ಕನ್ನಡ ವಾರ್ತೆಗಳು

ಸೈಂಟ್ ಮೇರಿಸ್ ಕಾಲೇಜು ವಾರ್ಷಿಕೋತ್ಸವ; `ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತ ಮಾತೆಯ ಮಕ್ಕಳು’

Pinterest LinkedIn Tumblr

ಕುಂದಾಪುರ: ‘ನಾವೆಲ್ಲರೂ ಒಂದೇ, ನಾವೆಲ್ಲರೂ ಭಾರತ ಮಾತೆಯ ಮಕ್ಕಳು, ನಮಗೆಲ್ಲಾ ಒಂದು ಉತ್ತಮ ಸಮಾಜ ಕಟ್ಟುವ ಜವಾಬ್ದಾರಿ ಇದೆ. ಹಾಗಾಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣದ ಜೊತೆ ಉತ್ತಮ ಆಚಾರ ವಿಚಾರ ನೀತಿ, ಸಂಸ್ಕಾರಗಳ ಪಠಗಳನ್ನು ಹೇಳಿಕೊಟ್ಟು ಉತ್ತಮ ಸಮಾಜ ನಿರ್ಮಾಣ ಮಾಡ ಬೇಕು. ವಿಧ್ಯಾರ್ಥಿ, ಶಿಕ್ಷಕ ಮತ್ತು ಹೆತ್ತವರ ಸಹಕಾರ ಇವು ಮೂರು ಒಟ್ಟುಕೂಡಿದರೆ ಮಾತ್ರ ವಿಧ್ಯಾರ್ತಿ ಉನ್ನತಿಗೆರುತ್ತಾನೆಂದು’ ಉಡುಪಿ ಧರ್ಮ ಪ್ರಾಂತ್ಯದ ಚಾನ್ಸಲರ್ ವ|ಧರ್ಮಗುರು ವಾಲೇರಿಯನ್ ಮೆಂಡೊನ್ಸಾ, ಕುಂದಾಪುರ ನಗರದ ಹೆಸಾರಾಂತ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವನ್ನು ಬೆಲುನುಗಳನ್ನು ಹಾರಿ ಬಿಡುವ ಮೂಲಕ ಉದ್ಘಾಟಿಸಿ ಸಂದೇಶ ನೀಡಿದರು.

Kndpr_Saint Meris_Annual day (2) Kndpr_Saint Meris_Annual day (3) Kndpr_Saint Meris_Annual day (1)

ಗೌರವ ಅಥಿತಿಗಳಾಗಿ ಬಂದ ಜೆ.ಸಿ.ಐ. ನ ಮಾಜಿ ರಾಷ್ಟ್ರ ಪ್ರತಿನಿಧಿ ಮಂಜುಳ ಪ್ರಸಾದ ‘ನಮಗೆ ಸ್ವಸ್ಥ ಸಮಾಜವನ್ನು ನಿರ್ಮಿಸುವ ಹೊಣೆ ಇದೆ, ಈ ಕೆಲಸವನ್ನ್ನು ಶಿಕ್ಷಣ ಸಂಸ್ಥೆಗಳು ನೆಡಸ ಬೇಕು, ಈ ಕಾಲೇಜು ಎಲ್ಲಾ ರೀತಿಯಲ್ಲೂ ಮುಂದಿದೆ, ನಾಟಕ, ಸಾಂಸ್ಕ್ರತಿಕೆಗಳಲ್ಲಿ ಮುಂದಿದೆಯೆಂದು ನಾನೇ ಕಂಡೆ, ಅಲ್ಲದೆ ಶೈಕ್ಷಣಿವಾಗಿ, ಶೇಕಡಾ ೧೦೦ ಫಲಿತಾಂಶ ಪಡೆದಿದೆ, ಈ ಎಲ್ಲದರ ಹಿಂದೆ ಈ ಕಾಲೇಜಿನ ಪ್ರಾಂಶುಪಾಲರ ಜೊತೆ ಶಿಂಬದಿಯ ಸೇವೆಯೂ ಮೆಚ್ಚುವಂತದೆಂದು’ ಶ್ಲಾಘಿಸಿದರು.

ಸ೦ತ ಮೇರಿಸ್ ಸಮೂಹ ವಿಧ್ಯಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕುಂದಾಪುರ ಇಗರ್ಜಿಯ ವ|ಧರ್ಮಗುರು, ಅನೀಲ್ ಡಿಸೋಜಾ ಅಧ್ಯಕ್ಷತೆಯನ್ನು ವಹಿಸಿ ’ನಮ್ಮ ಸಂಸ್ಥೆಯಲ್ಲಿ ಎಲ್ಲರಿಗೂ ಸ್ವಾಗತವಿದೆ, ಆದರೆ ನೀತಿ, ನಿಯಮ, ಶಿಸ್ತುಗಳ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ, ಕೇವಲ ಶಿಕ್ಷಣ ಮಾತ್ರವಲ್ಲಾ, ಎಲ್ಲಾ ವಿಷಯಗಳನ್ನು ವಿಧ್ಯಾರ್ಥಿಗೆ ಹೇಳಿಕೊಟ್ಟು ಉತ್ತಮ ಪ್ರಜೆಯನ್ನಾಗಿ ಮಾಡಿಸುವುದೇ ನಮ್ಮ ಗುರಿ ಅನ್ನುತ್ತಾ ವಾರ್ಷಿಕೋತ್ಸವಕ್ಕ್ಕೆ ಅವರು ಶುಭ ನುಡಿದರು.

