ಕನ್ನಡ ವಾರ್ತೆಗಳು

ಆನೆಗುಡ್ದೆ ಶ್ರೀ ವಿನಾಯಕನಿಗೆ ಬ್ರಹ್ಮರಥೋತ್ಸವ ಸಂಭ್ರಮ; ದೇವಳದಲ್ಲಿ ಭಕ್ತಸಾಗರ

Pinterest LinkedIn Tumblr

ಕುಂದಾಪುರ: ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಬ್ರಹ್ಮರಥೋತ್ಸವ ಮತ್ತು ಅಷ್ಟೋತ್ತರ ನಾಳಿಕೇರ ಮಹಾಗಣಪತಿಯಾಗ ಮಂಗಳವಾರ ಸಂಭ್ರಮ ಹಾಗೂ ಸಡಗರದಿಂದ ಜರುಗಿತು.

ರಥೋತ್ಸವದ ದಿನವಾದ ಮಂಗಳವಾರ ಬೆಳಿಗ್ಗಿನಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನದ ಸುಮಾರಿಗೆ ನಡೆದ ಮಹಾಮಂಗಳಾರತಿ ಬಳಿಕ ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಪಾಲ್ಘೊಂಡರು. ಈ ಸಂದರ್ಭದಲ್ಲಿ ಆಗಮಿಸುವ ಎಲ್ಲಾ ಭಕ್ತರಿಗೂ ಪಾನಕ ಸೇವೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಅಲ್ಲದೇ ಗಣಹೋಮ ಮೊದಲಾದ ಧಾರ್ಮಿಕ ಕಾರ್ಯಗಳು ಶ್ರೀ ದೇವಳದಲ್ಲಿ ನಡೆದವು.

Aanegudde_Car Festival_2015 (17) Aanegudde_Car Festival_2015 (23) Aanegudde_Car Festival_2015 (24) Aanegudde_Car Festival_2015 (19) Aanegudde_Car Festival_2015 (21) Aanegudde_Car Festival_2015 (22) Aanegudde_Car Festival_2015 (1 (3) Aanegudde_Car Festival_2015 (8) Aanegudde_Car Festival_2015 (10) Aanegudde_Car Festival_2015 (12) Aanegudde_Car Festival_2015 (16) Aanegudde_Car Festival_2015 (14) Aanegudde_Car Festival_2015 (13) Aanegudde_Car Festival_2015 (11) Aanegudde_Car Festival_2015 (9) Aanegudde_Car Festival_2015 (15) Aanegudde_Car Festival_2015 (3) Aanegudde_Car Festival_2015 (26) Aanegudde_Car Festival_2015 (27) Aanegudde_Car Festival_2015 (1) Aanegudde_Car Festival_2015 (28) Aanegudde_Car Festival_2015 (2) Aanegudde_Car Festival_2015 (7) Aanegudde_Car Festival_2015 (5) Aanegudde_Car Festival_2015 (6) Aanegudde_Car Festival_2015 (25) Aanegudde_Car Festival_2015 (1 (1) Aanegudde_Car Festival_2015 (20) Aanegudde_Car Festival_2015 (1 (2) Aanegudde_Car Festival_2015 (18) Aanegudde_Car Festival_2015 (4)

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ.ಸೂರ್ಯನಾರಾಯಣ ಉಪಾಧ್ಯಾಯ, ಅನುವಂಶಿಕ ಧರ್ಮದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ಉಪಾಧ್ಯಾಯ, ಕೆ. ಶ್ರೀರಮಣ ಉಪಾಧ್ಯಾಯ ಹಾಗೂ ಅನುವಂಶಿಕ ಪರ್ಯಾಯ ಅರ್ಚಕ ಕೆ. ಶ್ರೀಧರ ಉಪಧ್ಯಾಯ ಹಾಗೂ ಅರ್ಚಕ ಮಂಡಳಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನಡೆದವು.

ಈ ಬಾರಿ ಶ್ರೀ ದೇವಳದಲ್ಲಿ ಹೂವಿನ ಅಲಂಕಾರ ಹಾಗೂ ವಿದ್ಯುತ್ ಅಲಂಕಾರ ವಿಶೇಷವಾಗಿತ್ತು. ಮೂರು ದಿನಗಳ ಕಾಲ ಕಟ್ಟೆ ಪೂಜೆಗಳು ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು.

ಕುಂದಾಪುರ ಪೊಲೀಸ್ ಠಾಣೆಯ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ., ಉಪನಿರೀಕ್ಷಕ ನಾಸೀರ್ ನೇತೃತ್ವದ ಭದ್ರತೆ ಹಾಗೂ ಸಂಚಾರಿ ಠಾಣೆಯ ಜಯ ಹಾಗೂ ಸಿಬ್ಬಂದಿಗಳು ಸಂಚಾರಿ ವ್ಯವಸ್ಥೆಯನ್ನು ನಿರ್ವಹಿಸಿದರು.

ನಾಳೆ(ಬುಧವಾರ) ಬೆಳಿಗ್ಗೆ ಚೂರ್ಣೋತ್ಸವ, ಅವಭೃತ ಸ್ನಾನ, ವಸಂತಾರಾಧನೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮ ಜರುಗಲಿದೆ.

ವರದಿ ಹಾಗೂ ಚಿತ್ರ- ಯೋಗೀಶ್ ಕುಂಭಾಸಿ

Write A Comment