ಉಡುಪಿ: ಸಮಾಜಕ್ಕಾಗಿ ಒಳಿತಿಗಾಗಿ ತಮ್ಮ ಜೀವ-ಜೀವನವನ್ನು ಕೊಟ್ಟು ಮಹಾಪುರುಷರಾದವರ ಸಾಲಿಗೆ ಕನ್ನಡ ದ್ವೇಷಿ ಮತಾಂಧ ಟಿಪ್ಪು ಸುಲ್ತಾನನ್ನು ಸೇರಿಸಿದ್ ಮತ್ತು ಟಿಪ್ಟು ಸುಲ್ತಾನ ಜನ್ಮ ದಿನಾಚರಣೆಯ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ, ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಕರ್ನಾಟಕ ಗೌರವ ಸಂರಕ್ಷಣಾ ಸಮಿತಿ ದಿನೇಶ್ ಗಾಣಿಗ ಎಂದರು.
ಜಿಲ್ಲಾ ಪತ್ರಕರ್ತರ ಸಂಘದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ತಾನು ಹೋದಲ್ಲೆಲ್ಲಾ ಮಠ ಮಂದಿರಗಳನ್ನು ಧ್ವಂಸ ಮಾಡಿದ್ದಲ್ಲದೇ ಆ ಸ್ಧಳದಲ್ಲಿ ಮಸೀದಿ ನಿರ್ಮಾಸಿ ಮತಾಂಧತೆ ಮೆರೆದ ಟಿಪ್ಪು ಹಿಂದು ರಾಜ ಸ್ತ್ರೀಯರನ್ನು ಬಲವಂತವಾಗಿ ಅತ್ಯಾಚಾರವೆಸಗಿದ್ದ ,ಅಲ್ಲದೇ ಲಕ್ಷಾಂತರ ಹಿಂದೂ ಸ್ತ್ರೀ ಪುರುಷರನ್ನು ಬಲವಂತವಾಗಿ ಮತಾಂತರಿಸಿದ ಭಯೋತ್ಪಾದಕ ಜೊತೆಗೆತಾಯಿಸ್ವರೂಪಿ ಗೋವನ್ನು ದೇವಸ್ಧಾನದ ಆವರಣದೊಳಗೆ ಕಡಿದ ರಾಕ್ಷಸನಿಗೆ ಜನ್ಮ ದಿನಾಚರಣೆಯ ಆಚರಿಸಬೇಕೆ.? ಎಂದು ಪ್ರಶ್ನಿಸಿದರು.
ರಾಜಕೀಯಕ್ಕಾಗಿ ಅನ್ಯಕೋಮಿನವರೊಂದಿಗೆ ಸಮೀಕರಿಸುವ ಪ್ರಯತ್ನದಲ್ಲಿ ಸಿದ್ದರಾಮಯ್ಯ ಸರ್ಕಾರ ದುರ್ವರ್ತನೆಯನ್ನು ಖಂಡಿಸಿ, ಕರ್ನಾಟಕ ಗೌರವ ಸಂರಕ್ಷಣಾ ಸಮಿತಿ ಸರ್ಕಾರ ವಿರುದ್ಧ ನವೆಂಬರ್ 6 ರಂದು ಸಂಜೆ 4 ಗಂಟೆಗೆ ಸರಿಯಾಗಿ ಉಡುಪಿಯ ಕ್ಲಾಕ್ ಟವರ್ ಬಳಿ ಪೂಜ್ಯ ಶೀರೂರು ಶ್ರೀಗಳಾದ ಲಕ್ಷ್ಮೀವರ ತೀರ್ಥ ಶ್ರೀಪಾದಂಗಳವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು,ಎಲ್ಲರೂ ಸಹಕಾರ ನೀಡಬೇಕೆಂದು ಈ ಮೂಲಕ ವಿನಂತಿಸಿ ಕೊಳ್ಳುತ್ತಿದ್ದೇನೆ ಎಂದು ದಿನೇಶ್ ಗಾಣಿಗ ತಿಳಿಸಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಗೌರವ ಸಂರಕ್ಷಣಾ ಸಮಿತಿ ಉಪಧ್ಯಕ್ಷ ಗಣೇಶ್ ಬೈಲೂರು,ಪ್ರಧಾನ ಕಾರ್ಯದರ್ಶಿ ಕರ್ನಾಟಕ ಗೌರವ ಸಂರಕ್ಷಣಾ ಸಮಿತಿ ಪ್ರಸಾದ್ ಕಿದಿಯೂರು,ಸಂಘಟನಾ ಕಾರ್‍ಯದರ್ಶಿ ಅಜಿತ್ ಗೋಳಿಕಟ್ಟೆ ಉಪಸ್ಧಿತರಿದ್ದರು.