ಕನ್ನಡ ವಾರ್ತೆಗಳು

ಸಿಟಿಸೆಂಟರ್‌ನ ಕೆಎಫ್‌ಸಿ ಬರ್ಗರ್‌ನಲ್ಲಿ ಜೀವಂತ ಹುಳ ಪತ್ತೆ ಪ್ರಕರಣ : ಆಹಾರ ಮತ್ತು ಸುರಕ್ಷಾ ಅಧಿಕಾರಿಗಳಿಂದ ಸುರಕ್ಷತಾ ಕ್ರಮಗಳ ಪರಿಶೀಲನೆ

Pinterest LinkedIn Tumblr

Kfc_Buger_warm_1

ಮಂಗಳೂರು, ಅ.31: ನಗರದ ಸಿಟಿ ಸೆಂಟರ್ ಮಾಲ್‌ನ ಕೆಎಫ್‌ಸಿ ಮಳಿಗೆಯಲ್ಲಿ ಗ್ರಾಹಕ ರೊಬ್ಬರು ಖರೀದಿಸಿದ ಜಿಂಜರ್ ಚಿಕನ್ ಬರ್ಗರ್‌ನಲ್ಲಿ ಜೀವಂತ ಹುಳ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ದ.ಕ. ಜಿಲ್ಲಾ ಮಟ್ಟದ ಆಹಾರ ಮತ್ತು ಸುರಕ್ಷಾ ಇಲಾಖಾ ಅಧಿಕಾರಿ ಶುಕ್ರವಾರ ಸಂಬಂಧಪಟ್ಟ ಕೆಎಫ್‌ಸಿ ಮಳಿಗೆಗೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾಗಿರುವ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ್ದಾರೆ.

ಕಳೆದ ಸೋಮವಾರ ಕಾವೂರಿನ ನಿವಾಸಿ ಪ್ರಶಾಂತ್ ಎಂಬವರು ನಗರದ ಸಿಟಿ ಸೆಂಟರ್ ಮಾಲ್‌ನ ಕೆಎಫ್‌ಸಿ ಮಳಿಗೆಯಲ್ಲಿ ಖರೀದಿಸಿದ ಜಿಂಜರ್ ಚಿಕನ್ ಬರ್ಗರ್‌ನಲ್ಲಿ ಹುಳ ಕಂಡು ಬಂದಿತ್ತು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಆಹಾರ ಮತ್ತು ಸುರಕ್ಷಾ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿದ್ದರು. ಆದೇಶದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಕೆಎಫ್‌ಸಿ ಮಳಿಗೆಗೆ ಭೇಟಿ ನೀಡಿದ ಜಿಲ್ಲೆಯ ಆಹಾರ ಮತ್ತು ಸುರಕ್ಷಾ ಇಲಾಖೆಯ ಹಿರಿಯ ಸುರಕ್ಷಾ ಅಧಿಕಾರಿ ಎಚ್.ಪಿ.ರಾಜು ಪರಿಶೀಲನೆ ನಡೆಸಿದರು.

Kfc_Buger_warm_2

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಚ್.ಪಿ.ರಾಜು, ‘‘ಕೆಎಫ್‌ಸಿ ಬರ್ಗರ್‌ನಲ್ಲಿ ಹುಳ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಚಿವರ ಆದೇಶ ಹಾಗೂ ಇಲಾಖೆಯ ಮೇಲಧಿಕಾರಿಗಳ ನಿರ್ದೇಶನದ ಮೇರೆಗೆ ನಾನು ಇಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರಡಿ ಕೆಎಫ್‌ಸಿ ಮಳಿಗೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಲ್ಲಿ ಕೈಗೊಳ್ಳಲಾಗಿರುವ ಸುರಕ್ಷಾ ಕ್ರಮಗಳ ಬಗ್ಗೆ ಪಟ್ಟಿ ಮಾಡಿಕೊಂಡಿದ್ದೇನೆ. ಮಳಿಗೆಯಲ್ಲಿ ಕೈಗೊಳ್ಳಬೇಕಾಗಿರುವ ಹಾಗೂ ಸಾರ್ವಜನಿಕರ ಆಹಾರ ಸುರಕ್ಷತೆ ಕುರಿತಂತೆ ಎಚ್ಚರಿಕೆ ವಹಿ ಸಬೇಕಾದ ಕುರಿತಂತೆ ನಾನು ನಡೆಸಿರುವ ಪರಿಶೀಲನೆಯ ಆಧಾರದಲ್ಲಿ ನಾಳೆ ‘ಸುಧಾರಣಾ ನೋಟೀಸ್’ನ್ನು ನೀಡಲಿದ್ದೇನೆ’’ ಎಂದು ತಿಳಿಸಿದ್ದಾರೆ.

