ವರದಿ : ಈಶ್ವರ ಎಂ. ಐಲ್/ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : “ಇಂದು ಅಮೂಲ್ಯ ಪತ್ರಿಕೆಯ 17ನೇ ಹುಟ್ಟುಹಬ್ಬ ಸಂಚಿಕೆಯನ್ನು ಬಿಡುಗಡೆ ಮಾಡಲು ಮುಖ್ಯ ಅತಿಥಿಯಾಗಿ ನನ್ನನ್ನು ನೀವೆಲ್ಲರೂ ಅತ್ಯಾದರದಿಂದ ಆಹ್ವಾನಿಸಿದ್ದೀರಿ. ಆದರೆನಿಜವಾಗಿಯೂನಾನುಅತಿಥಿಯಲ್ಲ, ನನ್ನಹಾಗೂಕುಲಾಲಸಂಘದಬಾಂಧವ್ಯಇಂದುನಿನ್ನೆಯದಲ್ಲ, ಅದುಡಾ. ಹೆಚ್.ಎಂ.ಸುಬ್ಬಯ್ಯ, ಆರ್.ಎಂ.ಮಡ್ವ, ಪಿ.ಕೆ. ಸಾಲ್ಯಾನ್ ಗಿರೀಶ್ ರವರು ಸಂಘದ ಅಧ್ಯಕ್ಷರಾಗಿದ್ದ ಸಮಯದಿಂದಲೇ ಆರಂಭವಾಗಿ ಇಂದಿನ ವರೆಗೂ ಮುಂದುವರಿದುಕೊಂಡು ಬಂದಿದೆ.ಆದ್ದರಿಂದ ನಾನೂ ನಿಮ್ಮವನೇ.ಇಂದು ಅಮೂಲ್ಯದ17ನೇ ವರ್ಷದ ಹುಟ್ಟುಹಬ್ಬ ಸಂಚಿಕೆಯನ್ನು ಬಿಡುಗಡೆ ಮಾಡಲು ತುಂಬಾ ಆನಂದವಾಗುತ್ತಿದೆ.
ಅಮೂಲ್ಯದ ಗುಣಮಟ್ಟ ಉತ್ತಮವಾಗಿದ್ದು ಉತ್ತಮ ಬರಹ, ಲೇಖನಗಳನ್ನು ಒಳಗೊಂಡಿದ್ದು ಪ್ರತಿಬಾರಿಯೂ ಉತ್ತಮ ಮುಖಪುಟದೊಂದಿಗೆ ಓದುಗರನ್ನು ಆಕರ್ಷಿಸುತ್ತಿದೆ. ಅಮೂಲ್ಯದ ಏಳಿಗೆ ಹಾಗೂ ಗುಣಮಟ್ಟ ಇನ್ನಷ್ಟು ಎತ್ತರಕ್ಕೆ ಏರುತ್ತಿರಲಿ ಎಂದು ಮನದಾಳದಿಂದ ಹಾರೈಸುತ್ತೇನೆ. ಕುಲಾಲ ಸಂಘವು ಹಮ್ಮಿಕೊಂಡಿರುವ ಬೃಹತ್ಯೋಜನೆಯಾದ ಮಂಗಳೂರು ಕುಲಾಲ ಭವನದ ಕಾರ್ಯಸಂಘದ ಸದಸ್ಯರೆಲ್ಲರೂ ಮನಸ್ಸು ಮಾಡಿ ಕೈಲಾದಷ್ಟು ದೇಣಿಗೆ ಅಥವಾ ಡಿಪಾಸಿಟ್ನೀಡಿ ಸಹಕರಿಸಿದರೆ ಪೂರ್ಣಗೊಳ್ಳಲು ಹೆಚ್ಚೇನೂ ವಿಳಂಬವಾಗಲಿಕ್ಕಿಲ್ಲ. ಆದರೆ ತುಂಬು ಮನಸ್ಸಿನಿಂದಮುಂದೆ ಬಂದು ಈ ಯೋಜನೆಯಲ್ಲಿ ಪಾಲ್ಗೊಳ್ಳುವ ಮನಸ್ಸು ಮಾಡಬೇಕಷ್ಟೆ. ಈ ಭವನದ ನಿರ್ಮಾಣದ ಉಪಯೋಗ ನಮಗೆ ಆಗುತ್ತದೋ ಇಲ್ಲವೋ ಆದರೆ, ನಮ್ಮ ಮುಂದಿನ ತಲೆಮಾರಿನ ಜನ ಖಂಡಿತಾ ಇದರ ಪ್ರಯೋಜನ ಪಡೆಯಲಿದ್ದಾರೆ” – ಹೀಗೆಂದು ನಾಸಿಕದಹೋಟೆಲ್ ಉದ್ಯಮಿ ಸಂಜೀವಕೆ.ಬಂಗೇರ ಅಮೂಲ್ಯ ಪತ್ರಿಕೆಯ 17ನೇ ಹುಟ್ಟುಹಬ್ಬದ ಸಂಚಿಕೆಯನ್ನು ಬಿಡುಗಡೆಗೊಳಿಸುತ್ತಾ ನುಡಿದರು.
ಕುಲಾಲಸಂಘ-ಮುಂಬಯಿಯ85ನೇ ವಾರ್ಷಿಕಮಹಾಸಭೆಯ ಸಂದರ್ಭದಲ್ಲಿ ಜರಗಿದ ಅಮೂಲ್ಯ” ಬಿಡುಗಡೆಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಹೀಗೆಂದು ಮಾತನಾಡುತ್ತಾ ಅವರು ಕುಲಾಲ ಸಂಘ ಹಾಗೂ ಅಮೂಲ್ಯಕ್ಕೆ ಶುಭಕೋರಿದರು.
