ಕನ್ನಡ ವಾರ್ತೆಗಳು

ನವತಿ ಸಂಭ್ರಮದಲ್ಲಿ ರಾಜ್ಯ ದೇವಾಡಿಗರ ಸಂಘ : ನ.22ರಂದು ನವೀಕೃತ ಹವಾನಿಯಂತ್ರಿತ ಸೌಧ ಉದ್ಘಾಟನೆ – ಡಾ| ಮೊಯ್ಲಿಯವರಿಗೆ ಪುರಸ್ಕಾರ – ಸ್ಮರಣ ಸಂಚಿಕೆ ಬಿಡುಗಡೆ

Pinterest LinkedIn Tumblr

Devadiga_navanti-press_1

ಮಂಗಳೂರು: ಕರ್ನಾಟಕ ರಾಜ್ಯ ದೇವಾಡಿದ ಸಂಘದ ನವತಿ ಸಂಭ್ರಮಾಚರಣೆಯು ನವಂಬರ್ 22ರಂದು ಆದಿತ್ಯವಾರ 10.30ಕ್ಕೆ ಮಣ್ಣಗುಡ್ಡೆ, ಗಾಂಧಿನಗರದಲ್ಲಿರುವ ದೇವಾಡಿಗರ ಸಮಾಜ ಭವನದಲ್ಲಿ ಜರಗಲಿದ್ದು, ಇದೇ ಸಂದರ್ಭದಲ್ಲಿ ದೇವಾಡಿಗರ ಸಂಘದ ನವೀಕೃತ ಹವಾನಿಯಂತ್ರಿತ ಸಮಾಜ ಭವನವನ್ನು ಮಾಜಿ ಕೇಂದ್ರ ಸಚಿವ ಡಾ| ವೀರಪ್ಪ ಮೊಯ್ಲಿ ಹಾಗೂ ಶ್ರೀಮತಿ ಮಾಲತಿ ವೀರಪ್ಪ ಮೊಯ್ಲಿ ದಂಪತಿಗಳು ಉದ್ಘಾಟಿಸಲಿರುವರು ಎಂದು ಸಂಘದ ಅಧ್ಯಕ್ಷ ಶ್ರೀ ವಾಮನ್ ಮರೋಳಿಯವರು ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ| ವೀರೇಂದ್ರ ಹೆಗ್ಗಡೆಯವರು ಸಭಾಧ್ಯಕ್ಷತೆ ವಹಿಸಲಿದ್ದು, ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಶಾಸಕ ಜೆ. ಆರ್. ಲೋಬೋ, ಎಂ. ಎಲ್.ಸಿ, ಐವನ್ ಡಿ’ಸೋಜಾ, ಮೇಯರ್ ಜೆಸಿಂತಾ ವಿಜಯ ಅಲ್ಫ್ರೇಡ್, ಕಾರ್ಪೊರೇಟರ್ ಜಯಂತಿ ಆಚಾರ್, ಎಸ್.ಡಿ.ಸಿ.ಸಿ ಅಧ್ಯಕ್ಷ ಎಂ. ಎನ್ ರಾಜೇಂದ್ರ ಕುಮಾರ್, ದುಬೈ ದೇವಾಡಿಗರ ಸಂಘದ ಅಧ್ಯಕ್ಷ ಹಾಗೂ ದುಬೈಯ ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್, ಕುವೆಂಪು ವಿವಿ ಶಿವಮೊಗ್ಗ ಇದರ ವಿಶ್ರಾಂತ ಕುಲಪತಿ ಡಾ| ಬಿ. ಎಸ್. ಶೇರಿಗಾರ್, ನ್ಯೂರೋ ಸರ್ಜನ್ ಡಾ| ಕೆ. ವಿ. ದೇವಾಡಿಗ, ವಿಶ್ವ ತುಳು ಒಕ್ಕೂಟದ ಅಧ್ಯಕ್ಷ ಶ್ರೀ ಧರ್ಮಪಾಲ. ಯು. ದೇವಾಡಿಗ ಮುಂತಾದವರು ಅತಿಥಿಗಳಾಗಿ ಭಾಗವಹಿಸಲಿರುವರು ಎಂದು ಅವರು ತೀಳಿಸಿದರು.

