ಕನ್ನಡ ವಾರ್ತೆಗಳು

ವಿದ್ಯಾರ್ಥಿಗಳಿಗೆ ಯಶಸ್ಸಿನ ಗುಟ್ಟು ತಿಳಿಸಿದ ಉಡುಪಿ ಎಸ್ಪಿ ಕೆ. ಅಣ್ಣಾಮಲೈ

Pinterest LinkedIn Tumblr

ಕುಂದಾಪುರ: ಮುಂದಿನ ಜೀವನದಲ್ಲಿ ಮಹಾನ್ ಸಾಧನೆ ಮಾಡುವ ಚಿಂತನೆ, ಗುರಿ ಹಾಗೂ ಧೈರ್ಯವಂತಿಕೆ ವಿದ್ಯಾರ್ಥಿಗಳಲ್ಲಿ ಇದ್ದಾಗಲೇ ಅವರು ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಶಿಕ್ಷಕರಲ್ಲಿ ಕೇಳುವ ಮೂಲಕ ತಮ್ಮೆಲ್ಲಾ ಅನುಮಾನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್, ರೋಟರ್‍ಯಾಕ್ಟ್ ಕ್ಲಬ್ ಕೋಟೇಶ್ವರ, ಕುಂದಾಪುರ ಪೊಲೀಸ್ ಠಾಣೆ, ಸರಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಶನಿವಾರ ಕುಂದಾಪುರ ತಾಲೂಕಿನ ಕೋಟೇಶ್ವರ ಸರಕಾರಿ ಪದವಿಪೂರ್ವ ಕಾಲೇಜಿನ ಚೇತನಾ ಸಭಾಭವನದಲ್ಲಿ ನಡೆದ ‘ಅಪರಾಧ ತಡೆ ಮಾಸಾಚರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

Udupi Sp_Koteshwara_Programme (2) Udupi Sp_Koteshwara_Programme (9) Udupi Sp_Koteshwara_Programme (13) Udupi Sp_Koteshwara_Programme (7) Udupi Sp_Koteshwara_Programme (1) Udupi Sp_Koteshwara_Programme (8) Udupi Sp_Koteshwara_Programme (6) Udupi Sp_Koteshwara_Programme (10) Udupi Sp_Koteshwara_Programme (11) Udupi Sp_Koteshwara_Programme (12) Udupi Sp_Koteshwara_Programme (3) Udupi Sp_Koteshwara_Programme (5) Udupi Sp_Koteshwara_Programme (4)

ಅಪರಾಧ ಚಟುವಟಿಕೆಗಳ ನಿಯಂತ್ರಣದಲ್ಲಿ ವಿದ್ಯಾರ್ಥಿಗಳು ಇಲಾಖೆಯೊಂದಿಗೆ ಕೈ ಜೋಡಿಸಬೇಕಿದೆ. ವಿದ್ಯಾರ್ಥಿಗಳು ಅಪರಾಧ ಚಟುವಟಿಗೆಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಅದಕ್ಕೆ ಒದಗುವ ಶಿಕ್ಷೆ ಹಾಗೂ ಸಮಸ್ಯೆಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಡಿಸೆಂಬರ್ ತಿಂಗಳಿನಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೇ ಮಾಸಾಚರಣೆ ಎನ್ನುವ ಹೆಸರಿನಲ್ಲಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಿ ಅಪರಾಧ ತಡೆಯ ಬಗ್ಗೆ ಮಾಹಿತಿ ಸಾರುವ ಕಾರ್ಯಕ್ಕೆ ಕೈಹಾಕಿದೆ ಇದಕ್ಕೆ ಎಲ್ಲರ ಸಹಕಾರು ಅಗತ್ಯವಿದೆ ಎಂದು ಅವರು ಹೇಳಿದರು.

ಗುಲಾಬಿ ಕೊಟ್ಟು ಎಚ್ಚರಿಸಿ:
ಉಡುಪಿ ಜಿಲ್ಲೆಯಲ್ಲಿ ದಿನೇದಿನೇ ರಸ್ತೆ ಅಪಘಾತಗಳು ಹೆಚ್ಚುತ್ತಿದೆ, ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ತಡೆಯುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದಾಗಿದೆ. ದ್ವಿಚಕ್ರ ವಾಹನ ಚಲಾಯಿಸುವವರು ಹೆಲ್ಮೇಟ್ ಬಳಸುವುದರಿಂದ ಅವಘಡಗಳು ಕಡಿಮೆಯಾಗಲಿದೆ. ಇನ್ನು ಮಿತಿಮೇ‌ಇದ ವೇಗದಲ್ಲಿ ವಾಹನ ಚಲಾವಣೆ, ಮದ್ಯ ಸೇವಿಸಿ ವಾಹನ ಚಲಾಯಿಸುವುದು ನಿಲ್ಲಬೇಕಿದೆ. ಯಾವುದೇ ಓರ್ವ ವಾಹನ ಸವಾರ ರಾಂಗ್ ಸೈಡಿನಲ್ಲಿ ವಾಹನ ಚಲಾಯಿಸಿದರೇ ವಿದ್ಯಾರ್ಥಿಗಳೆ ರಸ್ತೆಗಿಳಿದು ಆತನಿಗೆ ಗುಲಾಬಿಯನ್ನು ನೀಡುವ ಮೂಲಕ ಆತನ ತಪ್ಪನ್ನು ತೋರಿಸಿ ಎಚ್ಚರಿಸಿದರೇ ಮುಂದೆಂದೂ ಆತ ಆ ತಪನ್ನು ಮಾಡಲಾರ. ಈ ಬಗ್ಗೆ ವಿದ್ಯಾರ್ಥಿಗಳು ಆಗ್ಗಾಗೇ ಎಚ್ಚರಿಸುವ ಕೆಲಸ ಮಾಡಬೇಕು ಇದಕ್ಕೆ ಕಾಲೇಜು ಸಬಂದಪಟ್ಟವರು ಸಹಕಾರ ನೀಡಿದರೇ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸರಕಾರಿ ಕಾಲೇಜು ವಿದ್ಯಾರ್ಥಿಗಳು ಬೆಸ್ಟ್!
ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಹಲವು ಸರಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳು ಯಾಂತ್ರೀಕ್ರತ ಜೀವನ ಶೈಲಿ ಬಳಸುವ ಬದಲಾಗಿ ಕಷ್ಟಪಟ್ಟು ಜೀವನದಲ್ಲಿ ಮುಂದಕ್ಕೆ ಬರಬೇಕೆಂಬ ಗುರಿಯಿಂದಲೇ ಶಾಲೆ-ಕಾಲೇಜಿಗೆ ಬರುತ್ತಾರೆ. ನಿಮಗೆಲ್ಲಾ ಕಷ್ಟದ ಅರಿವಿದೆ, ನೀವೆಂದು ಉತ್ತಮ ಕೆಲಸವನ್ನೇ ಮಾಡುತ್ತೀರಿ ಎಂಬ ನಂಬಿಕೆ ನನ್ನದು. ಅದಕ್ಕಾಗಿಯೇ ಬಹುತೇಕ ಸರಕಾರಿ ಶಾಲಾ-ಕಾಲೇಜಿನ ಕಾರ್ಯಕ್ರಮಕ್ಕೆ ಹಾಜರಾಗುವೆ ಎಂದರು.