ಶಂಕರ್ವೈ.ಮೂಲ್ಯರವರು ಅಧ್ಯಕ್ಷರು, ಮುಖ್ಯಅತಿಥಿ, ಸಂಪಾದಕ ಹಾಗೂ ಅಮೂಯ ಸಂಪಾದಕ ಮಂಡಳಿಯ ಸದಸ್ಯರನ್ನು ವೇದಿಕೆಗೆ ಆಹ್ವಾನಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಾಲ ಸಂಘ-ಮುಂಬಯಿಯ ಅಧ್ಯಕ್ಷ ಗಿರೀಸ್ ಸಾಲ್ಯಾನ್ ವಹಿಸಿದ್ದು ವೇದಿಕೆಯಲ್ಲಿ ಅಮೂಲ್ಯದ ಸಂಪಾದಕ ನಾರಾಯಣ ನೆತ್ರಕೆರೆ, ಉಪಸಂಪಾದಕ ಶಂಕರ್ ವೈ.ಮೂಲ್ಯ, ಪ್ರಕಾಶಕ ಡಿ. ಐ. ಮೂಲ್ಯ ಮತ್ತು ಸಂಪಾದಕ ಮಂಡಳಿಯ ಸದಸ್ಯರಾದ ಪಿ. ಶೇಖ ರ್ಮೂಲ್ಯ, ರಘುನಾಥ ಕರ್ಕೇರ, ಸೂರಜ್ ಹಂಡೆಲ್ ಹಾಗೂ ಆನಂದ್ ಬಿ. ಮೂಲ್ಯ ಉಪಸ್ಥಿತರಿದ್ದರು.
ನಾರಾಯಣ ನೆತ್ರಕೆರೆ ಸರ್ವರನ್ನೂ ಹಾರ್ದಿಕವಾಗಿ ಸ್ವಾಗತಿಸುತ್ತಾ, ಪ್ರಾಸ್ತಾವಿಕವಾಗಿ ಮಾತನಾಡಿ “ಅಮೂಲ್ಯ”ದ ಹುಟ್ಟು, ಅದು ನಡೆದು ಬಂದ ದಾರಿಯನ್ನು ವಿವರಿಸಿ ಇಂದಿಗೆ ಅಮೂಲ್ಯ ತುಳು ಕನ್ನಡಿಗರ ಸಾಹಿತ್ಯ ಬಳಗದಲ್ಲಿ ಒಂದು ಆಕರ್ಷಕ ಪತ್ರಿಕೆ ಯಾಗಿಬೆಳಗುತ್ತಿದೆ ಎಂದು ನುಡಿದರು. ಇದರ ಅಭಿವೃದ್ಧಿಯಲ್ಲಿ ಪಾಲುದಾರರಾದ ಎಲ್ಲಾ ಲೇಖಕರು, ಪ್ರೋತ್ಸಾಹಿಸಿದ ಜಾಹೀರಾತುದಾರರು, ಸದಸ್ಯರು ಮತ್ತು ಸಂಪಾದಕ ಮಂಡಳಿಯ ಸದಸ್ಯರ ಕೊಡುಗೆ ಅತ್ಯಮೂಲ್ಯ ಎಂದು ತಿಳಿಸಿ ಅಮೂಲ್ಯದ ಉಳಿವಿಗಾಗಿ ನಿಮ್ಮೆಲ್ಲರ ಸಹಕಾರವು,ಲೇಖನ, ಕಥೆ, ಸದಸ್ಯತನ ಹಾಗೂ ಜಾಹಿರಾತಿನ ರೂಪದಲ್ಲಿ ನಿರಂತರ ಹರಿದುಬರುತ್ತಿರಲಿ ಎಂದು ಆಶಿಸಿದರು.
ಅಧ್ಯಕ್ಷ ಸ್ಥಾನದಿಂದ ಗಿರೀಶ್ ಸಾಲ್ಯಾನ್ ಮಾತನಾಡಿ ಅಮೂಲ್ಯದ ಬೆಳವಣಿಗೆ, ಕುಲಾಲ ಸಂಘದ ಚಟುವಟಿಕೆ ಮತ್ತು ಮಂಗಳೂರಿನ ಕುಲಾಲ ಭವನ ನಿರ್ಮಾಣದ ಪ್ರಗತಿಯಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ, ಪ್ರತಿವರ್ಷದಂತೆ ನದೆದು ಕೊಂಡು ಬರುತ್ತಿರುವ ಹಾಗೂ ನಾಸಿಕದ ಉದ್ಯಮಿ ಸಂಜೀವ ಕೆ.ಬಂಗೇರರವರಿಂದ ಪ್ರಾಯೋಜಿತ “ಅಮೂಲ್ಯ ಮಕ್ಕಳ ಫೋಟೊ ಸ್ಪರ್ಧೆ”ಯ ವಿಜೇತರ ಯಾದಿಯನ್ನುಶಂಕರ್ ವೈ ಮೂಲ್ಯ ಓದಿ ಹೇಳಿ, ಸ್ಪರ್ಧೆಯಲ್ಲಿ ಜಯಗಳಿಸಿದ ಪುಟಾಣಿಗಳಿಗೆ ನಗದು ಬಹುಮಾನದ ಮೊತ್ತವನ್ನು ಸಂಜೀವ ಬಂಗೇರ ವಿತರಿಸಿದರು. ಶಂಕರ್ವೈ.ಮೂಲ್ಯರವರು ಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿ ಕೊನೆಯಲ್ಲಿ ಆಭಾರಮನ್ನಿಸಿದರು.