ಕನ್ನಡ ವಾರ್ತೆಗಳು

ಕಳವು ಪ್ರಕರಣದ ಇಬ್ಬರು ಆರೋಪಿಗಳ ಬಂಧನ : 2.10 ಲಕ್ಷ ರೂ. ವೌಲ್ಯದ ಸೊತ್ತು ವಶ

Pinterest LinkedIn Tumblr

padubider_theft_arest

ಪಡುಬಿದ್ರೆ, ಡಿ.19: ಬೈಕ್‌ ಕಳವು ಹಾಗೂ ಮೊಬೈಲ್ ಅಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪಡುಬಿದ್ರೆ ಪೊಲೀಸರು ಬಂಧಿಸಿದ ಘಟನೆ ಶುಕ್ರವಾರ ಮುದರಂಗಡಿ ಬಳಿ ನಡೆದಿದೆ. ಬಂಧಿತರನ್ನು ಕಂಚಿನಡ್ಕ ನಿವಾಸಿಗಳಾದ ಮುಹಮ್ಮದ್ ಕೌಶಿಕ್ ಯಾನೆ ತೌಸಿಫ್ (19) ಹಾಗೂ ಮುಹಮ್ಮದ್ ಪೈಝಲ್ ಯಾನೆ ಪೀರು (19) ಎಂದು ಗುರುತಿಸಲಾಗಿದೆ.

padubider_theft_arest_1

ಘಟನೆ ವಿವರ :
ಶುಕ್ರವಾರ ಮುಂಜಾನೆ 4 ಗಂಟೆಗೆ ಮುದರಂಗಡಿಯಲ್ಲಿ ಗಸ್ತಿನಲ್ಲಿದ್ದಾಗ ಪಡುಬಿದ್ರಿ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಡುಬಿದ್ರಿ, ಶಿರ್ವ, ಕಾಪು ಠಾಣಾ ವ್ಯಾಪ್ತಿಯಲ್ಲಿ ಈ ಕಳವು ಪ್ರಕರಣ ನಡೆಸಲಾಗಿದ್ದು, ಬಂಧಿತರಿಂದ 2.10 ಲಕ್ಷ ರೂ. ವೌಲ್ಯದ 5 ಬೈಕ್‌ಗಳು, 40 ಮೊಬೈಲ್ ಸಹಿತ ಕಳವು ಸಾಮಗ್ರಿಗಳನ್ನು ವಶಪಡಿಸಿ ಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ರಾತ್ರಿ ಗಸ್ತಿನಲ್ಲಿದ್ದ ಪಡುಬಿದ್ರಿ ಪೊಲೀಸರು ಶುಕ್ರವಾರ ಮುದರಂಗಡಿ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಶಿರ್ವ ಕಡೆಯಿಂದ ಬಂದ ಬೈಕೊಂದರಲ್ಲಿ ಮಾಸ್ಕ್ ಧರಿಸಿದ ಇಬ್ಬರನ್ನು ನಿಲ್ಲಿಸಲು ಹೇಳಿದಾಗ ನಿಲ್ಲಿಸದೆ ಪರಾರಿಯಾಗಿದ್ದರು. ಬಳಿಕ ಇವರನ್ನು ಬೆನ್ನುಹತ್ತಿ ವಶಕ್ಕೆ ತೆಗೆದುಕೊಂಡರು. ಈ ವೇಳೆ ಅವರಲ್ಲಿ ಎರಡು ರಾಡ್ ಇರುವುದನ್ನು ಕಂಡು ವಿಚಾರಿಸಿ ತೀವ್ರ ತನಿಖೆಗೆ ಒಳಪಡಿಸಿದಾಗ ಕಳ್ಳತನ ನಡೆಸಿರುವುದು ಬೆಳಕಿಗೆ ಬಂತು. ಕೆಎ19 ಎಕ್ಸ್ 6462 ಪಲ್ಸರ್, ಕೆಎ19 ಎಕ್ಸ್ 8757 ಪಲ್ಸರ್, ಕೆಎ20 ಇಎ್ 8359 ಪಲ್ಸರ್, ಕೆಎ20 ಇಎಚ್ 5309 ಸುಝುಕಿ ಜಿಕ್ಸರ್, ಎ20ಇಜಿ 1309 ಪಲ್ಸರ್- ಒಟ್ಟು 5 ಬೈಕ್‌ಗಳು, ವಿವಿಧ ಕಂಪೆನಿಯ 40 ಮೊಬೈಲ್ ಫೋನ್‌ಗಳು, 1 ಲ್ಯಾಪ್‌ಟಾಪ್, ಸೌಂಡ್‌ಸಿಸ್ಟಂ, ಒಂದು ಮಾನಿಟರ್ ಸಹಿತ ವಿವಿಧ ಸಾಮಗ್ರಿಗಳನ್ನು ಆರೋಪಿಗಳ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.

ಕಾಪು ಮತ್ತು ಅಬ್ಬೇಡಿಯ ಬೈಕ್ ಬಗ್ಗೆ ಮಾಹಿತಿ ದೊರಕಿದ್ದು, ಉಳಿದ ಮೂರು ಬೈಕ್‌ಗಳ ವಾರಸುದಾರರ ಬಗ್ಗೆ ಮಾಹಿತಿ ದೊರಕಿಲ್ಲ.

ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ.ಸುಮನಾ ಇವರ ಮಾರ್ಗದರ್ಶನದಲ್ಲಿ ಕಾಪು ಸಿಐ ಸುನಿಲ್ ನಾಯಕ್ ನೇತೃತ್ವದ ತಂಡ ಹಾಗೂ ಪಡುಬಿದ್ರಿ ಎಸ್ಸೆ ಅಝ್ಮತ್ ಅಲಿ, ಸಿಬ್ಬಂದಿ ರಘುವೀರ್, ನರೇಶ್, ವಿಲ್ಪೆರ್ಡ್, ಪ್ರದೀಪ್, ರಾಘವೇಂದ್ರ ಮಣಿಯಾನಿ, ರವಿ, ಜೀವನ್, ಅಮೃತೇಶ್, ಪ್ರವೀಣ್, ಮಂಜುನಾಥ್ ಜಿ. ಶ್ರೀಧರ, ಜಗದೀಶ್, ನಾಗೇಶ್, ಹರೀಶ್ ಬಾಬು, ಚಾಲಕ ಸಂತೋಷ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವರದಿ ಕೃಪೆ :ವಾಭಾ

Write A Comment