ಮಂಗಳೂರು, ಡಿ.3: ಯೆನೆಪೊಯ ಯುನಿವರ್ಸಿಟಿಯ ಕುಲಪತಿ ಹಾಜಿ ವೈ.ಅಬ್ದುಲ್ಲ ಕುಂಞಿ ಅವರನ್ನು ಮಂಗಳೂರಿನ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ತಖ್ವಾ ಜುಮಾ ಮಸೀದಿ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಮೇಕ್ ಬಿಲ್ಡರ್ ಅಧ್ಯಕ್ಷ ಹಾಜಿ ಮುಹಮ್ಮದ್ ಅರಬಿ ವಹಿಸಿದ್ದರು. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ದುಆ ನೆರವೇರಿಸಿದರು. ಕೆನರಾ ಬ್ಯಾಂಕ್ ಸಲಹಾ ಸಮಿತಿಯ ಸದಸ್ಯ ಹಾಜಿ ಹಮೀದ್ ಕಂದಕ್ ಅವರು ಹಾಜಿ ವೈ.ಅಬ್ದುಲ್ಲ ಕುಂಞಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್‌ಎಂಆರ್ ರಶೀದ್ ಹಾಜಿ, ಹೈದರ್ ಪರ್ತಿಪಾಡಿ, ವೌಲಾನ ಅಬೂಸುಫಿಯಾನ್, ಅಬ್ದುಲ್ ರಶೀದ್ ಝೈನಿ, ಜಿಲ್ಲಾ ಸಣ್ಣ ಕೈಗಾರಿಕಾ ಸಮಿತಿಯ ಅಧ್ಯಕ್ಷ ನಝೀರ್ ಸುರತ್ಕಲ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಹಾಜಿ ರಿಯಾಝ್ ಬಾವ, ಶೌಕತ್ ಅಲಿ, ನ್ಯಾಯವಾದಿ ಬಶೀರ್ ಅಹ್ಮದ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್‌ನ ಉಪಾಧ್ಯಕ್ಷ ಬಿ. ಅಬ್ದುಲ್ ಅಝೀಝ್ ಹಸನ್ ಮತ್ತಿತರರು ಉಪಸ್ಥಿತರಿದ್ದರು.