ಕನ್ನಡ ವಾರ್ತೆಗಳು

ವಿಕಲಾಂಗ ವಿದ್ಯಾರ್ಥಿಗಳಿಗಾಗಿ ಮಿಡಿದ ವೈದ್ಯರ ಮನ: ತನ್ನ ಚಿತ್ರಕಲಾಕೃತಿಗಳ ಮಾರಾಟದ ಹಣ ವಿಶೇಷ ಮಕ್ಕಳಿಗೆ ನೀಡುವ ಡಾ. ಎಚ್.ಎಸ್. ಮಲ್ಲಿ

Pinterest LinkedIn Tumblr

* ಚಿತ್ರಕಲೆ ಪ್ರದರ್ಶನ ಮತ್ತು ಮಾರಾಟ
* ಬಂದ ಹಣ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ

ಉಡುಪಿ: ಕುಂದಾಪುರದ ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ಚಿತ್ರಕಲೆಯ ಪ್ರದರ್ಶನ ನಡೀತಾ ಇದೆ. ವೃತ್ತಿಯಲ್ಲಿ ವೈದ್ಯರಾದ ಕುಂದಾಪುರದ ಫೆಮಸ್ ಡಾಕ್ಟರ್ ಸುಭೋದ್ ಮಲ್ಲಿ (ಡಾ. ಎಚ್. ಎಸ್. ಮಲ್ಲಿ) ಯವರ ಕುಂಚದಲ್ಲಿ ಅರಳಿದ 68 ವಿವಿಧ ಚಿತ್ರಕಲಾಕೃತಿಗಳು ಕಲಾರಸಿಕರ ಕಣ್ಮನ ತಣಿಸ್ತಾ ಇದೆ. ಇಷ್ಟೇ ಅಲ್ಲ, ಈ ಚಿತ್ರಗಳ ಮಾರಾಟದ ಹಣ ವಿಶೇಷ ಮಕ್ಕಳ ಶಾಲೆಗೆ ನೀಡುವ ವೈದ್ಯರ ಚಿಂತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಡಾಕ್ಟರ್ ಸುಭೋದ್ ಮಲ್ಲಿ ಅವರು ವೃತ್ತಿಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರು. ವಯಸ್ಸು ಎಪ್ಪತ್ತಾರು. ಮೊದಲಿನಿಂದಲೂ ಚಿತ್ರಕಲೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ ಇವರು ಕಳೆದ ನಾಲ್ಕು ದಶಕಗಳಿಂದ ಚಿತ್ರಕಲಾಕಾರರಾಗಿ ತನ್ನದೇ ಒಂದು ಪ್ರಪಂಚವನ್ನು ನಿರ್ಮಿಸಿಕೊಂಡವರು. ಬಿಡುವಿನ ವೇಳೆಯಲ್ಲಿ ಕಾಲಹರಣ ಮಾಡದೇ ತಾನೂ ಪರಿಸರದಲ್ಲಿ ನೋಡಿದ ವಿವಿಧ ಪಕ್ಷಿಗಳು, ಹೂಗಳು ಸೇರಿದಂತೆ ನಿಸರ್ಗದ ರಮಣೀಯತೆಯನ್ನು ತನ್ನ ಕುಂಚದಲ್ಲಿ ರೂಪನೀಡಿ ಅದಕ್ಕೊಂದು ಕಲೆಯ ಮೆರುಗು ನೀಡುತ್ತಾ ಬಂದಿದ್ದರು.

Dr Malli_Art Exhibition_Kndpr (2) Dr Malli_Art Exhibition_Kndpr (10) Dr Malli_Art Exhibition_Kndpr (13) Dr Malli_Art Exhibition_Kndpr (12) Dr Malli_Art Exhibition_Kndpr (17) Dr Malli_Art Exhibition_Kndpr (16) Dr Malli_Art Exhibition_Kndpr (11) Dr Malli_Art Exhibition_Kndpr (9) Dr Malli_Art Exhibition_Kndpr (8) Dr Malli_Art Exhibition_Kndpr (6) Dr Malli_Art Exhibition_Kndpr (5) Dr Malli_Art Exhibition_Kndpr (14) Dr Malli_Art Exhibition_Kndpr (19) Dr Malli_Art Exhibition_Kndpr (7) Dr Malli_Art Exhibition_Kndpr (4) Dr Malli_Art Exhibition_Kndpr (20) Dr Malli_Art Exhibition_Kndpr (22) Dr Malli_Art Exhibition_Kndpr (1) Dr Malli_Art Exhibition_Kndpr (3) Dr Malli_Art Exhibition_Kndpr (21) Dr Malli_Art Exhibition_Kndpr (15) Dr Malli_Art Exhibition_Kndpr (18)

