ಕನ್ನಡ ವಾರ್ತೆಗಳು

ಕುಂದಾಪುರ ಟಿಪ್ಪು ಜಯಂತಿ ಆಚರಣೆಗೆ ವಿರೋಧ: ಬಾಯಿಗೆ ಕಪ್ಪು ಪಟ್ಟಿ ಬಿಗಿದು, ಕಪ್ಪು ಬಾವುಟ ಪ್ರದರ್ಶಿಸಿದವರ ಬಂಧನ

Pinterest LinkedIn Tumblr

* ಪೊಲೀಸ್ ಬಂದೋಬಸ್ತಿನಲ್ಲಿ ‘ಟಿಪ್ಪು ಜಯಂತಿ’ ಆಚರಣೆ
* ಬಾಯಿಗೆ ಕಪ್ಪು ಪಟ್ಟಿ-ಕಪ್ಪು ಬಾವುಟ ಪ್ರದರ್ಶಿಸಿ ವಿರೋಧ
* ವಿ.ಎಚ್.ಪಿ. ಹಾಗೂ ಬಜರಂಗದಳ ಮುಖಂಡರು, ಕಾರ್ಯಕರ್ತರ ಬಂಧನ
* ಟಿಪ್ಪು ಓರ್ವ ಹಿಂದೂ ವಿರೋಧಿ, ದೇಶದ್ರೋಹಿ- ಆರ್.ಎಸ್.ಎಸ್. ಮುಖಂಡ ಸುಬ್ರಮಣ್ಯ ಹೊಳ್ಳ

ಕುಂದಾಪುರ: ಕುಂದಾಪುರ ತಾಲೂಕು ಆಡಳಿತದ ವತಿಯಿಂದ ಕುಂದಾಪುರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಟಿಪ್ಪು ಜನ್ಮ ದಿನಾಚರಣೆಗೆ ಕುಂದಾಪುರದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ವ್ಯಪಕ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದೆ.

bajarangadala_Protest_Tippu jayanthi

ಕುಂದಾಪುರದ ಶಾಸ್ತ್ರೀ ವ್ರತ್ತದ ಸಮೀಪವಿರುವ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ 11 ಗಂಟೆ ಸುಮಾರಿಗೆ ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ತಾಲೂಕು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಸಮಾರಂಭ ಏರ್ಪಡಿಸಲಾಗಿತ್ತು.

 Bajarangadala_Protest kndpr_Tippu jayanthi (25) Bajarangadala_Protest kndpr_Tippu jayanthi (30) Bajarangadala_Protest kndpr_Tippu jayanthi (31) Bajarangadala_Protest kndpr_Tippu jayanthi (21) Bajarangadala_Protest kndpr_Tippu jayanthi (20) Bajarangadala_Protest kndpr_Tippu jayanthi (19) Bajarangadala_Protest kndpr_Tippu jayanthi (16) Bajarangadala_Protest kndpr_Tippu jayanthi (9) Bajarangadala_Protest kndpr_Tippu jayanthi (10) Bajarangadala_Protest kndpr_Tippu jayanthi (8) Bajarangadala_Protest kndpr_Tippu jayanthi (5) Bajarangadala_Protest kndpr_Tippu jayanthi (6) Bajarangadala_Protest kndpr_Tippu jayanthi (4) Bajarangadala_Protest kndpr_Tippu jayanthi (7) Bajarangadala_Protest kndpr_Tippu jayanthi (11) Bajarangadala_Protest kndpr_Tippu jayanthi (12) Bajarangadala_Protest kndpr_Tippu jayanthi (13)

Bajarangadala_Protest kndpr_Tippu jayanthi (22)

Bajarangadala_Protest kndpr_Tippu jayanthi (17) Bajarangadala_Protest kndpr_Tippu jayanthi (18) Bajarangadala_Protest kndpr_Tippu jayanthi (1) Bajarangadala_Protest kndpr_Tippu jayanthi (3) Bajarangadala_Protest kndpr_Tippu jayanthi (2) Bajarangadala_Protest kndpr_Tippu jayanthi (15) Bajarangadala_Protest kndpr_Tippu jayanthi (32) Bajarangadala_Protest kndpr_Tippu jayanthi (37) Bajarangadala_Protest kndpr_Tippu jayanthi (36) Bajarangadala_Protest kndpr_Tippu jayanthi (33) Bajarangadala_Protest kndpr_Tippu jayanthi (14) Bajarangadala_Protest kndpr_Tippu jayanthi (23) Bajarangadala_Protest kndpr_Tippu jayanthi (34)