Devadiga_navanti-press_2 Devadiga_navanti-press_3 Devadiga_navanti-press_4 Devadiga_navanti-press_5 Devadiga_navanti-press_9 Devadiga_navanti-press_10

ಡಾ| ಮೊಯ್ಲಿಯವರಿಗೆ ಪುರಸ್ಕಾರ:

ಡಾ| ವೀರಪ್ಪ ಮೊಯ್ಲಿಯವರು ದೇವಾಡಿಗ ಸಮಾಜದ ಅಗ್ರಗಣ್ಯ ನಾಯಕರು. ಸಮಾಜದ ಬೆಳವಣಿಗೆಯಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಸಣ್ಣ ಕೈಗಾರಿಕ ಸಚಿವ ಖಾತೆಯಿಂದ ದೇಶದ ಕಾನೂನು ಖಾತೆಯವರೆಗೆ ಎಲ್ಲಾ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿದವರು. ಮುಖ್ಯ ಮಂತ್ರಿಯಾಗಿ ರಾಜ್ಯದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಹಲವು ಉಪಯುಕ್ತ ಕಾನೂನು ಜ್ಯಾರಿಗೆ ತಂದವರು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾಗಿ ದೇಶದ ಆಡಳಿತದಲ್ಲಿ ಮಾರ್ಗದರ್ಶನ ನೀಡಿ ರಾಜಕೀಯ ವಲಯದಲ್ಲಿ ಮನೆ ಮಾತಾದವರು. ಇದೀಗ ಅವರು ಬರೆದ ಮಹಾಕಾವ್ಯ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾನ್ ಕೃತಿಗೆ ಪ್ರತಿಷ್ಠಿತ ‘ಸರಸ್ವತಿ ಸಂಮಾನ್’ ಪ್ರಶಸ್ತಿಯು ದೊರೆತಿರುವುದನ್ನು ಗೌರವಿಸಲು, ಅವರನ್ನು ಪುರಸ್ಕರಿಸುವ ಕಾರ್ಯಕ್ರಮನ್ನು ಕೂಡ ಏರ್ಪಡಿಸಲಾಗಿದೆ ಎಂದು ವಾಮನ್ ಮರೋಳಿಯವರು ವಿವರಿಸಿದರು.

ಡಾ| ಶಿವರಾಮ ಶೆಟ್ಟಿ ಪ್ರಾಧ್ಯಾಪಕರು, ಮಂಗಳೂರು ವಿಶ್ವ ವಿದ್ಯಾಲಯ, ಡಾ| ಮೊಲಿಯವರ ಸಾಹಿತ್ಯ ವಿಮರ್ಶೆ ಮಾಡಲಿರುವರು. ಸಭಾಕಾರ್ಯಕ್ರಮದ ಬಳಿಕ ಸಮಾಜದ ಭಾಂದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅವರು ಮಾಹಿತಿ ನೀಡಿದರು.

ನವತಿ ಸಂಭ್ರಮದಲ್ಲಿ ರಾಜ್ಯ ದೇವಾಡಿಗರ ಸಂಘ :

