ಕನ್ನಡ ವಾರ್ತೆಗಳು

`ಕಾಳಾವರ ಕಾಳಿಂಗನಿಗೆ ಷಷ್ಠಿ ಸಂಭ್ರಮ’; ಮಕ್ಕಳಿಲ್ಲದ ಕೊರಗಿಗೆ ಕಾಳಾವರದ ಕಾಳಿಂಗ ದೇವರ ದರ್ಶನ ಪರಿಹಾರ

Pinterest LinkedIn Tumblr

ಕುಂದಾಪುರ: ಕರಾವಳಿಯಲ್ಲಿ ನಾಗನಿಗೆ ಸಲ್ಲುವಷ್ಟು ಹರಕೆ ಸೇವೆಗಳು ಮತ್ತೆ ಎಲ್ಲಿಯೂ ಸಲ್ಲುವುದಿಲ್ಲ ಎಂಬುವುದಕ್ಕೆ ಕುಂದಾಪುರ ತಾಲೂಕಿನ ಕೋಟೇಶ್ವರ ಬೈಪಾಸ್ ನಿಂದ ೩ ಕಿ.ಲೋ ಮೀಟರ್ ದೂರದಲ್ಲಿರುವ ಕಾಳಾವರ ಶ್ರೀ ಕಾಳಿಂಗ ದೇವರ ಸನ್ನಿಧಿ ಸಾಕ್ಷಿ. ಪ್ರಮುಖ ಮೂಲಸ್ಥಾನವಾಗಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬಿಟ್ಟರೆ 2ನೇ ಮೂಲಸ್ಥಾನ ಎಂಬ ಹೆಗ್ಗಳಿಕೆ, ಪುರಾತನ ವೈಶಿಷ್ಟತೆ ಪಡೆದ ದೇವಸ್ಥಾನವೇ ಕುಂದಾಪುರ ತಾಲೂಕಿನ ಕಾಳಾವರದ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನ.

Kalavara_Subramanya Shasti_2015 (34) Kalavara_Subramanya Shasti_2015 (38) Kalavara_Subramanya Shasti_2015 (31) Kalavara_Subramanya Shasti_2015 (26) Kalavara_Subramanya Shasti_2015 (30) Kalavara_Subramanya Shasti_2015 (36) Kalavara_Subramanya Shasti_2015 (32) Kalavara_Subramanya Shasti_2015 (37) Kalavara_Subramanya Shasti_2015 (33) Kalavara_Subramanya Shasti_2015 (28) Kalavara_Subramanya Shasti_2015 (24) Kalavara_Subramanya Shasti_2015 (35)

Kalavara_Subramanya Shasti_2015 (2)

Kalavara_Subramanya Shasti_2015 (25)

Kalavara_Subramanya Shasti_2015 (4)

Kalavara_Subramanya Shasti_2015 (27) Kalavara_Subramanya Shasti_2015 (29) Kalavara_Subramanya Shasti_2015 (19) Kalavara_Subramanya Shasti_2015 (14) Kalavara_Subramanya Shasti_2015 (15) Kalavara_Subramanya Shasti_2015 (20) Kalavara_Subramanya Shasti_2015 (21) Kalavara_Subramanya Shasti_2015 (16) Kalavara_Subramanya Shasti_2015 (22) Kalavara_Subramanya Shasti_2015 (23) Kalavara_Subramanya Shasti_2015 (18) Kalavara_Subramanya Shasti_2015 (17) Kalavara_Subramanya Shasti_2015 (5) Kalavara_Subramanya Shasti_2015 (6) Kalavara_Subramanya Shasti_2015 (9) Kalavara_Subramanya Shasti_2015 (11) Kalavara_Subramanya Shasti_2015 (12) Kalavara_Subramanya Shasti_2015 (13) Kalavara_Subramanya Shasti_2015 (7) Kalavara_Subramanya Shasti_2015 (8) Kalavara_Subramanya Shasti_2015 (10) Kalavara_Subramanya Shasti_2015 (3) Kalavara_Subramanya Shasti_2015 (1)