ವೇದಿಕೆಯಲ್ಲಿ ಸಂತ ಮೇರಿಸ್ ಶಿಕ್ಷಣ ಸಂಸ್ಥೆಯ ಎಲ್ಲಾ ಮುಖ್ಯಸ್ಥರು, ಧರ್ಮಗುರು ವ| ಪಾವ್ಲ್ ಪ್ರಕಾಶ್ ಡಿಸೋಜಾ, ಪಾಲನ ಮಂಡಳಿ ಕಾರ್ಯದರ್ಶಿ ಜೊನ್ಸನ್ ಆಲ್ಮೇಡಾ, ಶಿಕ್ಷಕ, ರಕ್ಷಕ ಸಂಘದ ಅಧ್ಯಕ್ಷ್ ಆಲ್ಫ್ರೆಡ್ ಕೋತ್ ಇವರೆಲ್ಲರೂ ಆಟ ಪಾಠಗಳಲ್ಲಿ ವೀಜೆತಾರಾದ ವಿಧ್ಯಾರ್ಥಿಗಳಿಗೆ ಬಹುಮಾನ ಹ೦ಚಿದರು. ಹಾಗೇ ಕಾಲೇಜಿಗೆ ಹೆಚ್ಚು ಅಂಕ ಗಳಿಸಿದ ವಿಧ್ಯಾರ್ಥಿನಿ ಮತ್ತು ಕಾಲೇಜಿಗೆ ದಾನ ನೀಡಿದವರನ್ನು ಸನ್ಮಾನಿಸಲಾಯಿತು. ಸಾಂಸ್ಕ್ರತಿಕ ಮತ್ತು ಇತರ ಚಟುವಟಿಕೆಗಳಲ್ಲಿ ಸಹಕಾರ ನೀಡಿದವರಿಗೆ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲಾರಾದ ವ|ಪ್ರವೀಣ್ ಅಮ್ರತ್ ಮಾರ್ಟಿಸ್ ಕಾಲೇಜಿನ ಸಾಧನೆಯ ಬಗ್ಗೆ ಪ್ರಾತ್ಯಕ್ಶಿತೆಯ ಮೂಲಕ ಚಿತ್ರಣ ನೀಡಿದರು. ವಿಧ್ಯಾರ್ಥಿ ಸಂಘದ ಅಧ್ಯಕ್ಷ ಭರತ್ವಾಜ್ ಉಪಸ್ಥಿತರಿದ್ದರು

ಸಾಂಸ್ಕ್ರತಿಕ ಕಾರ್ಯಕ್ರಮವಾಗಿ ಹಲವಾರು, ಹಾಡು, ನ್ರತ್ಯ, ರೂಪಕಗಳು ಪ್ರದರ್ಶನದ ಜೊತೆ ಕನ್ನಡ-ಕೊಂಕಣಿ ಬರಹಗಾರ ಬರ್ನಾಡ್ ಡಿಕೋಸ್ತಾರ ಸಂಸಾರಿಕ ಕಿರು ಹಾಸ್ಯಮಯ ನಾಟಕ ’ಹೆಣ್ಣು ಸಂಸಾರದ ಕಣ್ಣು’ ಪ್ರದರ್ಶಿಸಿಲಾಯಿತು.

ಉಪನ್ಯಾಸಕ ನಾಗರಾಜ್ ಶೆಟ್ಟಿ ಸ್ವಾಗತಿಸಿದರು, ಉಪನ್ಯಾಸಕರಾದ ಡೀಶೆಲ್ ಫೆರ್ನಾಂಡಿಸ್, ವಸಂತ್ ಶೆಟ್ಟಿ, ಬಿನು ಜಯ ಚಂದ್ರನ್,ರವಿ ಶೆಟ್ಟಿ, ಶರ್ಮಿಳ ಮಿನೇಜಸ್ ಮತ್ತು ಇತರರು ಕಾರ್ಯಕ್ರಮ ನೆಡಿಸಿಕೊಟ್ಟರು, ಉಪನ್ಯಾಸಕಿ ರೇಶ್ಮಾ ಫೆರ್ನಾಂಡಿಸ್ ಮುಖ್ಯ ಕಾರ್ಯಕ್ರಮ ನಿರ್ವಾವಕರಾಗಿದ್ದು, ಉಪ ಪ್ರಾಂಸುಪಾಲೆ ಮಂಜುಳಾ ನಾಯರ್ ವಂದಿಸಿದರು.

Write A Comment