ಮಂಗಳೂರು: ಸುರತ್ಕಲ್ ಬಂಟರ ಸಂಘದ ವತಿಯಿಂದ ಶಶಿಕಲಾ ಹೆಗ್ಡೆ ಕುತ್ತೆತ್ತೂರು ಮತ್ತು ನಾಗವೇಣಿ ಶೆಟ್ಟಿ ಕೃಷ್ಣಾಪುರ ಇವರ ಮಗಳ ಮದುವೆ ಕಾರ್ಯಕ್ಕೆ ಧನ ಸಹಾಯ ವಿತರಿಸಲಾಯಿತು. ಸುರತ್ಕಲ್ ಬಂಟರ ಸಂಘದಿಂದ ಎರಡು ಕುಟುಂಬಗಳಿಗೆ ತಲಾ 10ಸಾವಿರ, ಬಂಟರ ಮಾತೃ ಸಂಘ ದಿಂದ ಐದು ಸಾವಿರ ಹಾಗೂ ಬೆಂಗಳೂರು ಬಂಟರ ಸಂಘದಿಂದ ಕರಿಮಣಿ ಸರವನ್ನು ನೀಡಲಾಯಿತು.
ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ, ಮಹಿಳಾ ವೇದಿಕೆಯ ಅಧ್ಯಕ್ಷೆ ಆಶಾ ಆರ್ ಶೆಟ್ಟಿ, ಪದಾಧಿ ಕಾರಿಗ ಳಾದ ಸುಧಾಕರ್ ಪೂಂಜ, ಪ್ರವೀಣ್ ಶೆಟ್ಟಿ, ಸೀತಾರಾಮ ಶೆಟ್ಟಿ, ದೇವೇಂದ್ರ ಶೆಟ್ಟಿ, ಜಯರಾಮ ಶೆಟ್ಟಿ, ಗುಣಶೇಖರ ಶೆಟ್ಟಿ, ಪುಷ್ಪರಾಜ ಶೆಟ್ಟಿ, ಲೀಲಾಧರ ಶೆಟ್ಟಿ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.