ಕನ್ನಡ ವಾರ್ತೆಗಳು

ಸುರತ್ಕಲ್ : ಎರಡೂ ಕೋಮಿನ ನಡುವೆ ಘರ್ಷಣೆ – ಐವರು ಆಸ್ಪತ್ರೆಗೆ ದಾಖಲು

Pinterest LinkedIn Tumblr

Suratkal_Communal_fit_1

ಮಂಗಳೂರು :ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಬೈಕಂಪಾಡಿ ಸಮೀಪ ಎರಡು ಕೋಮುಗಳ ನಡುವೆ ನಡೆದ ಘರ್ಷಣೆಯಲ್ಲಿ ಐವರು ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಬೈಕಂಪಾಡಿ ಸಮೀಪ ಅನ್ಯಕೋಮಿನ ಯುವಕನೊಬ್ಬ ನಡೆಸುತ್ತಿರುವ ಮೊಬೈಲ್ ಅಂಗಡಿಗೆ ಇನ್ನೊಂದು ಕೋಮಿನ ಹುಡುಗಿಯರು ದಿನಾ ಸಂಜೆ ಬರುತ್ತಿರುವ ವಿಚಾರವಾಗಿ ಹಲವು ದಿನಗಳಿಂದ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದು, ಬೂದಿ ಮುಚ್ಚಿದ ಕೆಂಡದಂತ್ತಿತ್ತು. ಅದೇ ರೀತಿ ಸೋಮವಾರ ಸಂಜೆ ಕೂಡ ಹಿಂದೂ ಯುವತಿಯರು ಈ ಮೊಬೈಲ್ ಅಂಗಡಿಗೆ ಬಂದು ಕಾಲಹರಣ ಮಾಡುತ್ತಿರುವುದನ್ನು ಗಮನಿಸಿದ ಹಿಂದೂ ಯುವಕರಿಬ್ಬರೂ ಯುವತಿಯರು ಅಂಗಡಿಯಲ್ಲಿ ಇರುವ ಸಮಯದಲ್ಲೇ ಅಕ್ಷೇಪಿಸಿದ ಹಿನ್ನೆಲೆಯಲ್ಲಿ ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ.

 

Suratkal_Communal_fit_2 Suratkal_Communal_fit_3 Suratkal_Communal_fit_4 Suratkal_Communal_fit_5

ಬಳಿಕ ಹಿಂದೂ ಯುವಕರಿಬ್ಬರೂ ಮನೆಗೆ ತೆರಳುತ್ತಿದ್ದ ಸಂದರ್ಭ ಇವರನ್ನು ಇನ್ನೊಂದು ತಂಡ ಅಡ್ಡಗಟ್ಟಿ ಹರಿತವಾದ ಅಯುಧಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಎರಡೂ ಗುಂಪಿನ ನಡುವೆ ನಡೆದ ಘರ್ಷಣೆಯಲ್ಲಿ ಎರಡೂ ಗುಂಪುಗಳ ಐವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಗಾಯಗೊಂಡ ಪುಷ್ಪರಾಜ್ ಮತ್ತು ಭರತ್ ಎಂಬವರನ್ನು ಸುರತ್ಕಲ್‌ನ ಖಾಸಗಿ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಇತರ ಮೂವರು ಗಾಯಾಳುಗಳಾದ ಮೊಬೈಲ್ ರೀಚಾರ್ಜ್ ಡೀಲರ್ಸ್‌ಗಳಾದ ಶಂಸುದ್ದೀನ್, ಅಲ್ತಾಫ್, ಅಜ್ಮಾಲ್ ಎಂಬವರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಾಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡೂ ತಂಡಗಳಿಂದ ದೂರು ದಾಖಲಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆಸ್ಪತ್ರೆಗೆ ಮಾಜಿ ಸಚಿವ ಪಾಲೆಮಾರ್ ಭೇಟಿ :

ವಿಷಯ ತಿಳಿದ ತಕ್ಷಣ ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅವರು, ಸುರತ್ಕಲ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

 

Write A Comment