ಮಂಗಳೂರು, ಡಿ.16: ದ.ಕ. ಜಿಲ್ಲಾ ನಿವೃತ್ತ ಸೈನಿಕ ಸಂಘದ ಆಶ್ರಯದಲ್ಲಿ ‘ವಿಜಯ ದಿವಸ್’ಆಚರಣೆಯನ್ನು ಬೆಳಗ್ಗೆ 9 ಗಂಟೆಗೆ ನಗರದ ಕದ್ರಿ ಹಿಲ್ಸ್‌ನಲ್ಲಿರುವ ಯೋಧರ ಯುದ್ಧ ಸ್ಮಾರಕದಲ್ಲಿ ನಡೆಸಲಾಯಿತು.
1971ರ ಡಿ.16ರಂದು ಭಾರತವು ಪಾಕಿಸ್ತಾನದ ಮೇಲೆ ವಿಜಯ ಸಾಧಿಸಿದ ದಿನವಾಗಿದ್ದು, ಈ ನಿಟ್ಟಿನಲ್ಲಿ ಭಾರತೀಯ ವೀರ ಯೋಧರು ಮಾಡಿದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುವ ಸಲುವಾಗಿ ಪ್ರತಿವರ್ಷ ವಿಜಯ ದಿವಸ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ವಿಕ್ರಮ್ ದತ್ತ ಹೇಳಿದರು.
ಈ ವಿಜಯ್ ದೀವಸ್ ನ್ನು ಲಯನ್ಸ್ ಕ್ಲಬ್ ಜಿಲ್ಲೆ 117-ಡಿ, ಮತ್ತು ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಟ್ರಸ್ಟ್‌ನ ಸಂಯುಕ್ತ ಆಶ್ರಯದಲ್ಲಿ ನಡೆಸಲಾಯಿತು.
ಬ್ರಿಗೇಡಿಯರ್ ಐ. ಎನ್. ರೈ , ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಎಸ್.ಪಿ.ಡಾ.ಶರಣಪ್ಪ, ಉಪಕಮೀಷನರ್ ಶಾಂತರಾಜು, ಪಾಲಿಕೆ ಉಪ ಆಯುಕ್ತ, ಗೋಕುಲ್ ದಾಸ್, ವಿಜಯ್ ವಿಠಲ್ ನಾಥ್ ಶೆಟ್ಟಿ, ಸಂಘದ ಅಧ್ಯಕ್ಷ ವಿಕ್ರಮ್ ದತ್ತ, ಸಂಘದ ಪದಾಧಿಕಾರಿ ಕರ್ನಲ್ ಎನ್. ಶರತ್ ಭಂಡಾರಿ ಮೊದಲಾದ ಗಣ್ಯರಿಂದ ಯುದ್ಧ ಸ್ಮಾರಕಕ್ಕೆ ಹೂಹಾರ, ಹೂಗುಚ್ಛಗಳನ್ನು ಅರ್ಪಿಸಿ ಪ್ರಾರ್ಥನೆಯೊಂದಿಗೆ ನಮನ ಸಲ್ಲಿಸಲಾಯಿತು