1925ರಲ್ಲಿ ಸ್ಥಾಪಿಸಲ್ಪಟ್ಟ ದೇವಾಡಿಗ ಸಂಘವು ನವತಿ ಸಂಭ್ರಮದ ಸನಿಹದಲ್ಲಿದ್ದು ದೇವಾಡಿಗ ಈ ಸಂಘಟನೆಯು ತನ್ನೀ ೯೦ ವರ್ಷಗಳ ಅವಧಿಯಲ್ಲಿ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಾಮರಸ್ಯದಿಂದ ಬೆಳೆದು ಬಂದ ಒಂದು ಸಮುದಾಯ. ೯ ದಶಕಗಳ ಹಿಂದೆ ಸ್ಥಾಪಿಸಲ್ಪಟ್ಟ ಈ ಸಮಾಜ ಭವನವು ವಿವಿಧ ಕಾರ್ಯಗಳಿಗೆ ಸಮಾಜದ ಎಲ್ಲಾ ವರ್ಗದವರಿಗೆ ಕಡಿಮೆ ದರದಲ್ಲಿ ಒದಗಿ ಬರುತ್ತಿರುವ ಸಭಾ ಭವನವಾಗಿದೆ.

ಇದೀಗ ಆಧುನೀಕತೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಆಂತರಿಕ ವ್ಯವಸ್ಥೆಯನ್ನು ಹವಾನಿಯಂತ್ರಣದೊಂದಿಗೆ ಸಜ್ಜುಗೊಳಿಸಲಾಗಿದೆ. ಸಮಾಜಬಾಂಧವರಿಗೂ, ಎಲ್ಲಾ ಸಾಮಾಜಿಕರಿಗೂ ಕೈಗೆಟಕುವ ದರದಲ್ಲಿ ಒದಗಿಸಲಾಗುತ್ತಿದೆ. ಸುಮಾರು ೨೦ ವರ್ಷಗಳಿಂದ ನಡೆಯುತ್ತಿರುವ ಮಂಗಳ ವಿದ್ಯಾಕೇಂದ್ರವು ರಾಜ್ಯ ದೇವಾಡಿಗ ಸಂಘದ ಆಶ್ರಯದಲ್ಲಿ ಕಾರ್ಯಚರಿಸುತ್ತಿದ್ದು, ಇಲ್ಲಿ ಪ್ರೌಢಶಾಲೆಯವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದೆ.

Education to All ಎನ್ನುವ ಸರಕಾರದ ನೀತಿಯಂತೆ ಕಡು ಬಡವರಿಗೂ ಆಂಗ್ಲ ಮಾಧ್ಯಮ ಶಿಕ್ಷಣ ಒದಗುವಂತೆ ಶಿಕ್ಷಣ ನೀಡುವ ವ್ಯವಸ್ಥೆಯಲ್ಲಿ ಉದಾರ ನೀತಿಯನ್ನು ಅನುಸರಿಸಿ, ದೇಣಿಗೆ ರಹಿತ ಶಿಕ್ಷಣ ಒದಗಿಸಲಾಗುತ್ತದೆ. ಗುಣ ಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮೂಲಭೂತ ಸೌಲಭ್ಯಗಳೊಂದಿಗೆ ಒಳಾಂಗಣ ಕ್ರೀಡೆಗೆ ಅನುಕೂಲತೆಯನ್ನು ಒದಗಿಸಿದೆ. ಅದಕ್ಕೆ ಪೂರಕವಾಗುವಂತೆ ಮಂಗಳ ಸಾಂಸ್ಕೃತಿಕ ರಂಗ ಮಂದಿರವನ್ನು ಒದಗಿಸಲಾಗಿದೆ ಎಂದು ವಾಮನ್ ಮರೋಳಿಯವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಶ್ರೀ ಎಂ. ದೇವದಾಸ್, ಪದಾಧಿಕಾರಿಗಳಾದ ಶ್ರೀ ಸುಭಾಶ್ಚಂದ್ರ ಕಣ್ವತೀರ್ಥ, ಶ್ರೀ ಯಶವಂತ ದೇವಾಡಿಗ ಕದ್ರಿ ಹಾಗೂ ಶ್ರೀ ಕರುಣಾಕರ್ ಎಂ. ಎಚ್. ಉಪಸ್ಥಿತರಿದ್ದರು.

Write A Comment