ಕನ್ನಡ ವಾರ್ತೆಗಳು

ನಿಷ್ಠಾವಂತ ಅಧಿಕಾರಿಯ ವರ್ಗಾವಣೆ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

Pinterest LinkedIn Tumblr

Bajpe_offrs_protest_1

ಬಜ್ಪೆ,ಡಿ.14 : ಎಡಪದವು ಮೆಸ್ಕಾಂನ ಕಿರಿಯ ಇಂಜಿನಿಯರ್ ರಾಜಶೇಖರ್ ಅವರನ್ನು ಎಡಪದವಿನಿಂದ ವರ್ಗಾಯಿಸದಂತೆ ತೆಂಕ ಎಡಪದವು, ಬಡಗ ಎಡಪದವು ಹಾಗೂ ಕುಪ್ಪೆಪದವು ಗ್ರಾಮಸ್ಥರೆಲ್ಲಾ ಸೇರಿಕೊಂಡು ಎಡಪದವು ಮೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಚಿಕ್ಕನಂಜಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕಳೆದ ವರ್ಷದ ಹಿಂದೆ ಎಡಪದವು ಮೆಸ್ಕಾಂ ವ್ಯಾಪ್ತಿಯಲ್ಲಿ ಹಲವಾರು ವಿದ್ಯುತ್ ಸಮಸ್ಯೆಗಳು ತಲೆದೋರಿದ್ದವು. ವಿದ್ಯುತ್ ಸಮಸ್ಯೆಯಿಂದ ರೋಸಿಹೋಗಿದ್ದ ಗ್ರಾಮಸ್ಥರು ಹಲವಾರು ಗ್ರಾಮಸಭೆಗಳಲ್ಲಿ ಪ್ರಸ್ತಾಪಿಸುತ್ತಲೇ ಬಂದಿದ್ದರು. ಅಂತೆಯೇ ಕಳೆದ ವರ್ಷ ಎಡಪದವಿಗೆ ವರ್ಗಾವಣೆಗೊಂಡು ಬಂದಿದ್ದ ರಾಜಶೇಖರ್ ಅವರು ತೆಂಕ ಎಡಪದವು, ಬಡಗ ಎಡಪದವು ಹಾಗೂ ಕುಪ್ಪೆಪದವು ವ್ಯಾಪ್ತಿಗೆ ಸಂಬಂಧಪಟ್ಟ ಹಲವಾರು ವಿದ್ಯುತ್ ಸಮಸ್ಯೆಗಳನ್ನು ನಿವಾರಿಸಿ ಜನಮಣ್ಣನೆ ಗಳಿಸಿದ್ದರು.

ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದ್ದಾಗ ಗ್ರಾಮಸ್ಥರು ದೂರವಾಣಿಯಲ್ಲಿ ತಿಳಿಸಿದಾಗ ತಕ್ಷಣ ಸ್ಪಂದನೆ ನೀಡುವಂಥಾ ದಕ್ಷ ಅಧಿಕಾರಿ ಇಷ್ಟರತನಕ ಎಡಪದವಿಗೆ ಬರಲಿಲ್ಲ. ಇವರ ಕಾರ್ಯವೈಖರಿ ಕಂಡು ರಾಜಕೀಯ ಪ್ರಭಾವ ಬಳಿಸಿ ದುರುದ್ದೇಶದಿಂದ ಇವರ ವರ್ಗಾವಣೆಗೆ ಕುತಂತ್ರ ನಡೆದಿದೆ. ಆದ್ದರಿಂದ ರಾಜಶೇಖರ್ ಅವರ ವರ್ಗಾವಣೆಯನ್ನು ರದ್ದುಗೊಳಿಸಿ ಗ್ರಾಮಸ್ಥರಿಗೆ ನ್ಯಾಯ ಒದಗೊಸಿಕೊಡಬೇಕೆಂದಯ ಗ್ರಾಮಸ್ಥರಯ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಗ್ರಾಮಸ್ಥರ ಮನವಿಯನ್ನು ಸಹಾಯಕ ಕಾರ್ಯನಿರ್ವಾಹಕ ಇಂಜಿಯರ್ ತಿಮ್ಮಪ್ಪ ಗೌಡ ಮುಖಾಂತರ ವ್ಯವಸ್ಥಾಪಕ ನಿರ್ದೇಶಕರಿಗೆ ಸಲ್ಲಿಸಲಾಯಿತು. ಪ್ರತಿಭನಟನೆಯಲ್ಲಿ ಜಿ.ಪಂ ಸದಸ್ಯ ಜನಾರ್ದನ ಗೌಡ, ತಾ.ಪಂ ಉಪಾಧ್ಯಕ್ಷ ಪ್ರಕಾಶ್ ಗೌಡ, ಎಡಪದವು ಗ್ರಾ.ಪಂ. ಸದಸ್ಯೆ ಮಾಲತಿ, ಮುಚ್ಚೂರು ಗ್ರಾ.ಪಂ ಸದಸ್ಯ ವೀರಪ್ಪ ಗೌಡ, ಜನಜಾಗೃತಿ ಸಮಿತಿಯ ಚಂದ್ರಶೇಖರ್ ಎಸ್ ಸಹಿತ ಹಲವಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.

Write A Comment