ಕಪ್ಪು ಬಾವುಟ ಪ್ರದರ್ಶಸಿದ ಪ್ರತಿಭಟನಾಕಾರರು:
ಇತ್ತ ಸಭಾಂಗಣದಲ್ಲಿ ಕಾರ್ಯಕ್ರಮದ ಉದ್ಘಾಟನೆ ನಡೆಯುತ್ತಿದ್ದಂತೆಯೇ ತಲ್ಲೂಕು ಪಂಚಾಯತ್ ಎದುರು ಜಮಾಯಿಸಿದ ಭಜರಂಗದಳ, ವಿಶ್ವಹಿಂದೂ ಪರಿಷತ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕಪ್ಪು ಪಟ್ಟಿಯನ್ನು ಬಾಯಿಗೆ ಕಟ್ಟಿಕೊಂಡು ಕಪ್ಪು ಬಾವುಟ ಪ್ರದರ್ಶಿಸಿ ಆಚರಣೆಗೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೇ ಟಿಪ್ಪು ವಿರೋಧಿ ಘೋಷಣೆಗಳನ್ನು ಕೂಗುತ್ತಾ, ರಾಜ್ಯ ಸರಕಾರದ ವಿರುದ್ಧ ಆಕ್ರೋಷವನ್ನು ಹೊರಹಾಕಿದರು.

ಪೊಲೀಸರಿಂದ ಬಂಧನ-ಬಿಡುಗಡೆ:
ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುವ ಬಗ್ಗೆ ಮಾಹಿತಿಯಿದ್ದುದರಿಂದ ಕುಂದಾಪುರದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಪ್ಪು ಪಟ್ಟಿ ಬಿಗಿದು, ಕಪ್ಪು ಬಾವುಟ ಪ್ರದರ್ಶಿಸಿ ಜಯಂತಿ ವಿರೋಧಿಸಿ ಘೋಷಣೆ ಕೂಗುತ್ತಿದ್ದಂತೆಯೇ ಪೊಲೀಸರು ಆರ್.ಎಸ್.ಎಸ್. ಮುಖಂಡ ಸುಬ್ರಮಣ್ಯ ಹೊಳ್ಳ, ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್ ಕಾವೇರಿ, ರಾಜ್ಯ ಮೀನುಗಾರರ ಪ್ರಕೋಷ್ಟದ ಸಂಚಾಲಕ ಬಿ. ಕಿಶೋರ್ ಕುಮಾರ್, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಪೂಜಾರಿ, ಯುವಮೋರ್ಚಾ ಕುಂದಾಪುರ ಕ್ಷೇತ್ರಾಧ್ಯಕ್ಷ ಶಂಕರ ಅಂಕದಕಟ್ಟೆ, ಬಜರಂಗದಳದ ಮುಖಂಡರಾದ ಪ್ರದೀಪ್, ಸಂತೋಷ್ ಶೆಟ್ಟಿ, ಗಿರೀಶ್, ರಜತ್ ತೆಕ್ಕಟ್ಟೆ, ವಿಶ್ವಹಿಂದೂ ಪರಿಷತ್ ಮುಖಂಡರಾದ ವಿಜಯ್ ಶೆಟ್ಟಿ ಸೇರಿದಂತೆ ೮೦ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು. ಕೆಲ ಹೊತ್ತಿನ ಬಳಿಕ ಎಲ್ಲರನ್ನೂ ಬಿಡುಗಡೆಗೊಳಿಸಲಾಯಿತು.

ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವ್ರತ್ತನಿರೀಕ್ಷಕ ದಿವಾಕರ್ ಪಿ.ಎಂ., ಉಪನಿರೀಕ್ಷಕರಾದ ನಾಸೀರ್ ಹುಸೇನ್, ದೇಜಪ್ಪ, ಸುನೀಲ್ ಕುಮಾರ್ ಈ ಸಂದರ್ಭ ಉಪಸ್ಥಿತರಿದ್ದು ಮುಂಜಾಗ್ರತಾ ಕ್ರಮ ಕೈಗೊಂಡರು.

