ಕನ್ನಡ ವಾರ್ತೆಗಳು

ಗಂಗೊಳ್ಳಿಯಲ್ಲೊಬ್ಬ ಸಿಗರೇಟ್ ಕಳ್ಳ..! ಅಂಗಡಿ ನುಗ್ಗಿ ಕಿಂಗ್ಸ್ ಸಿಗರೇಟ್ ಕದ್ದ ಮಳ್ಳ..!

Pinterest LinkedIn Tumblr

ಕುಂದಾಪುರ: ಅಂಗಡಿಯೊಂದಕ್ಕೆ ಬೆಳಿಗ್ಗೆನ ಜಾವದ ವೇಳೆ ನುಗ್ಗಿದ ವ್ಯಕ್ತಿಯೋರ್ವ ಸಿಗರೇಟ್ ಕಳವು ಮಾಡಿಕೊಂಡು ಹೋದ ಬಗ್ಗೆ ಅಂಗಡಿ ಮಾಲೀಕ ಗಂಗೊಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

theft

ನ.3 ರಂದು ಬೆಳ್ಳಿಗ್ಗೆನ ಜಾವ 3:00 ಗಂಟೆಗೆ ತ್ರಾಸಿ ಜಂಕ್ಷನ್ ಬಳಿ ಇರುವ ತೇಜಾ ದೇವಾಡಿಗ ಅವರು ವಿಶ್ವಾಸ ಜನರಲ್ ಸ್ಟೋರ್ ನಲ್ಲಿ ಮಲಗಿರುವ ಸಮಯ ಮಾಡಿನ ಮೇಲಿನಿಂದ ಕೆಳಗಡೆ ಯಾರೋ ಜಿಗಿದ ಶಬ್ದ ಕೇಳಿ ಎಚ್ಚರ ಗೊಂಡು ನೋಡಿದಾಗ ಆರೋಪಿ ಪ್ರಸಾದ್ ಖಾರ್ವಿ ಎಂಬುವವನು ಅಂಗಡಿಯ ಮಾಡಿನ ಮೇಲಿಂದ ಅಂಗಡಿಯ ಒಳ ಹೊಕ್ಕಿ 6,500/- ರೂಪಾಯಿ ಮೌಲ್ಯದ 5 ಬಂಡಲ್ ಕಿಂಗ್ಸ್ ಸಿಗರೇಟನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Write A Comment