ಕನ್ನಡ ವಾರ್ತೆಗಳು

ಪ್ರಶಾಂತ ಕೊಲೆ ಆರೋಪಿಗಳು ಕೋರ್ಟಿಗೆ : ಮೂವರಿಗೆ ನ್ಯಾಯಾಂಗ ಬಂಧನ, ಪ್ರಮುಖ ಆರೋಪಿಗೆ ಪೊಲೀಸ್‌ ಕಸ್ಟಡಿ

Pinterest LinkedIn Tumblr

Prasnth_accsed_court_1

ಮಂಗಳೂರು,ಅ.20: ಮೂಡುಬಿದಿರೆಯ ಪ್ರಶಾಂತ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ನಾಲ್ವರನ್ನು ಆರೋಪಿಗಳನ್ನು ಸೋಮವಾರ ಮೂಡುಬಿದಿರೆ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದರು.

ನ್ಯಾಯಾಲಯವು ಆರೋಪಿಗಳ ಪೈಕಿ ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆದ್ಯಪಾಡಿಯ ನಿವಾಸಿ ಮುಹಮ್ಮದ್ ಹನೀಫ್(36)ನನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದ್ದು, ಉಳಿದ ಮೂವರು ಆರೋಪಿಗಳಾದ ಕಿಲ್ಪಾಡಿಯ ಅಬ್ದುರ್ರಶೀದ್ (39), ಮೂಡುಬಿದಿರೆಯ ಮುಹಮ್ಮದ್ ಇಲ್ಯಾಸ್ (27), ಬಂಟ್ವಾಳ ತಾಲೂಕಿನ ನರಿಂಗಾನದ ಇಬ್ರಾಹೀಂ ಲಿಯಾಖತ್ (26)ರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Prasnth_accsed_court_2

ಆರೋಪಿಗಳನ್ನು ಪೊಲೀಸರು ಬಿಗಿ ಬಂದೋಬಸ್ತ್ನೊಂದಿಗೆ ಬೆಳಗ್ಗೆ ಘಟನಾ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಶೇಷವೆಂದರೆ ಈ ಹೊತ್ತು ನ್ಯಾಯಾಲಯದ ಆವರಣದಲ್ಲಿ ಕಂಡದ್ದು ಕೆಲವೇ ಕೆಲವು ಮಂದಿ ಆಸಕ್ತರು. ಬಂಧನಕ್ಕೊಳಗಾದವರ ಪೈಕಿ ಹನೀಫ್‌ ಕೃತ್ಯದಲ್ಲಿ ನೇರ ಭಾಗಿಯಾಗಿದ್ದು ಉಳಿದವರು ಕೊಲೆಗೆ ಪ್ರಚೋದನೆ ಕೊಟ್ಟವರೆನ್ನಲಾಗಿದೆ.

ಆದ್ಯಪಾಡಿಯ ಪಿ.ಕೆ. ಹಮ್ಮಬ್ಬ ಅವರ ಮಗ ಮುಹಮ್ಮದ್‌ ಹನೀಫ್‌ ಮೊನ್ನೆಯ ಘಟನೆಯಲ್ಲಿ ಬೆ„ಕ್‌ ಸವಾರ ಆಗಿದ್ದ. ಪೆರ್ಮುದೆ ಮತ್ತು ಹಂಡೇಲ್‌ ಘಟನೆಯಲ್ಲೂ ಆತ ಇದ್ದನೆನ್ನಲಾಗಿದೆ. ಪ್ರಕರಣದ ಸೂತ್ರಧಾರಿ ಎಂದು ಪೊಲೀಸರು ಗುರುತಿಸಿರುವ ತೋಡಾರ್‌ನ ವ್ಯಕ್ತಿಯೊಬ್ಬರ ಬಂಧನಕ್ಕೆ ಬಲೆ ಬೀಸಲಾಗಿದೆ.

ಮಹಮ್ಮದ್‌ ಇಲ್ಯಾಸ್‌ ಸಿವಿಲ್‌ ಎಂಜಿನಿಯರ್‌..

ಆರೋಪಿಗಳಲ್ಲಿ ಓರ್ವನಾದ ಮಹಮ್ಮದ್‌ ಇಲಿಯಾಸ್‌ ಸಿವಿಲ್‌ ಎಂಜಿನಿಯರ್‌. ಸಾಣೂರಿನ ಅಬ್ದುಲ್‌ ರೆಹ್ಮಾನ್‌ ಅವರ ಪುತ್ರ. ಮೂಡಬಿದಿರೆಯಲ್ಲಿ ಬಿಲ್ಡರ್‌ ಓರ್ವರೊಂದಿಗೆ ಕೆಲಸ ಮಾಡುತ್ತಿದ್ದ ಇಲಿಯಾಸ್‌ ಮೂಡಬಿದಿರೆಯಲ್ಲಿ ಪಿ.ಎಫ್‌.ಐ. ಸಂಘಟನೆಯಲ್ಲಿ ಸಕ್ರಿಯ ಕಾರ್ಯಕರ್ತ ಎನ್ನಲಾಗಿದೆ.

ಇಲ್ಲಿನ ವಕೀಲರೊಬ್ಬರ ಶೂಟ್‌ಔಟ್‌ ಪ್ರಕರಣದ ಬಳಿಕ ನಡೆದ ಸಭೆ ಮತ್ತು ಗಂಟಾಲ್ಕಟ್ಟೆಯ ಗೋ ಕಳ್ಳತನ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಮೂಡಬಿದಿರೆ ರಾಜೀವ ಗಾಂಧೀ ಪುರಸಭಾ ವಾಣಿಜ್ಯ ಸಂಕೀರ್ಣದೆದುರು (ಪ್ರಶಾಂತ್‌ ಹತ್ಯೆ ನಡೆದ ಸ್ಥಳದಿಂದ ಕಣ್ಣಳತೆಯ ದೂರದಲ್ಲಿ) ಪ್ರತಿಭಟನಾ ಸಭೆಯನ್ನು ಸಂಘಟಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಎನ್ನಲಾಗಿದೆ.

ಹಿಂದೂ ಸಂಘಟನೆಗಳ ವಿರುದ್ಧ ಪ್ರಚೋದನಕಾರಿ ಭಾಷಣಗಳು ಕೇಳಿ ಬಂದದ್ದು ಈ ಸಭೆಯಲ್ಲೇ. ವಿಹಿಂಪ ಮುಖಂಡ ಜಗದೀಶ್‌ ಶೇಣವ ಹತ್ಯಾ ಯತ್ನದಲ್ಲೂ ಈತನ ಹೆಸರು ಕೇಳಿಬರುತ್ತಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಶೋಧಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment