ಕನ್ನಡ ವಾರ್ತೆಗಳು

ಉಡುಪಿ: ವಾಟ್ಸ್ ಅಪ್ ಗ್ರೂಪ್ ಮೂಲಕ ‘ನಾನು ಅವನಲ್ಲ ಅವಳು’ ಹೌಸ್ ಫುಲ್; ಚಿತ್ರಕ್ಕೆ ಭೇಷ್ ಎಂದ ಕರಾವಳಿಗರು

Pinterest LinkedIn Tumblr

Udp_Nanu Avanalla Avalu_fim show (6)

ಉಡುಪಿ: ಸಿಲ್ಲಿ ಚ್ಯಾಟಿಂಗ್ ಗಳಿಗೆ ಹೊರತಾಗಿ ಏನು ಬೇಕಾದ್ರೂ ಸಾಧಿಸಬಹುದು ಅಂತ ಉಡುಪಿಯ ಒಂದು ವಾಟ್ಸ್ ಅಪ್ ಗ್ರೂಪ್ ತೋರಿಸಿಕೊಟ್ಟಿದೆ. ‘ಓದುಗರು’ ಎಂಬ ಹೆಸರಿನ ಸಹೃದಯರ ಗ್ರೂಪ್ ಆಯೋಜಿಸಿದ್ದ ಸಿನಿಮಾ ಪ್ರದರ್ಶನ ಹೌಸ್ ಫುಲ್ ಆಗುವ ಮೂಲಕ ವಾಟ್ಸ್ ಅಪ್ ನ ಹೊಸ ಸಾಧ್ಯತೆಯನ್ನು ತೆರೆದಿಟ್ಟಿದೆ. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದ ‘ನಾನು ಅವನಲ್ಲ ಅವಳು’ ಚಿತ್ರ ಮತ್ತು ಚಿತ್ರತಂಡ ಈ ಹೊಸ ಪ್ರಯೋಗದಿಂದ ರೋಮಾಂಛನಗೊಂಡಿದೆ.

ಕರಾವಳಿ ಜನ ಸಿನಿಮಾ ನೋಡೋದಿಲ್ಲ ಅನ್ನೋ ಆರೋಪ ಇದೆ. ಆದರೆ ಈ ಅಪವಾದ ಸುಳ್ಳಾಗಿದೆ. ‘ನಾನು ಅವನಲ್ಲ ಅವಳು’ ಈ ಚಿತ್ರ ಉಡುಪಿಯ ಚಿತ್ರಮಂದಿರದಲ್ಲಿ ಎರಡು ಹೌಸ್ ಫುಲ್ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಈ ಪ್ರದರ್ಶನ ಆಯೋಜಿಸಿದ್ದು ಯಾರು ಗೊತ್ತಾ? ಒಂದು ವಾಟ್ಸ್ ಅಪ್ ಗ್ರೂಪ್. ಹೌದು ಉತ್ತಮ ಸಿನಿಮಾಗಳಿಗೆ ಥಿಯೇಟರ್ ಸಿಗಲ್ಲ ಅನ್ನೋ ನೋವಿದೆ. ಸಹೃದಯ ಯುವಕರು ಸೇರಿಕೊಂಡು ವಾಟ್ಸ್ ಅಪ್ ನಲ್ಲಿ ಆರಂಭಿಸಿದ ‘ಓದುಗರು’ ಎಂಬ ಗ್ರೂಪ್ ಗೂ ಈ ಬಗ್ಗೆ ಕಾಳಜಿ ಇತ್ತು. ಗ್ರೂಪ್ ನಲ್ಲಿ ಚರ್ಚೆ ನಡೆದು ಸದಸ್ಯರೆಲ್ಲಾ ಒಂದು ನಿರ್ಧಾರಕ್ಕೆ ಬಂದ್ರು. 28 ವರ್ಷಗಳ ಬಳಿಕ ನಟನೆಯಲ್ಲಿ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಾನು ಅವಳಲ್ಲ ಅವನು ಚಲನಚಿತ್ರವನ್ನು ಪ್ರದರ್ಶಿಸೋದು ಅಂತ ನಿರ್ಧಾರ ಆಯ್ತು. ಚಿತ್ರ ತಂಡವೂ ಒಪ್ಪಿತು. ವಾಟ್ಸ್ ಅಪ್ ನಲ್ಲೇ ಪ್ರಚಾರ ನಡೆಸಿ ಎರಡು ಹೌಸ್ ಪ್ರದರ್ಶನಕ್ಕೆ ಉಡುಪಿ ಸಾಕ್ಷಿ ಆಯ್ತು.

