ಕನ್ನಡ ವಾರ್ತೆಗಳು

ಕಂಡ್ಲೂರು: ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಶಾರದೋತ್ಸವಕ್ಕೆ ವೈಭವದ ತೆರೆ

Pinterest LinkedIn Tumblr

Kandluru_Sharadotsava_Programme-2015 (27)

ಕುಂದಾಪುರ: ಕುಂದಾಪುರ ತಾಲೂಕಿನ ಕಂಡ್ಲೂರಿನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಜರುಗಿದ 50ನೇ ವರ್ಷದ ಕಂಡ್ಲೂರು ಸಾರ್ವಜನಿಕ ಶ್ರೀ ಶಾರದಾ ಪೂಜಾ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರ ಸಂಜೆ ವೈಭವದ ಪುರಮೆರವಣಿಗೆಯೊಂದಿಗೆ ಶ್ರೀ ದೇವಿ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಯಿತು.

ಸಂಜೆ ವೇಳೆ ಶ್ರೀ ದೇವಿಯ ವಿಸರ್ಜನಾ ಮೆರವಣಿಗೆ ಹೊರಟು ದೂಪದಕಟ್ಟೆವರೆಗೆ ಸಾಗಿ ಬಳಿಕ ಕಂಡ್ಲೂರು ಪೇಟೆಯಲ್ಲಿ ಸಂಚರಿಸಿತು. ಮೆರವಣಿಗೆಯ ಬಳಿಕ ರಾತ್ರಿ ಹೊಳೆಯಲ್ಲಿ ಮೂರ್ತಿಯನ್ನು ಜಲಸ್ಥಂಭನಗೊಳಿಸಲಾಯಿತು. ಈ ವೇಳೆ ಸಾವಿರರು ಜನರು ಉಪಸ್ಥಿತರಿದ್ದರು.

Kandluru_Sharadotsava_Programme-2015 (1)

Kandluru_Sharadotsava_Programme-2015 (26)

Kandluru_Sharadotsava_Programme-2015 (31)

Kandluru_Sharadotsava_Programme-2015 (24)

Kandluru_Sharadotsava_Programme-2015 (2)

Kandluru_Sharadotsava_Programme-2015 (29)

Kandluru_Sharadotsava_Programme-2015 (3) Kandluru_Sharadotsava_Programme-2015 (4) Kandluru_Sharadotsava_Programme-2015 (5) Kandluru_Sharadotsava_Programme-2015 (6) Kandluru_Sharadotsava_Programme-2015 (7) Kandluru_Sharadotsava_Programme-2015 (8) Kandluru_Sharadotsava_Programme-2015 (9) Kandluru_Sharadotsava_Programme-2015 (10) Kandluru_Sharadotsava_Programme-2015 (11) Kandluru_Sharadotsava_Programme-2015 (12) Kandluru_Sharadotsava_Programme-2015 (13) Kandluru_Sharadotsava_Programme-2015 (14) Kandluru_Sharadotsava_Programme-2015 (16) Kandluru_Sharadotsava_Programme-2015 (18) Kandluru_Sharadotsava_Programme-2015 (19) Kandluru_Sharadotsava_Programme-2015 (20) Kandluru_Sharadotsava_Programme-2015 (21) Kandluru_Sharadotsava_Programme-2015 (22) Kandluru_Sharadotsava_Programme-2015 (23)  Kandluru_Sharadotsava_Programme-2015 (25) Kandluru_Sharadotsava_Programme-2015 (28)  Kandluru_Sharadotsava_Programme-2015 (30)  Kandluru_Sharadotsava_Programme-2015 (15) Kandluru_Sharadotsava_Programme-2015 (17)

ಅತೀ ಸೂಕ್ಷ್ಮ ಪ್ರದೇಶವೆಂದು ಬಿಂಬಿತವಾದ ಕಂಡ್ಲೂರಿನಲ್ಲಿ ಶಾರದೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಿದ್ದತೆಯ ಸಂದರ್ಭದಿಂದ ಮೊದಲ್ಘೊಂಡು ಕೆಲವು ಅಹಿತಕರ ಘಟನೆಗಳು ನಡೆದಿದ್ದವು. ಅ.14ರ ರಾತ್ರಿ ಗೆಳೆಯನ ಮನೆಯಿಂದ ಊಟ ಮುಗಿಸಿ ಬರುತ್ತಿದ್ದ ದಲಿತ ಯುವಕರಿಬ್ಬರ ಮೇಲೆ ಭಿನ್ನಕೋಮಿನ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದರು ಅಲ್ಲದೇ ಅ.18ರ ರಾತ್ರಿ 50ನೇ ವರ್ಷದ ಸಂಭ್ರಮಕ್ಕಾಗಿ ಕಂಡ್ಲೂರು ಪೇಟೆಯಲ್ಲಿ ಅಳವಡಿಸಲಾಗಿದ್ದ ಕೇಸರಿ ಭಗವಧ್ವಜಕ್ಕೂ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಇದೆಲ್ಲಾ ಘಟನೆಗಳ ಬಳಿಕ ಕಂಡ್ಲೂರು ಪರಿಸರದಲ್ಲಿ ಕೊಂಚ ತಲ್ಲಣವುಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಶಾರದೋತ್ಸವ ಮೆರವಣಿಗೆ ಸಂದರ್ಭ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೊಲೀಸ್ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ., ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಸುದರ್ಶನ್, ಕುಂದಾಪುರ ಎಸ್ಸೈ ನಾಸೀರ್ ಹುಸೇನ್ ಸೇರಿದಂತೆ ವಿವಿಧ ಠಾಣೆಯ ಉಪನಿರೀಕ್ಷಕರು ಹಾಗೂ ಸಿಬ್ಬಂಧಿಗಳು ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.

Write A Comment