ವೃತ್ತಿಯಲ್ಲಿ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾಗಿ 45 ವರ್ಷಗಳ ಕಾಲ ವೈದ್ಯಕೀಯ ಸೇವೆ ನೀಡಿದ ಡಾ. ಎಚ್.ಎಸ್.ಮಲ್ಲಿಯವರು ಕಳೆದ 25 ವರ್ಷಗಳಿಂದ ಕುಂದಾಪುರದಲ್ಲಿ ಯಡ್ತರೆ ಆಸ್ಪತ್ರೆಯನ್ನು ನಡೆಸಿಕೊಂಡು ಬಂದವರು. ಪರಿಸರ ಪ್ರೇಮಿಯಾಗಿ ಕುಂದಾಪುರದಲ್ಲಿ ಗೆಳಯರೊಂದಿಗೆ ಸೇರಿ ಪ್ಲೋರಾ ಎಂಡ್ ಫೌನಾ ಕ್ಲಬ್‌ನ್ನು ಸ್ಥಾಪಿಸಿ ತನ್ಮೂಲಕ ಪರಿಸರ ಮತ್ತು ಜೀವ ವೈವಿಧ್ಯ, ಪ್ರಕೃತಿಯ ರಕ್ಷಣೆಯ ಅಗತ್ಯತೆಗಳನ್ನು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುತ್ತಾ ಬಂದಿದ್ದಾರೆ. ಛಾಯಾಚಿತ್ರ ಗ್ರಹಣ, ಚಾರಣ, ಪಕ್ಷಿ ವೀಕ್ಷಣೆ ಇವರ ಪ್ರಿಯ ಹವ್ಯಾಸ. ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯನ್ನು ಹೊಂದಿದ್ದ ಮಲ್ಲಿಯವರು ಮಂಗಳೂರಿನ ಪ್ರಖ್ಯಾತ ಬಿಜಿ‌ಎಂ ಫೈನ್ ಆರ್ಟ್ಸ್‌ನಲ್ಲಿ ತರಬೇತಿಯನ್ನು ಪಡೆದವರು. ಕಾಲೇಜು ಜೀವನದಿಂದ ಚಿತ್ರಕಲೆಯ ಹವ್ಯಾಸವನ್ನು ಪೋಷಿಸಿಕೊಂಡು ಬಂದ ಇವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿ ವರ್ಷವು ವರ್ಷದ ಅತ್ಯುತ್ತಮ ಚಿತ್ರಕಲಾವಿದ ಪ್ರಶಸ್ತಿಗೆ ಭಾಜನರಾದವರು.

ಇಷ್ಟು ವರ್ಷಗಳಿಂದ ಚಿತ್ರಕಲೆಯಲ್ಲಿ ನುರಿತರಾದರೂ ಎಲ್ಲೂ ಅವರ ಚಿತ್ರಕಲೆಯ ಪ್ರದರ್ಶನವಾಗಿರಲಿಲ್ಲ, ಅಷ್ಟೇ ಏಕೆ ಇವರೊಬ್ಬರು ಚಿತ್ರಕಲಾವಿದರು ಎಂಬುದು ಎಷ್ಟೋ ಜನರಿಗೆ ತಿಳಿದಿರಲಿಲ್ಲ. ಇದಕ್ಕಾಗಿಯೇ ಢಾ. ಮಲ್ಲಿಯವರ ಆಪ್ತರು ಹಾಗೂ ಕುಟುಂಬಿಕರು ಇವರ ಚಿತ್ರಕಲೆಗಳ ಪ್ರದರ್ಶನಕ್ಕೆ ಒಂದು ವೇದಿಕೆ ಸಿದ್ದಪಡಿಸಿಯೇ ಬಿಟ್ಟರು. ವಿವಿಧ ಬಗೆಯ 68 ಚಿತ್ರಕಲಾಕೃತಿಗಳ ಪ್ರದರ್ಶನ ಶುಕ್ರವಾರದಿಂದ ಭಾನುವಾರ ಸಂಜೆಯವರೆಗೂ ಕುಂದಾಪುರದಲ್ಲಿ ನಡಿತದೆ.

ಪ್ರಥಮ ಬಾರಿಗೆ ತಾವು ರಚಿಸಿದ ಚಿತ್ರಕಲೆ ಪ್ರದರ್ಶನವನ್ನು ಏರ್ಪಡಿಸಿ ಚಿತ್ರಕಲಾ ಪ್ರಿಯರ ಮನ ಸೂರೆಗೊಳ್ಳುವ ಪ್ರಯತ್ನಕ್ಕೆ ಕೈ ಹಾಕಿರುವ ಡಾ. ಎಚ್.ಎಸ್. ಮಲ್ಲಿಯವರು ಕಾರ್ಯಕ್ರಮದಲ್ಲಿ ಚಿತ್ರ ಪ್ರದರ್ಶನ ಮಾತ್ರವಲ್ಲದೇ ಮಾರಾಟಕ್ಕೂ ಅವಕಾಶ ಕಲ್ಪಿಸಿದ್ದು ಚಿತ್ರ ಕಲೆ ಮರಾಟದಿಂದ ಸಂಗ್ರಹವಾದ ಹಣವನ್ನು ಕೋಣಿಯ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ನೀಡುವ ಇಂಗಿತವನ್ನು ಹೊಂದಿದ್ದಾರೆ. ಇದಕ್ಕೆ ಅವರ ಕುಟುಂಬಿಕರು ಸಾಥ್ ನೀಡಿದ್ದಾರೆ.

ಕ್ಯಾನ್ಸರ್ ರೋಗವನ್ನಾದರೂ ಮೊದಲ ಹಂತದಲ್ಲಿ ಗುಣಪಡಿಸೋಕೆ ಆಗುತ್ತೆ ಆದರೇ ವಿಶೇಷ ಚೇತನರಾಗಿ ಜನಿಸುವ ಮಕ್ಕಳ ಕಷ್ಟ ನಿಜಕ್ಕೂ ಬಲ್ಲವರಿಗೆ ಗೊತ್ತು ಎಂದು ಭಾವುಕರಾಗುವ ಡಾ. ಮಲ್ಲಿಯವರು ಇಂತಹಾ ಮಕ್ಕಳ ಶಾಲೆಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದಾರೆ.

ವರದಿ, ಚಿತ್ರ- ಯೋಗೀಶ್ ಕುಂಭಾಸಿ

Write A Comment