‘‘ಮಳಿಗೆಯಲ್ಲಿ ಆಹಾರ ತಯಾ ರಿಕಾ ಕ್ರಮ, ಆಹಾರ ಸಂಗ್ರಹಣಾ ಕೊಠಡಿ, ಫಾಸ್ಟ್ ಫುಡ್ ತಯಾರಿಕೆಗೆ ಅಗತ್ಯವಾದ ವಾತಾವರಣ, ಫುಡ್ ಪ್ಯಾಕೇಜಿಂಗ್, ಆಹಾರ ತಯಾರಿಕೆ ಹಾಗೂ ಸಿಬ್ಬಂದಿಯ ಸ್ವಚ್ಛತೆ, ಸಿಬ್ಬಂದಿಗೆ ಅಗತ್ಯ ಮೂಲಭೂತ ಸೌಲಭ್ಯಗಳು, ಶೌಚಾಲಯ ವ್ಯವಸ್ಥೆ, ಸಿಬ್ಬಂದಿಗಳ ಶಿಕ್ಷಣ ಗುಣಮಟ್ಟ ಹಾಗೂ ತರಬೇತಿ ಮೊದಲಾದ ಕಾಯ್ದೆಯಲ್ಲಿ ಸೂಚಿಸಲಾಗಿರುವ ಎಲ್ಲ ಅಂಶಗಳ ಬಗ್ಗೆ ಪಟ್ಟಿ ಮಾಡಿಕೊಂಡಿದ್ದೇನೆ’’ ಎಂದು ಅವರು ವಿವರಿಸಿದ್ದಾರೆ. ‘‘ಗ್ರಾಹಕ ಪ್ರಶಾಂತ್ ಎಂಬವರು ಖರೀದಿಸಿದ ಬರ್ಗರ್‌ನಲ್ಲಿ ಹುಳ ಪತ್ತೆಯಾದ ಬಗ್ಗೆ ಮಳಿಗೆಯ ಮುಖ್ಯಸ್ಥರನ್ನು ವಿಚಾರಿಸಿದ್ದು, ಈ ಬಗ್ಗೆ ತಮಗೆ ಅರಿವಿಲ್ಲ ಎಂದು ಹೇಳಿದ್ದಾರೆ.

ಪ್ರಶಾಂತ್ ಅವರನ್ನು ಈಗಾಗಲೇ ನಾನು ವಿಚಾರಿಸಿದ್ದೇನೆ. ಆದರೆ ಅವರು ತಮ್ಮ ವಿವಾಹ ಕಾರ್ಯದಲ್ಲಿ ಬ್ಯುಸಿ ಆಗಿರುವ ಕಾರಣ ನನ್ನನ್ನು ಮುಖತಃ ಭೇಟಿಯಾಗಿ ದೂರು ನೀಡಲು ಅವರಿಗೆ ಸಾಧ್ಯವಾ ಗಿಲ್ಲ. ಅವರಿಂದ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡು ಹುಳ ಪತ್ತೆಯಾದ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು’’ ಎಂದು ಎಚ್.ಪಿ.ರಾಜು ತಿಳಿಸಿದ್ದಾರೆ.

