ಉಳ್ಳಾಲ. ನ,19: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫ಼ೇಡರೇಶನ್ ಇದರ ವತಿಯಿಂದ ಇತ್ತೀಚೆಗೆ ಅಲ್ ಮದೀನಾ ಮಂಜನಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭೋತ್ಸವ ಸ್ಪರ್ಧೆಯಲ್ಲಿ ಅಳೇಕಲದ ರಫ಼ೀಕ್ ಹಾಗೂ ಝೊಹರಾ ದಂಪತಿ ಪುತ್ರರಾದ ಮಾಸ್ಟರ್‌ಮುಹಮ್ಮದ್ ಇಸ್ಥಿಹಾಕ್, ಅಬ್ದುಲ್ ಹಮೀದ್ ಹಾಗೂ ಮೈಮೂನ ದಂಪತಿ ಪುತ್ರರಾದ ಮಾಸ್ಟರ್‌ಮುಹಮ್ಮದ್ ಹಫ಼ೀಫ಼್ ಮತ್ತು ಮುಹಮ್ಮದ್ ಹನೀಫ಼್ ಹಾಗೂ ನಫ಼ೀಸಾ ದಂಪತಿ ಪುತ್ರರಾದ ಮಾಸ್ಟರ್‌ಮುಹಮ್ಮದ್ ನಈಮ್ ಹುಸೈನ್ ಪ್ರಥಮ ಸ್ಥಾನಗಳಿಸಿರುತ್ತಾರೆ ಎಂದು ಎಸ್ಸೆಸ್ಸೆಫ್ ಅಳೇಕಲ ಶಾಖೆಯ ಅಧ್ಯಕ್ಷರಾದ ಶಂಸುದ್ದೀನ್ ಅಳೇಕಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕನ್ನಡ ವಾರ್ತೆಗಳು