ಉಡುಪಿ: ಪಡುಬಿದ್ರೆಯ ನಂದಿಕೂರು ಎಂಬಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಭಾನುವಾರ ತಡರಾತ್ರಿ ನುಗ್ಗಿದಕಳ್ಳರು ಎರಡು ಲಕ್ಷಕ್ಕೂ ಅಧಿಕ ಹಣ ದೋಚಿದ ಘಟನೆ ನಡೆದಿದ್ದು ಸೋಮವಾರ ಪ್ರಕರಣ ಬೆಳಕಿಗೆ ಬಂದಿದೆ.
ಶಾಖೆಯ ಕಟ್ಟದ ಹಿಂಬದಿಯ ಗಾಜನ್ನು ಒಡೆದು ಒಳನುಸುಳಿದ ಕಳ್ಳರು ಗ್ಯಾಸ್ ಕಟ್ಟರ್ ಮೂಲಕ ಕಪಾಟನ್ನು ಒಡೆದು 2 ಲಕ್ಷಕ್ಕೂ ಅಧಿಕ ಹಣ ದೋಚಿದ್ದಾರೆ. ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದ್ದು ಪೊಲೀಸರು ಆಗಮಿಸಿ ತನಿಖೆ ನಡೇಸುವ ವೇಳೆ ಸಮೀಪದ ರೈಲ್ವೇ ಹಳಿಯ ಆಸುಪಾಸಿನಲಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ನರು ಆಗಮಿಸಿ ಪರಿಶೀಲನೆ ನಡೆಸಿದ್ದು ತನಿಖೆ ಮುಂದುವರಿದಿದೆ.
ಸಿ.ಸಿ. ಕ್ಯಾಮೆರಾ ಇಲ್ಲ: ನಂದಿಕೂರಿನ ಸಿಂಡಿಕೇಟ್ ಬ್ಯಾಂಕ್ ಶಾಖೆಯಲ್ಲಿ ಯಾವುದೇ ಸೆಕ್ಯೂರಿಟಿ ಗಾರ್ಡ್ ನೇಮಿಸಿಲ್ಲ. ಅಲ್ಲದೇ ಸಿ.ಸಿ. ಕ್ಯಾಮೆರಾ ಅಳವಡಿಕೆಯನ್ನು ಮಾಡದಿರುವುದು ಭದ್ರತಾ ಲೋಪವನ್ನು ತೋರಿಸುತ್ತದೆ.
ಪಡುಬಿದ್ರೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.