ಇತಿಹಾಸ: ಎಂಟು ಶತಮಾನಗಳ ಹಿಂದೆ ಇಲ್ಲಿ ಈಶ್ವರ ದೇವಸ್ಥಾನ ಇತ್ತೆಂಬುದಕ್ಕೆ ಹಳೆಯ ಶಿಲಾ ಶಾಸನಗಳು ಸಾಕಿ ನುಡಿಯುತ್ತವೆ. ಈಶ್ವರ ದೇವಸ್ಥಾನದ ಬಲಭಾಗದಲ್ಲಿ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನವಿದೆ. ಸುಮಾರು 500 ವರ್ಷಗಳ ಇತಿಹಾಸ ಸಾರುವ ಕಾಳಾವರ ಶ್ರೀ ಕಾಳಿಂಗ ದೇವಸ್ಥಾನಕ್ಕೆ ಕಕ್ಕೆ ಶ್ರೀ ಸುಬ್ರಹ್ಮಣ್ಯದಿಂದ ಕಾಳಿಂಗ ಸರ್ಪವೊಂದು ತೆವಳುತ್ತಾ ಇಲ್ಲಿ ಬಂದು ನೆಲೆ ನಿಂತ ಸ್ಥಳಕ್ಕೆ ಕಾಳಾವರ ಎಂಬ ಹೆಸರು ಬರುವುದಕ್ಕೆ ಕಾರಣವಾಗಿದೆ ಎಂಬುವುದು ಪ್ರತೀತಿ. ಇದಕ್ಕೆ ಸಾಕ್ಷಿಯೆಂಬಂತೆ ದೇವಸ್ಥಾನದ ಒಂದೂವರೆ ಕಿ.ಮೀ. ದೂರದಲ್ಲಿ ಹಾವು ತೆವಳಿದಂತಿರುವ ಹೊಳೆ ಹಾಗು ಉದ್ಭವಗೊಂಡಿರುವ ಸ್ಥಳದಲ್ಲಿ ಬಾವಿಯಾಕಾರದ ಹೊಂಡ ಕಣ್ಣಿಗೆ ಕಾಣಸಿಗುತ್ತದೆ! ಅಲ್ಲದೇ ಕಾಳಿಂಗ ದೇವರ ಹಿಂಗದಿಯಲ್ಲಿ ಮುನಿಯೊಬ್ಬರು ತಪಸ್ಸು ಮಾಡಿದ್ದರೆನ್ನಲಾದ ಬಾವಿಯೊಂದರಲ್ಲಿ ಹುತ್ತ ಬೆಳೆದು ನಿಂತಿದೆ.

ಕಾಳಾವರದ ಕಾಳಿಂಗ(ಸುಬ್ರಹ್ಮಣ್ಯ) ದೇವಸ್ಥಾನದಲ್ಲಿ ಬಂದು ದೇವರಿಗೆ ಹರಕೆ ಹೊತ್ತುಕೊಂಡರೆ ಸಂತಾನ ಭಾಗ್ಯ ದೊರೆಯದವರಿಗೆ ಮಕ್ಕಳಾಗುತ್ತವೆ. ಚರ್ಮರೋಗ ಮೊದಲಾದ ವ್ಯಾಧಿಗಳಿಂದ ಮುಕ್ತಿ ಪಡೆಯುತ್ತಾರೆ ಎನ್ನುವ ನಂಬಿಕೆ ಭಕ್ತರದ್ದು.

ಹರಕೆ ಸಂಪ್ರದಾಯ: ಸಂತಾನಕಾರಕನಾದ ಸುಬ್ರಮಣ್ಯನಿಗೆ ವಿವಾಹ ಸಂಭಂದಿ, ಸಂತಾನ ಸಂಭಂದಿ, ಚರ್ಮಾಧಿ ರೋಗರುಜಿನಗಳ ಸಂದರ್ಭದಲ್ಲಿ ದೇವರಿಗೆ ಹೇಳಿಕೊಂಡ ಹರಕೆಯನ್ನು ಷಷ್ಠಿಯ ದಿನ ಸಮರ್ಪಿಸುತ್ತಾರೆ. ನಾಗ(ಸುಬ್ರಮಣ್ಯನಿಗೆ) ಶೃಂಗಾರ ಪುಷ್ಪ ಪ್ರಿಯವಾದುದಾಗಿದ್ದು ಭಕ್ತರು ಶೃಂಗಾರ ಪುಷ್ಪವನ್ನು ಸಮರ್ಪಿಸುತ್ತಾರೆ. ಅಲ್ಲದೇ ಚರ್ಮ ರೋಗ, ಹಲ್ಲು ನೋವು, ಕಣ್ಣು ನೋವು, ಗಂಟು ನೋವು ಮುಂತಾದ ರೋಗಬಾಧೆಗಳಿಗೆ ಬೆಳ್ಳಿಯ ನಾನಾ ಆಕಾರದ ಆಕ್ರತಿಗಳನ್ನು ದೇವರಿಗೆ ಸಮರ್ಪಿಸಿ ದೇವರಿಗೆ ಸಮರ್ಪಿಸುವುದರ ಮೂಲಕ ಹರಕೆ ಸಲ್ಲಿಸುತ್ತಾರೆ. ಈ ದಿನದಂದು ಕ್ಷೇತ್ರದಲ್ಲಿ ಅನೇಕ ಮಂದಿ ಬೆಳ್ಳಿ ತುಣುಕುಗಳನ್ನು ಮಾರುವ ಸಂಪ್ರದಾಯವಿದೆ. ಈ ಹರಕೆಗಳನ್ನು ಹಾಗೂ ಶೃಂಗಾರ ಬಾಳೆಹಣ್ಣು ಮೊದಲಾದವುಗಳನ್ನು ದೇವರಿಗೆ ಸಮರ್ಪಿಸಿದರೆ ನಾಗದೋಷ ಪರಿಹಾರವಾಗುತ್ತದೆಂಬ ನಂಬಿಕೆ ಇಲ್ಲಿಗೆ ಆಗಮಿಸುವ ಭಕ್ತರದ್ದು.
ಷಷ್ಠಿ ದಿನದಂದು ಹಲವರ ಮನೆಯಲ್ಲಿ ಕುಂಬಳಕಾಯಿ ಹಾಗೂ ಹರಿವೆಯಿಂದ ತಯಾರಿಸಿದ ಅಡುಗೆ ತಯಾರಿಸುವ ರೂಢಿಯೂ ಇದೆ.

