ಕನ್ನಡ ವಾರ್ತೆಗಳು

ಆಟೋರಿಕ್ಷಾ ಪ್ರಯಾಣ ದರ ಏರಿಕೆಗೆ ಅಗ್ರಹಿಸಿ ರಿಕ್ಷಾ ಚಾಲಕರಿಂದ ಪ್ರತಿಭಟನೆ.

Pinterest LinkedIn Tumblr

Auto_protest_photo_1

ಮಂಗಳೂರು,ನ.11: ತೈಲ ಉತ್ಪನ್ನಗಳ ಹಾಗೂ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯಿಂದಾಗಿ ಆಟೋಚಾಲಕರ ಬದುಕು ತೀರಾ ಸಂಕಷ್ಟಮಯವಾಗಿದೆ.ಒಂದೂವರೆ ಕಿ.ಮಿಗೆ ರೂ.25 /- ಹಾಗೂ ಕಿ.ಮೀ ರೂ 14 /-ಗೆ ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಬುಧವಾರ ದಕ್ಷಿಣ ಕನ್ನಡ ಆಟೋರಿಕ್ಷಾ ಚಾಲಕರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರನ್ನುದ್ದೇಶಿ ಮಾತನಾಡಿದ ಸುನೀಲ್ ಕುಮಾರ್ ಬಜಾಲ್, ತೈಲ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ ಎಂಬ ನೆಪವನ್ನೊಡ್ಡಿ ಏಕಾಏಕಿಯಾಗಿ ಜಿಲ್ಲಾಡಳಿತವು ಆಟೋ ರಿಕ್ಷಾ ಪ್ರಯಾಣ ದರವನ್ನು ಇಳಿಸುವ ಮೂಲಕ ರೀಕ್ಷಾ ಚಾಲಕರ ಬದುಕಿಗೆ ಮಾರಕವಾಗಿದೆ. ನಾವೇನು ಹೆಚ್ಚೆನು ಕೇಳುತ್ತಿಲ್ಲ. ಕೇವಲ ರೂ. 25 ಕನಿಷ್ಟ ದರವನ್ನು ಕೇಳುತ್ತಿದ್ದೇವೆ. ಆದರೆ ಜಿಲ್ಲಾಡಳಿತ ಮಾತ್ರ ನಮ್ಮ ಬೇಡಿಕೆಗೆ ಕಿವಿಗೊಡದೆ ನಿರ್ಲಕ್ಷ್ಯಹಿಸುತ್ತಿದೆ. ಹಾಗಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ, ಇದಕ್ಕೂ ಜಿಲ್ಲಾಡಳಿತ ಸ್ಪಂದಿಸದಿದ್ದಲ್ಲಿ ನ.12 ರಂದು ಸಂಜೆ 6 ರಿಂದ ಮರುದಿನ ಬೆಳಗ್ಗೆ 6 ರವರೆಗೆ ಅನಿರ್ದಿಷ್ಟಾವದಿ ಮುಷ್ಕರ ನಡೆಸಲು ತೀರ್ಮಾನಿಸಿಲಾಗಿದೆ ಎಂದರು.

Auto_protest_photo_3 Auto_protest_photo_4

ಈ ಹಿಂದೆ ಪೆಟ್ರೋಲ್ ದರ ಇಳಿದಾಗ ರಿಕ್ಷಾ ದರವನ್ನು ರೂ. 23ಕ್ಕೆ ಇಳಿಸಲಾಗಿತ್ತು. ಆಗ ಜಿಲ್ಲಾಧಿಕಾರಿಯವರು ಮುಂದಿನ ದಿನಗಳಲ್ಲಿ ತೈಲಬೆಲೆ ಏರಿಕೆಯಾದರೆ ಆಟೋ ದರವನ್ನೂ ಏರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಈಗ ತೈಲ ಬೆಲೆ ಹಲವು ಬಾರಿ ಏರಿಕೆಯಾಗಿದ್ದರೂ ಆಟೋದರ ಮಾತ್ರ ಏರಿಸುವ ಗೋಜಿಗೆ ಹೋಗಿಲ್ಲ. ಆ ಮೂಲಕ ಜಿಲ್ಲಾಧಿಕಾರಿಯವರು ತಾವು ನೀಡಿದ ಭರವಸೆಯನ್ನು ಮರೆತಿದ್ದಾರೆ ಎಂದು ಅವರು ಹೇಳಿದರು.

ರಿಕ್ಷಾ ಚಾಲಕರಿಗೆ ಇತರ ಯಾವುದೇ ಆದಾಯಗಳಿರುವುದಿಲ್ಲ. ಸರಕಾರ ಕೂಡಾ ರಿಕ್ಷಾ ಚಾಲಕರಿಗೆ ಯಾವುದೇ ಸೌಲಭ್ಯ ನೀಡುವ ಗೋಜಿಗೆ ಹೋಗಿಲ್ಲ. ಆದರೆ ಕನಿಷ್ಟ ದರವನ್ನು ಇಳಿಸುವ ಮೂಲಕ ಬಡ ಆಟೋ ಚಾಲಕರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಮಾತ್ರ ಯಾವುದೇ ಮುಲಾಜಿಲ್ಲದೆ ಮಾಡುತ್ತಿದೆ ಎಂದು ಸುನಿಲ್ ಕಿಡಿಕಾರಿದರು.

Write A Comment