ಕನ್ನಡ ವಾರ್ತೆಗಳು

ಛಿದ್ರಗೊಂಡ ಶವ ಯುವಕನದ್ದು :ವಿಧಿ ವಿಜ್ಞಾನ ಪರೀಕ್ಷಾ ವರದಿ ಬಹಿರಂಗ

Pinterest LinkedIn Tumblr

puttur_secliten_found_2

ಪುತ್ತೂರು, ಡಿ.17:ಇಲ್ಲಿನ ಮುಂಡೂರು ಗ್ರಾಮ ಪಂಜಾಯತ್ ವ್ಯಾಪ್ತಿಯ ಸರ್ವೆ ಭಕ್ತಕೋಡಿ ಹಾಗೂ ಪರನೀರು ಪರಿಸರದಲ್ಲಿ ಗೋಣಿಚೀಲದಲ್ಲಿ ಪತ್ತೆಯಾದ ಮಾನವ ದೇಹದ ಅವಶೇಷಗಳು ಯುವಕನದ್ದು ಎಂದು ವಿಧಿ ವಿಜ್ಞಾನ ಪರೀಕ್ಷಾ ವರದಿ ಬಹಿರಂಗಗೊಳಿಸಿದೆ.

ಸುಮಾರು 25ರಿಂದ 35 ವರ್ಷ ಪ್ರಾಯದ ಯುವಕನ ಮೃತದೇಹ ಇದಾಗಿದ್ದು. ಈ ಯುವಕ ಸುಮಾರು 5.6 ಅಡಿ ಎತ್ತರವಿರಬೇಕು ಎಂದು ಅಂದಾಜಿಸಲಾಗಿದೆ.

ಪ್ರತ್ಯೇಕ ಸ್ಥಳಗಳಲ್ಲಿ ಗೋಣಿ ಚೀಲದಲ್ಲಿ ತುಂಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿರುವ ಈ ಮಾನವ ತಲೆಬುರುಡೆ, ಕೈ ಕಾಲು ಮೂಳೆಗಳು ವ್ಯಾಪಕ ಕುತೂಹಲ ಹುಟ್ಟಿಹಾಕಿದ್ದು, ಇದೀಗ ಮೃತಪಟ್ಟ ಯುವಕ ಯಾರು? ಮೃತಪಟ್ಟ ರೀತಿ ಹೇಗೆ? ಎಂಬ ಬಗ್ಗೆ ಸ್ಥಳೀಯರಲ್ಲಿ ವ್ಯಾಪಕ ಚರ್ಚೆಗಳು ಕೇಳಿ ಬಂದಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಇದೊಂದು ವ್ಯವಸ್ಥಿತ ಕೊಲೆ ಎಂಬ ಸಂಶಯ ವ್ಯಕ್ತಪಡಿಸಿದ್ದು, ಈಗಾಗಲೇ ವಿವಿಧ ಆಯಾಮಗಳಲ್ಲಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ನಡುವೆ ಮಂಗಳವಾರ ಸ್ಥಳಕ್ಕಾಗಮಿಸಿ ಈ ಅವಶೇಷಗಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ದಿದ್ದ ಅಪರಾಧ ವಿಧಿವಿಜ್ಞಾನ ತಜ್ಞರು ಇದೀಗ ಪರೀಕ್ಷೆಗಳ ಬಳಿಕ ಈ ಮಾಹಿತಿ ಬಹಿರಂಗಪಡಿಸಿದ್ದು, ಪೊಲೀಸ್ ತನಿಖೆಗೆ ಹೊಸ ಆಯಾಮ ಸಿಕ್ಕಿದೆ. ಈ ಅವಶೇಷಗಳು ಸಿಕ್ಕಿದ ಸ್ಥಳದಲ್ಲಿ ರಕ್ತದ ಕಲೆಗಳಿಲ್ಲದಿದ್ದರೂ ಟೀಶರ್ಟ್ ಹಾಗೂ ಬೆಲ್ಟ್‍ನ ತುಂಡೊಂದು ಸಿಕ್ಕಿದ್ದು, ಇವುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ದ.ಕ. ಜಿಲ್ಲಾ ಎಸ್ಪಿ ಡಾ. ಶರಣಪ್ಪ ಎಸ್. ಡಿ. ನಿರ್ದೇಶನದಲ್ಲಿ ಪುತ್ತೂರು ಗ್ರಾಮಾಂತರ ಠಾಣೆ ಎಸ್ಸೈ ರವಿ ಬಿ.ಎಸ್. ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು ಶೀಘ್ರವೇ ಪ್ರಕರಣ ಬೇಧಿಸುವ ವಿಶ್ವಾಸವನ್ನು ಪೊಲೀಸರು ಹೊಂದಿದ್ದಾರೆ.

Write A Comment