ಇಂದು ಚಂಪಾ ಷಷ್ಟಿ: ಇಂದಿನಿಂದ ಎರಡು ದಿನಗಳ ಕಾಲ ಸುಬ್ರಹ್ಮಣ್ಯ ದೇವಸ್ಥಾನದ ರೀತಿಯಲ್ಲಿಯೇ ಚಂಪಾ ಷಷ್ಟಿ ಉತ್ಸವ ನಡೆಯುತ್ತದೆ. ರಾಜ್ಯ ಬೇರೆ ಬೇರೆ ಊರುಗಳಿಂದ ಭಕ್ತರು ಇಲ್ಲಿಗೆ ಬಂದು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಸಂದರ್ಭದಲ್ಲಿ ಮಹಾ ಪೂಜೆ, ಪಂಚಾಮೃತ, ಮುಡಿ ಪ್ರದಕ್ಷಿಣೆ, ಶುದ್ಧ ಕಲಶ, ಈಶ್ವರನಿಗೆ ರುದ್ರಾಭಿಶೇಕ, ಉರುಳು ಸೇವೆ, ತುಲಾಭಾರ, ಆಶ್ಲೇಷ ಬಲಿ, ನಾಗಮಂಡಲ, ಹೂ-ಕಾಯಿ ಅರ್ಪಣೆ, ನಾಗಸಂಸ್ಕಾರ ಮುಂತಾದ ಸೇವೆಗಳು ಭಕ್ತಾಧಿಗಳಿಂದ ನಡೆಯುತ್ತಿದೆ.

ಕಾಳಾವರ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ದಿನವಾದ ಗುರುವಾರ ಷಷ್ಠಿ ಮಹೋತ್ಸವ ಸಂಭ್ರಮದಿಂದ ಜರುಗಿತು. ದೇವಸ್ಥಾನದಲ್ಲಿ ಬೆಳಿಗ್ಗೆ ೩ ಗಂಟೆಯಿಂದಲೇ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ಹರಕೆ ಸಮರ್ಪಿಸಿದರು.

ಈ ದಿನ ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆಗಮಿಸುವ ಭಕ್ತರು ಹಣ್ಣು ಕಾಯಿ, ಹೂ ಕಾಯಿ, ಕಲಶ ಸೇವೆ, ಮಂಗಳಾರತಿ, ಹರಕೆ ಸಮರ್ಪಣೆಯ ಧಾರ್ಮಿಕ ವಿಧಾನಗಳಿಗಾಗಿ ದೇವಸ್ಥಾನದಿಂದ ಹಲವು ಕಿ.ಮೀ. ದೂರದಲ್ಲೇ ಸರತಿ ಸಾಲಿನಲ್ಲಿ ಕಾದು ನಿಂತ ದೃಶ್ಯ ಸಾಮಾನ್ಯವಾಗಿರುತ್ತದೆ. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಜನ ಪಾಲ್ಘೊಳ್ಳುತ್ತಾರೆ. ಶುಕ್ರವಾರದಂದು ಹಾಲಿಟ್ಟು ಸೇವೆ, ಮಂಡಲ ಸೇವೆ ಹಾಗೂ ತುಲಾಭಾರ ಸೇವೆ ಜರುಗಲಿದೆ.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Write A Comment