ಕನ್ನಡ ವಾರ್ತೆಗಳು

ಕೇಬಲ್ ಸಂಪರ್ಕ ಡಿಜಿಟಲೀಕರಣ ಕಡ್ಡಾಯ – SET TOP BOX ಅಳವಡಿಸಲು ಡಿ.31 ಕೊನೆ ದಿನ : ಜಿಲ್ಲಾಧಿಕಾರಿ

Pinterest LinkedIn Tumblr

Dc_Ibrahim_Pics

ಮಂಗಳೂರು,ಡಿ.15: ಭಾರತ ಸರಕಾರವು ದೇಶದೆಲ್ಲೆಡೆ ಕೇಬಲ್ ಟಿವಿ ಡಿಜಿಟೈಸೇಷನ್ ನ್ನು ಕಡ್ಡಾಯಗೊಳಿಸಿದ್ದು, ಈಗಾಗಲೇ ಹಂತ 1 ಮತ್ತು ಹಂತ 2 (Phase I & Phase II) ಸಂಪೂರ್ಣಗೊಂಡಿರುತ್ತದೆ. ಈಗ ಕೇಂದ್ರ ಸರಕಾರವು ಹಂತ 3 (Phase III) ರಡಿಯಲ್ಲಿ ದೇಶದ ಎಲ್ಲಾ ನಗರ ಪ್ರದೇಶಗಳ ಮನೆಗಳಲ್ಲಿರುವ ಕೇಬಲ್ ಸಂಪರ್ಕವನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಿದೆ. ಈ ಮೂರನೇ ಹಂತವು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಹ ಒಳಗೊಂಡಿದೆ.

ಟಿ.ವಿ.ಒಪರೇಟರ್ ಗಳು ಒಂದು ಸಂಪರ್ಕದ ಹೆಸರಲ್ಲಿ ಐದಾರು ಮನೆಗಳಿಗೆ ಸಂಪರ್ಕ ನೀಡುವುದು, ಆ ಮೂಲಕ ಸರ್ಕಾರಕ್ಕೆ ತೆರಿಗೆ ಪಾವತಿಸಲು ತಪ್ಪಿಸುವುದನ್ನು ತಡೆಯುವುದು ಹಾಗೂ ಗುಣಮಟ್ಟದ ಟಿ.ವಿ.ಕಾರ್ಯಕ್ರಮ ಲಭಿಸುವಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಜಿಲ್ಲೆಯ ನಗರ ಪ್ರದೇಶಗಳಲ್ಲಿ ಕೇಬಲ್ ಟಿ.ವಿ. ಸಂಪರ್ಕ ಹೊಂದಿರುವ ಗ್ರಾಹಕರು SET TOP BOX (STP) ಹಾಕಿಸಿಕೊಳ್ಳಲು ಇದೇ ಡಿಸೆಂಬರ್ 31 ಕೊನೆಯ ದಿನಾಂಕವಾಗಿದೆ ಎಂದು ದ.ಕ.ಜಿಲ್ಲಾಧಿಕಾರಿಗಳು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Set_top_box_

ಕೇಬಲ್ ಟೆಲಿವಿಷನ್ ನೆಟ್ ವರ್ಕ್ಸ್ (ರೆಗ್ಯುಲೇಷನ್) ಅಮೆಂಡ್ ಮೆಂಟ್ ಆಕ್ಟ್ 2011 ರ ಪ್ರಕಾರ ಜಿಲ್ಲೆಯಲ್ಲಿ ಜಿಲ್ಲಾ ದಂಡಾಧಿಕಾರಿ ಯವರು/ ಪೊಲೀಸ್ ಆಯುಕ್ತರು/ಉಪ ವಿಭಾಗದ ದಂಡಾಧಿಕಾರಿಯವರು ಅಧಿಕೃತ ಅಧಿಕಾರಿಗಳಾಗಿದ್ದು, ನಿಗಧಿಪಡಿಸಿದ ದಿನಾಂಕದ ನಂತರವೂ Analogue Signal ಒದಗಿಸುತ್ತಿರುವ ಕೇಬಲ್ ಅಪರೇಟರ್ ಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಅಧಿಕಾರವನ್ನು ಹೊಂದಿರುತ್ತಾರೆ.

Digitization of Cable TV Network ಯೋಜನೆಗೆ ಅಪರ ಜಿಲ್ಲಾ ದಂಡಾಧಿಕಾರಿಯವರನ್ನು ನೋಡೆಲ್ ಅಧಿಕಾರಿಯನ್ನಾಗಿ ಸರಕಾರವು ನೇಮಕಗೊಳಿಸಿರುತ್ತದೆ. ಜಿಲ್ಲೆಯಲ್ಲಿರುವ ಎಲ್ಲಾ ಕೇಬಲ್ ಟಿ.ವಿ ಗ್ರಾಹಕರು ಸೇವೆ ನೀಡುತ್ತಿರುವ ಕೇಬಲ್ ಟಿ.ವಿ. ಅಪರೇಟರ್ ಗಳನ್ನು ಸಂಪರ್ಕಿಸಿ SET TOP BOX ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು.

ಹಾಗೆಯೇ ಕೇಬಲ್ ಟಿ.ವಿ ಅಪರೇಟರ್ ಗಳು ತಾವು ಹೊಂದಿರುವ Analogue Signal ನ್ನು ಡಿಜಿಟಲೀಕರಣಗೊಳಿಸಿ, ಗ್ರಾಹಕರಿಗೂ ಈ ಬಗ್ಗೆ ಮಾಹಿತಿ ಒದಗಿಸಿ SET TOP BOX ನ್ನು ಕಡ್ಡಾಯವಾಗಿ ಅಳವಡಿಸುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Write A Comment