ಕನ್ನಡ ವಾರ್ತೆಗಳು

ಮೂಢ ನಂಬಿಕೆ ಬಿತ್ತುವ ಪ್ರಯತ್ನ ಆರೋಪ : ಮಡೆ ಮಡೆಸ್ನಾನ ಆಚರಣೆ ನಿಲ್ಲಿಸಲು ಆಗ್ರಹ

Pinterest LinkedIn Tumblr

Made_sana_protest

ಬೆಳ್ತಂಗಡಿ: ವೈಜ್ಞಾನಿಕ ಯುಗದಲ್ಲಿಯೂ ಜನರನ್ನು ಮಡೆ ಮಡೆಸ್ನಾನದ ನೆಪದಲ್ಲಿ ಮೂಢ ನಂಬಿಕೆಗಳತ್ತ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಆಚರಣೆಗೆ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಡೆ ಮಡೆಸ್ನಾನ ಆಚರಣೆಯನ್ನು ನಿಲ್ಲಿಸಬೇಕು ಹಾಗೂ ಮೂಢನಂಬಿಕೆ ತಡೆ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿಯ ಮುಖಂಡ ಶೇಖರ ಎಲ್ ಒತ್ತಾಯಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಮಡೆಸ್ನಾನವನ್ನು ವಿರೋಧಿಸಿ ಬೆಳ್ತಂಗಡಿ ತಾಲೂಕು ಕಚೇರಿಯ ಎದುರು ದಲಿತ ಹಕ್ಕುಗಳ ಸಮಿತಿ ಹಾಗೂ ಇತರೆ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪ್ರತಿಭಟನ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಂಘಟನೆಗಳ ನಿಯೋಗದಿಂದ ತಹಶಿಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ವಸಂತ ನಡ, ಕಾರ್ಯದರ್ಶಿ ವಿಠಲ ಮಲೆಕುಡಿಯ, ಜಯಾನಂದ ಸವಣಾಲು, ಚಣಿಯಪ್ಪ ಧರ್ಮಸ್ಥಳ, ದಲಿತ ಹಕ್ಕುಗಳ ಸಮಿತಿಯ ಬಾಬು ಕೊಯ್ಯೂರು, ಈಶ್ವರಿ, ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Write A Comment