ಟಿಪ್ಪು ಓರ್ವ ಹಿಂದೂ ವಿರೋಧಿ, ದೇಶದ್ರೋಹಿ- ಸುಬ್ರಮಣ್ಯ ಹೊಳ್ಳ
ಇತಿಹಾಸದಲ್ಲಿಇಂದಿನ ದಿನ ಕಪ್ಪು ದಿನವೆಂದರೂ ತಪ್ಪಲ್ಲ. ಹಿಂದೂ ದೇವಸ್ಥಾನಗಳನ್ನು ನಾಶ ಮಾಡಿ, ಹಿಂದೂಗಳ ಕೊಲೆಗಳಿಗೆ ಕಾರಣನಾದ ಟಿಪ್ಪುವಿನ ಜನ್ಮದಿನಾಚರಣೆ ಕಾರ್ಯಕ್ರಮ ನಡೆಸುತ್ತಿರುವುದು ರಾಜ್ಯದ ಜನರಿಗೆ ಮಾಡಿದ ಮೋಸವಾಗಿದೆ. ಸರಕಾರ ಕೇವಲ ರಾಜಕೀಯಕ್ಕೋಸ್ಕರವಾಗಿ ಮುಂದಿನ ದಿನಗಳಲ್ಲಿ ಸದ್ಧಾಂ ಹುಸೇನ್, ಕಸಬ್ ಮೊದಲಾದವರ ಜನ್ಮ ದಿನಾಚರಣೆ ಮಾಡಿದರೂ ಆಶ್ಚರ್ಯವಿಲ್ಲ. ಅಧಿಕಾರಕ್ಕಾಗಿ ಟಿಪ್ಪು ಹಲವು ಕೆಟ್ಟ ಕೆಲಸಗಳನ್ನು ಮಾಡಿದ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ದೇಶದ್ರೋಹಿಯ ವೈಭವೀಕರಣ ಮಾಡುವುದು ಸರಿಯಲ್ಲ. ಜಾಗ್ರತ ಪ್ರಜೆಗಳು ಇಂತಹ ಕೆಲಸಗಳನ್ನು ವಿರೋಧಿಸಬೇಕಿದೆ ಇಲ್ಲವಾದಲ್ಲಿ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಜನರು ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಆರ್.ಎಸ್.ಎಸ್. ಮುಖಂಡ ಸುಬ್ರಮಣ್ಯ ಹೊಳ್ಳ ಪ್ರತಿಕ್ರಿಯಿಸಿದ್ದಾರೆ.

Bajarangadala_Protest kndpr_Tippu jayanthi (35)

Bajarangadala_Protest kndpr_Tippu jayanthi (24)

Bajarangadala_Protest kndpr_Tippu jayanthi (26) Bajarangadala_Protest kndpr_Tippu jayanthi (27) Bajarangadala_Protest kndpr_Tippu jayanthi (28)

Bajarangadala_Protest kndpr_Tippu jayanthi (29)

ಟಿಪ್ಪು ಜಯಂತಿ ಆಚರಣೆ: ಕುಂದಾಪುರದಲ್ಲಿ ನಡೆದ ಟಿಪ್ಪು ಜನ್ಮದಿನಾಚರಣೆ ಸಮಾರಂಭವನ್ನು ಕರ್ನಾಟಕ ಮೀನುಗಾರಿಕಾ ಅಭಿವ್ರದ್ಧಿ ನಿಗಮದ ಅಧ್ಯಕ್ಷ ಬಿ. ಹೆರಿಯಣ್ಣ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಾಕೋಬ್ ಡಿಸೋಜಾ, ತಾ,ಪಂ. ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮಾಧವ ಬಿ.ಎಸ್., ಪುರಸಭಾ ಮುಖ್ಯಾಧಿಕಾರಿ ಗೋಪಾಲ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಸ್ರೂರು ಶಾರದಾ ಕಾಲೇಜಿನ ಪ್ರಾಧ್ಯಾಪಕ ದಿನೇಶ್ ಹೆಗ್ಡೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಟಿಪ್ಪು ಸುಲ್ತಾನ್ ಇತಿಹಾಸದ ಬಗ್ಗೆ ಮಾತನಾಡಿದರು.

Write A Comment