Udp_Nanu Avanalla Avalu_fim show (5) Udp_Nanu Avanalla Avalu_fim show (2) Udp_Nanu Avanalla Avalu_fim show (1) Udp_Nanu Avanalla Avalu_fim show (4) Udp_Nanu Avanalla Avalu_fim show (3)

ವಾಟ್ಸ್ ಅಪ್ ಗ್ರೂಪ್ ನಿಂದ ಹೀಗೊಂದು ಪ್ರಯೋಗ ಆಗಿದ್ದು ಇದೇ ಮೊದಲು. ಚಿತ್ರ ನೋಡಲು ಮಂಗಳಮುಖಿಯರು ದಂಡು ದಂಡಾಗಿ ಬಂದಿದ್ರು, ಸಮಾಜದ ಗಣ್ಯರು, ಉದ್ಯಮಿಗಳು, ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಮಾದ್ಯಮ ಮಂದಿ ಹೀಗೆ ಅನೇಕ ಕ್ಷೇತ್ರದ ಜನ ಹಾಜರಿದ್ರು. ಎಲ್ಲರೂ ಕ್ಯೂ ನಲ್ಲಿ ನಿಂತು ಟಿಕೆಟ್ ಖರೀಧಿಸಿ ಸಿನಿಮಾ ನೋಡಿದ್ರು. ಮಂಗಳಮುಖಿಯರನ್ನು ನೋಡುವ ದೃಷ್ಟಿ ಕೋನ ಬದಲಾಗಬೇಕು, ಜೊತೆಗೆ ಉತ್ತಮ ಚಿತ್ರಗಳಿಗೆ ಥೀಯೇಟರ್ ಸಿಗಲ್ಲ ಅನ್ನೋ ನೋವು ದೂರವಾಗಬೇಕು ಅನ್ನೋದು ‘ಓದುಗರು’ ಬಳಗದ ಆಶಯ ಆಗಿತ್ತು. ರಾಷ್ಟ್ರ ಪ್ರಶಸ್ತಿ ಪಡೆದ ನಟ ಸಂಚಾರಿ ವಿಜಯ್ ಇದಕ್ಕಂಲೇ ಉಡುಪಿಗೆ ಓಡೋಡಿ ಬಂದಿದ್ರು. ನಿರ್ದೇಶಕರಂತೂ ಥಿಯೇಟರ್ ನಲ್ಲಿ ಜನಜಂಗುಳಿ ಕಂಡು ರೋಮಾಂಛನಗೊಂಡಿದ್ರು.

ಸಲ್ಲದ ಕಾರಣಗಳಿಗೆ ವಾಟ್ಸ್ ಅಪ್ ಸುದ್ದಿಯಾಗೋದೇ ಜಾಸ್ತಿ, ಆದರೆ ಈ ಆಧುನಿಕ ಸಂವಹನ ಮಾದ್ಯಮ ಮನಸ್ಸು ಮಾಡಿದ್ರೆ ಏನು ಸಾಧಿಸಬಹುದು ಅನ್ನೋದನ್ನು ಓದುಗರು ಗ್ರೂಪ್ ತೋರಿಸಿಕೊಟ್ಟಿದೆ.

Write A Comment