ಘಟನೆಯನ್ನು ಸಂಘ ಪರಿವಾರದ ಪ್ರಮುಖರು ಖಂಡಿಸಿದ್ದಾರೆ. ಪ್ರಕರಣದ ಕುರಿತು ಮೂಡುಬಿದರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪ್ರಶಾಂತ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಮೂಡುಬಿದಿರೆಯಲ್ಲಿ ಈವರೆಗೆ ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್ ಅವರಿಗೆ ಬೆದರಿಕೆ ಕರೆ ಬರುತ್ತಿದ್ದ ಬಗ್ಗೆ ಪ್ರಕರಂಣ ದಾಖಲಾಗಿದ್ದು, ಇದೀಗ ಬೆದರಿಕೆ ಕರೆ ಪಡೆದವರಲ್ಲಿ ಅಧಿಕಾರಿ ಎರಡನೆಯವರಾಗಿದ್ದಾರೆ.

ಇದೇ ಸಂದರ್ಭ ಕಳೆದ ಗುರುವಾರ ಆತ್ಮಹತ್ಯೆಗೆ ಶರಣಾದರು ಎನ್ನಲಾದ ಪ್ರಶಾಂತ್ ಕೊಲೆ ಪ್ರಕರಣದ ಪ್ರಮುಖ ಪ್ರತ್ಯಕ್ಷದರ್ಶಿ ವಾಮನ ಪೂಜಾರಿ ಅವರಿಗೂ ಬೆದರಿಕೆಯ ಕರೆಗಳು ಬಂದಿದ್ದವು ಎನ್ನಲಾಗಿದ್ದು, ಈ ಬಗ್ಗೆ ಕೂಡ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Write A Comment