ಗುರಿ ದೊಡ್ಡದಿರಲಿ..
ಕೇವಲ ಓದುವುದು ಹಾಗೂ ಯಾವುದೋ ಒಂದು ಹಣ ದೊರೆಯುವ ಉದ್ಯೋಗವನ್ನು ಆರಿಸಿಕೊಳ್ಳುವ ಬದಲಾಗಿ ವಿದ್ಯಾರ್ಥಿಗಳಲ್ಲಿ ದೊಡ್ಡ ಗುರಿ ತಲುಪುವ ಮಹತ್ವಾಕಾಂಕ್ಷೆ ಇರಬೇಕು. ದೇಶದಲ್ಲಿ ಕಾಡುತ್ತಿರುವ ಬಡತನ ನಿರ್ಮೂಲನೆ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮನೆ ನಿರ್ಮಿಸುವ ಕಲ್ಪನೆ, ಪಿಡುಗಾಗಿ ಕಾಡುವ ಮಲೇರಿಯಾ ಸಮಸ್ಯೆಗೆ ಕಡಿವಾಣ ಹಾಕುವುದು, ಟವರ್ ಇಲ್ಲದೇ ಬೇರೊಂದು ಮಾರ್ಗದಲ್ಲಿ ಮೊಬೈಲ್ ನೆಟವರ್ಕ್ ಸಿಗುವ ಹಾಗೇ ಮಾಡುವ ಕಲ್ಪನೆಗಳು ವಿದ್ಯಾರ್ಥಿಗಳಲ್ಲಿ ಬರಬೇಕೆಂದು ಹೇಳುವ ಮೂಲಕ ವೈದ್ಯ ವ್ರತ್ತಿ, ಇಂಜಿನಿಯರ್, ವಿಜ್ನಾನಿಯಾಗ ಬಯಸಿದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ಎಸ್ಪಿ ಅವರು ಈ ಸಂದರ್ಭ ಮಾಡಿದರು.

ವಿದ್ಯಾರ್ಥಿಗಳಿಂದಲೇ ಉದ್ಘಾಟನೆ!
ಉಡುಪಿ ಎಸ್ಪಿ ಅವರು ಕಾರ್ಯಕ್ರಮ ಉದ್ಘಾಟಿಸಿಬೇಕಿತ್ತು. ಆದರೇ ಉದ್ಘಾಟನೆ ಸಂದರ್ಭ ಸಭೆಯಲ್ಲಿ ಕುಳಿತ ಇಬ್ಬರು ವಿದ್ಯಾರ್ಥಿನಿಯರನ್ನು ವೇದಿಕೆಗೆ ಬರಮಾಡಿಕೊಂಡ ಅಣ್ಣಾಮಲೈ ಅವರು ಅವರ ಮೂಲಕವೇ ಕಾರ್ಯಕ್ರಮ ಉದ್ಘಾಟಿಸಿದರು. ಮಾತಿನ ನಡುವೆಯೂ ವಿದ್ಯಾರ್ಥಿಗಳ ಬಳಿ ಹಲವು ಪ್ರಶ್ನೆಗಳನ್ನು ಹಾಕುವ ಮೂಲಕ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ತೊಡಗಿಸಿಕೊಳ್ಳುವ ಪ್ರಯತ್ನ ಮಾಡಿದರು. ಕೊನೆಯಲ್ಲಿ ತೆರಳುವ ವೇಳೆಯು ಅವರಿಗೆ ನೀಡಿದ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕುಂದಾಪುರ ಡಿವೈ‌ಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ., ಕಾಲೇಜಿನ ಪ್ರಭಾರ ಪ್ರಾಂಶುಪಾಲ ಕ್ರಷ್ಣಾನಂದ ಕೆ., ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರ ಎಸ್., ಸಭಾಪತಿ ಆನಂದ್ ಆಚಾರ್ಯ ಮೊದಲಾದವರಿದ್ದರು.

ವರದಿ,ಚಿತ್ರ- ಯೋಗೀಶ್ ಕುಂಭಾಸಿ

Write A Comment