ಕನ್ನಡ ವಾರ್ತೆಗಳು

ವಿಧಾನ ಪರಿಷತ್ ಚುನಾವಣೆ: ಅವಿಭಜಿತ ದ.ಕ.ದಲ್ಲಿ 14 ಅಭ್ಯರ್ಥಿಗಳಿಂದ 24 ನಾಮಪತ್ರ ಸಲ್ಲಿಕೆ – ಅಭ್ಯರ್ಥಿಗಳ ವಿವರ

Pinterest LinkedIn Tumblr

Nomination_Final_ 1

ಮಂಗಳೂರು, ಡಿ.10: ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಬುಧವಾರ ಅಂತಿಮ ದಿನವಾಗಿದ್ದು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಅವಿಭಜಿತ ದ.ಕ. ಜಿಲ್ಲೆಯ ಕ್ಷೇತ್ರದಿಂದ 14 ಅಭ್ಯರ್ಥಿಗಳು 24 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸೋಮವಾರ 6 ಅಭ್ಯರ್ಥಿಗಳಿಂದ 11 ನಾಮಪತ್ರಗಳು ಸಲ್ಲಿಕೆಯಾಗಿತ್ತು. ಮಂಗಳವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿರಲಿಲ್ಲ. ಬುಧವಾರ 8 ಅಭ್ಯರ್ಥಿಗಳಿಂದ ಒಟ್ಟು 11 ನಾಮಪತ್ರಗಳು ಸಲ್ಲಿಕೆಯಾಗಿವೆ. ಸೋಮವಾರ ನಾಮಪತ್ರ ಸಲ್ಲಿಸಿದ್ದ ಪ್ರತಾಪ್‌ಚಂದ್ರ ಶೆಟ್ಟಿ ಮತ್ತು ಪ್ರವೀಣ್‌ಚಂದ್ರ ಅವರು ಬುಧವಾರ ಮತ್ತೊಂದು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರಗಳ ಪರಿಷ್ಕರಣೆ ನಡೆಯಿತು. ಅಭ್ಯರ್ಥಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಕ್ರಮ ಬದ್ಧವಾಗಿ ನಾಮನಿರ್ದೇಶಿತರಾದ ಉಮೇದುವಾರ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆಗೊಳಿಸಿತ್ತು.

Nomination_Final_ 2

ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ 14 ಅಭ್ಯರ್ಥಿಗಳ ವಿವರ.

1. ಎಸ್.ಪ್ರಕಾಶ್ ಶೆಟ್ಟಿ – ಜನತಾದಳ (ಜಾತ್ಯಾತಿತ) / 2. ಕೆ.ಪ್ರತಾಪಚಂದ್ರ ಶೆಟ್ಟಿ – ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ / 3. ಪ್ರವೀಣ ಚಂದ್ರ – ಜನತಾದಳ (ಜಾತ್ಯಾತಿತ) / 4. ಕೋಟ ಶ್ರೀನಿವಾಸ ಪೂಜಾರಿ – ಭಾರತೀಯ ಜನತಾ ಪಕ್ಷ / 5. ಅಬ್ದುಲ್ ಜಲೀಲ್.  ಕೆ – ಪಕ್ಷೇತರ / 6. ಆಲ್ಫೋನ್ ಪ್ರಾಂಕೊ – ಪಕ್ಷೇತರ / 7. ಮು.ಇಕ್ಬಾಲ್ – ಪಕ್ಷೇತರ / 8 ಎ.ಎಂ. ಇಸ್ಮಾಯಿಲ್  – ಪಕ್ಷೇತರ / 9. ಜಯಪ್ರಕಾಶ ಹೆಗ್ಡೆ – ಪಕ್ಷೇತರ / 10. ಭುಜಂಗ ಶೆಟ್ಟಿ- ಪಕ್ಷೇತರ / 11. ಕೆ.ಹರಿಕೃಷ್ಣ ಬಂಟ್ವಾಳ – ಪಕ್ಷೇತರ / 12. ಕೆ.ಹರೀಶ್ ಕುಮಾರ್ – ಪಕ್ಷೇತರ / 13. ಶಂಕರ .ಎ.ಕುಂದರ್ – ಪಕ್ಷೇತರ / 14. ಸಂಜೀವ ಮಟಂದೂರು – ಪಕ್ಷೇತರ.

ನಾಮಪತ್ರ ಹಿಂಪಡೆಯಲು ದಿನಾಂಕ 12/12/2015ರಂದು ಕೊನೆ ದಿನ.

Write A Comment