ಕನ್ನಡ ವಾರ್ತೆಗಳು

ಬಾಜೀರಾವ್ ಮಸ್ತಾನೀ ಚಲನಚಿತ್ರದ ಮೇಲೆ ನಿರ್ಬಂಧ ಹೇರಿ; ಹಿಂದೂ ಜನಜಾಗೃತಿ ಸಮಿತಿ ಉಡುಪಿಯಲ್ಲಿ ಪ್ರತಿಭಟನೆ

Pinterest LinkedIn Tumblr

ಉಡುಪಿ: ತಮ್ಮ ಜೇಬು ತುಂಬಿ ಕೊಳ್ಳುವ ನೆಪದಲ್ಲಿ ಹಿಂದುಗಳ ಆದರ್ಶ ಕುಟುಂಬ ವ್ಯವೆಸ್ಥೆಗೆ ಧಕ್ಕೆ ಉಂಟುಮಾಡುವ ಕೆಲಸವನ್ನು ಲೀಲಾ ಭನ್ಸಾಲಿಯವರು ಬಾಜೀರಾವ್ ಮಸ್ತಾನಿ ಚಲನಚಿತ್ರದ ಟೈಲರ್‌ನಲ್ಲಿ ಮಾಡಿದ್ದಾರೆ ಅಪೂರ್ಣ ಮಾಹಿತಿಯಿಂದ ಸಿನಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಈ ಟ್ರೈಲರ್ ಆಗಿದೆ. ಕೇಂದ್ರ ಸರ್ಕಾರದ ಸಾಂಸ್ಕೃತಿಕ ಖಾತೆಗೆ ಇಗಾಗಲೇ ತಕರಾರು ನೀಡಿದ್ದು ಇತಿಹಾಸವನ್ನು ವಿಕೃತೀಕರಣವನ್ನು ತೆಗೆದು ಇಲ್ಲವೇ ಬಾಜೀರಾವ್ ಮಸ್ತಾನೀ ಚಲನಚಿತ್ರದ ಮೇಲೆ ನಿರ್ಬಂಧ ಹೇರಬೇಕೆಂದು ಹಿಂದು ಸಂಘಟನೆ ಭಾನುವಾರ ಕಾರ್ಯನಿರತ ಹಿಂದೂ ಜನಜಾಗೃತಿ ಸಮಿತಿಯು ಉಡುಪಿ ಕ್ಲಾಕ್ ಟವರ್ ಬಳಿ ಪ್ರತಿಭಟನೆಯಲ್ಲಿ ಮಾತನಾಡಿದರು.

Udupi_Janajagrati samiti_Protest

ಈ ಸಂದರ್ಭ ಮಾತನಾಡಿದ ಹಿಂದೂ ಜನ ಜಾಗೃತಿ ಸಮಿತಿ ರಾಮ ಶೆಟ್ಟಿಗಾರ ಅವರು, ಸಂಜಯ ಲೀಲಾ ಭನ್ಸಾಲಿಯವರು ಬಾಜೀರಾವ್ ಮಸ್ತಾನಿ ಚಲನಚಿತ್ರದ ಟೈಲರ್‌ನ್ ಪಿಂಗಾ ಪಿಂಗಾ ಹಾಡಿನಿಂದ ವಿಕೃತೀಕರಣ ಮಾಡಿದ್ದಾರೆ. ಅದೇ ಗೀತೆಯಲ್ಲಿ ಬಾಜೀರಾವ್ ಪತ್ನಿ ಕಾಶೀ ಬಾಯೀ ಮತ್ತು ಮಸ್ತಾನಿಯವರು ಒಟ್ಟಾಗಿ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ವಾಸ್ತವವಾಗಿ ಪೇಶ್ವೆಯರ ಸಮಕಾಲೀನ ರಾಜ ಮನೆತನ ಪರಂಪರೆಯ ಸ್ತ್ರೀಯರು ಕೈಯಲ್ಲಿ ಖಡ್ಗ ಹಿಡಿದು ಶತ್ರುಗಳನ್ನು ಕುಣಿಸುವಂತೆ ಮಾಡಿದ್ದಾರೆ ಹೋರತು ಅಂಗವಿಕ್ಷೇಪ ಮಾಡಿ ಕುಣಿಯುತ್ತಿರಲಿಲ್ಲ ಎಂದು ಹೇಳಿದರು.

ಜಾತ್ಯಾತೀತ ರಾಷ್ಟ್ರದಲ್ಲಿ ಅಲ್ಪ ಸಂಖ್ಯಾತರ ಓಲೈಕೆಗಾಗಿ ೧೯೮ ಕೋಟಿ ಸರಕಾರದ ಅನುದಾನದಲ್ಲಿ ಕೈಸ್ತರ ಹಬ್ಬವನ್ನು ಮಾಡಲು ತೆಲಂಗಾಣಾ ಸರಕಾರ ಮುಂದೆ ಬಂದಿದ್ದೆ.ಈ ಹಿಂದೆ ಸರಕಾರಿ ಖರ್ಚಿನಿಂದ ಮುಸಲ್ಮಾನರಿಗೆ ೨೬ ಕೋಟಿ ಉಡುಗೊರೆ ಘೋಷಣೆ ಮಾಡಿದೆ.ಇನೂಂದು ಕಡೆ ಗೋದಾವರಿ ಪುಷ್ಕರ ಯಾತ್ರೆ ಟಿಕೇಟುಗಳ ಬೆಲೆ ಹೆಚ್ಚಳ ಮಾಡಿದ್ದು ಅದರ ಮೇಲೆ ಕರ ಹೇರುತ್ತಿದೆ, ಇನ್ನೊಂದೆಡೆ ಅಲ್ಪ ಸಂಖ್ಯಾತ ಹಬ್ಬಗಳ ಆಚರಣೆಗೆ ಬಾರಿ ಮೊತ್ತದ ಅನುದಾನ ನೀಡುತ್ತಿದೆ. ಒಂದೇ ದೇಶದಲ್ಲಿದ್ದರೂ ವಿವಿಧ ಮತದ ಜನರಿಗೆ ಭಿನ್ನ ನ್ಯಾಯವೇಕೆ.? ಆದ್ದರಿಂದ ತೆಲಂಗಾಣ ಸರಕಾರವು ತನ್ನ ನಿರ್ಧಾರವನ್ನು ರದ್ದು ಮಾಡಬೇಕು ಎಂದು ಅವರು ಇದೇ ಸಂದರ್ಭ ಹೇಳಿದರು.

ಪ್ರತಿಭಟನೆಯಲಿ ಸತೀಶ್ ಕಿಣಿ,ಗೋಪಾಲ ಕೃಷ್ಣ, ವಿಜಯ ಕುಮಾರ ನ್ಯಾಯವಾದಿ ಉದಯ ಕುಮಾರ ಉಪಸ್ಥಿತರು

Write A Comment