ಕುಂದಾಪುರ: ನವರಾತ್ರಿಯ ವಿಶೇಷ ದಿನ ಮಹನವಮಿಯ ದಿನವಾದ ಗುರುವಾರ ಕುಂದಾಪುರ ತಾಲೂಕಿನ ಎಲ್ಲೇಡೆ ಆಯುಧ ಪೂಜೆ ಹಾಗೂ ವಾಹನ ಪೂಜಾ ಕೈಂಕರ್ಯಗಳ ಸಂಭ್ರಮ ಜೋರಾಗಿತ್ತು. ಕೊಲ್ಲೂರು, ಹಟ್ಟಿಯಂಗಡಿ ಮಾರಲದೇವಿ ದೇವಸ್ಥಾನ, ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ, ಕೋಟ ಅಮ್ರಥೇಶ್ವರಿ ದೇವಸ್ಥಾನ ಸೇರಿದಂತೆ ತಾಲೂಕಿನ ಪ್ರಸಿದ್ಧ ದೇವಿ ದೇವಸ್ಥಾನಗಳಲ್ಲಿ ಭಕ್ತರ ಸಂಖ್ಯೆ ಅಧಿಕ ಸಂಖ್ಯೆವಿದ್ದು ಪೂಜೆ ಸಲ್ಲಿಸಿದರು.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಆಯುಧ ಪೂಜೆ
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗುರುವಾರ ಬೆಳಿಗ್ಗೆ ಆಯುಧಪೂಜೆಯನ್ನು ಅರ್ಚಕರ ಸಮ್ಮುಖದಲ್ಲಿ ನೆರವೇರಿಸಲಾಯಿತು. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತನಿರೀಕ್ಷಕ ದಿವಾಕರ ಪಿ.ಎಂ. ಹಾಗೂ ಠಾಣಾಧಿಕಾರಿ ನಾಸೀರ್ ಹುಸೇನ್, ಸಂಚಾರಿ ಠಾಣೆ ಎಸ್ಸೈ ದೇವೇಂದ್ರ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಈ ಸಂದರ್ಭ ಹಾಜರಿದ್ದರು. ಇಲಾಖೆಯ ವಾಹನಗಳು, ಬಂದೂಕು ಮೊದಲಾದ ಆಯುಧ ಸೇರಿದಂತೆ ಪೊಲೀಸ್ ಇಲಾಖೆಯಲ್ಲಿನ ಉಪಕರಣಗಳಿಗೂ ಪೂಜೆ ಸಲ್ಲಿಸಿದರು.