‘‘ಆಹಾರ ಸುರಕ್ಷತೆಯ ನಿರ್ಲ ಕ್ಷದ ಕುರಿತಂತೆ ದೂರು ಬಂದಾಗ, ಆಹಾರ ಮತ್ತು ಸುರಕ್ಷತಾ ಕಾಯ್ದೆ ಯಡಿ ಸಂಬಂಧಪಟ್ಟ ಸಂಸ್ಥೆಗೆ ಸುಧಾರಣಾ ನೋಟಿಸ್ ನೀಡ ಲಾಗುತ್ತದೆ. ಅದಕ್ಕೆ ಮೊದಲು ದೂರು ಬಂದ ಬಗ್ಗೆ ಸಂಬಂಧಪಟ್ಟ ಸಂಸ್ಥೆಯನ್ನು ಪರಿಶೀಲನೆಗೊಳಪಡಿಸಿ ಅಲ್ಲಿರುವ ನ್ಯೂನತೆಗಳನ್ನು ಪಟ್ಟಿ ಮಾಡಬೇಕಾಗುತ್ತದೆ. ಬಳಿಕ ಅಲ್ಲಿ ಕೈಗೊಳ್ಳಬೇಕಾಗಿರುವ ಸುಧಾರಣೆಗಳ ಕುರಿತಂತೆ ನೋಟಿಸ್ ಜಾರಿ ಮಾಡಲಾಗುತ್ತದೆ. ಆ ಪ್ರಕಾರ ನಾನು ಕ್ರಮ ಕೈಗೊಳ್ಳುತ್ತಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಆಹಾರ ವಿಶ್ಲೇಷಣೆ ಪತ್ರ ಇಲ್ಲ!

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006ರಡಿ ಸಿದ್ಧ ಆಹಾರ ಒದಗಿಸುವ ಸಂಸ್ಥೆಗಳಲ್ಲಿ ಸುಸಜ್ಜಿತ ಪ್ರಯೋಗಾಲಯ ಹೊಂದಿರಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ದೃಢೀಕೃತ ಸಂಸ್ಥೆಗಳಿಂದ ಆಹಾರ ವಿಶ್ಲೇಷಣೆ ಕುರಿತು ಪತ್ರವನ್ನು ಹೊಂದಿರಬೇಕು. ಅಂತಹ ಆಹಾರ ವಿಶ್ಲೇಷಣೆ ಪತ್ರ ಕೆಎಫ್‌ಸಿ ಮಳಿಗೆಯಲ್ಲಿ ಕಂಡು ಬಂದಿಲ್ಲ.

ಜೊತೆಗೆ ಇಂತಹ ಹೊಟೇಲು ಹಾಗೂ ಆಹಾರ ತಯಾರಿಕಾ ಘಟಕಗಳಲ್ಲಿ ಸಿಬ್ಬಂದಿ ಆಹಾರ ಸಂಸ್ಕರಣೆ ಹಾಗೂ ಗ್ರಾಹಕರಿಗೆ ಸೇವೆ ಒದಗಿಸುವ ಸಂದರ್ಭ ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ. ಒಂದು ವೇಳೆ ಅವುಗಳು ಆಹಾರದಲ್ಲಿ ಬಿದ್ದು ತೊಂದರೆಯಾಗಬಹುದೆಂಬ ಕಾರಣದಿಂದ. ಆದರೆ ಮಳಿಗೆಯಲ್ಲಿ ಮಹಿಳಾ ಸಿಬ್ಬಂದಿ ಈ ನಿಯಮಗಳನ್ನು ಪಾಲಿಸದಿರುವುದು ಕಂಡು ಬಂದಿದೆ.

ಈ ಬಗ್ಗೆ ಮಳಿಗೆಗೆ ಶನಿವಾರ ಸುಧಾರಣಾ ನೋಟಿಸ್ ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ಸುರಕ್ಷಾ ಇಲಾಖೆಯ ಹಿರಿಯ ಸುರಕ್ಷಾ ಅಧಿಕಾರಿ ಎಚ್.ಪಿ.ರಾಜು ತಿಳಿಸಿದ್ದಾರೆ.

ಕೆಎಫ್‌ಸಿ ಬರ್ಗರ್‌ನಲ್ಲಿ ಹುಳ ಪ್ರಕರಣಕ್ಕೆ ಸಂಬಂಧಿಸಿ ‘ವಾರ್ತಾಭಾರತಿ’ (ಅ.28ರ ಸಂಚಿಕೆ)ಯಲ್ಲಿ ವಿಸ್ತೃತ ವರದಿಯನ್ನು ನೀಡಲಾಗಿತ್ತು. ವರದಿಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್, ಆಹಾರ ಮತ್ತು ಸುರಕ್ಷಾ ಇಲಾಖೆಗೆ ಸೂಕ್ತ ಕಾನೂನು ಕ್ರಮಕ್ಕೆ ಆದೇಶಿಸಿದ್ದರು

Write A Comment