ಕನ್ನಡ ವಾರ್ತೆಗಳು

5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಕಾಮುಕನ ಬಂಧನ

Pinterest LinkedIn Tumblr

gangrape

ಉಡುಪಿ: ಐದು ವರ್ಷದ ಬಾಲಕಿಗೆ ಲೈಂಗಿಕ ಪೀಡನೆ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 19 ವರ್ಷ ಪ್ರಾಯದ ಪ್ರಶಾಂತ್‌ ಎಂಬಾತನೇ ಬಂಧಿತ ಆರೋಪಿಯಾಗಿದ್ದು ಈತ ಅಲೆವೂರು ಪ್ರಗತಿನಗರದ ನಿವಾಸಿಯಾಗಿದ್ದು ಮೂಲತಃ ಹಾವೇರಿಯವನು.

ಡಿ.8 ರಂದು ಪ್ರಕರಣ ನಡೆದಿದ್ದು, ಯುವಕ ಬಾಲಕಿಯನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದ ಎನ್ನುವ ಬಗ್ಗೆ ಮಗುವಿನ ಪೋಷಕರು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವ್ರತ್ತಗೊಂಡ ಪೊಲೀಸರು ಡಿ. 11ರಂದು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ನ್ಯಾಯಾಲಯವು ಆರೋಪಿ ಪ್ರಶಾಂತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Write A Comment