ಕನ್ನಡ ವಾರ್ತೆಗಳು

ಸ೦ತ ಅಲೋಶಿಯಸ್ ಗೊನ್ಝಾಗ ಶಾಲೆಗೆ ಶಾಲಾ ವಾರ್ಷಿಕೋತ್ಸವದ ಸಂಭ್ರಮ.

Pinterest LinkedIn Tumblr

St_aloyou_anulaay_1

ಮಂಗಳೂರು,ಡಿ.25 : ಸ೦ತ ಅಲೋಶಿಯಸ್ ಗೊನ್ಝಾಗ ಶಾಲೆಯ 4ನೇ ಶಾಲಾ ವಾರ್ಷಿಕೋತ್ಸವವು ಲೊಯೋಲಾ ಸಭಾಂಗಣದಲ್ಲಿ ರೆಕ್ಟರ್ ರೆ. ಫ಼ಾ. ಡೆನ್ಸಿಲ್ ಲೋಬೊರವರ ಅಧ್ಯಕ್ಷತೆಯಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಡಾ. ಎಂ. ಸುಬ್ರಮಣ್ಯಂ, ಕಮಿಷನರ್, ಕೇಂದ್ರ ಕಂದಾಯ ಮತ್ತು ಅಬಕಾರಿ ಇಲಾಖೆ, ಮಂಗಳೂರು ಮತ್ತು ಗೌರವ ಅತಿಥಿಯಾಗಿ ಶ್ರೀಮತಿ ಎಂ. ಕವಿತ ಎಸ್ ಶಾಸ್ತ್ರಿ, ಜಿಲ್ಲಾ ಗವರ್ನರ್, ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಇವರು ಭಾಗವಹಿಸಿ ಶುಭ ಹಾರೈಸಿದರು.

St_aloyou_anulaay_2 St_aloyou_anulaay_3 St_aloyou_anulaay_5 St_aloyou_anulaay_6 St_aloyou_anulaay_7 St_aloyou_anulaay_8 St_aloyou_anulaay_9 St_aloyou_anulaay_10 St_aloyou_anulaay_11 St_aloyou_anulaay_12 St_aloyou_anulaay_13 St_aloyou_anulaay_14 St_aloyou_anulaay_15

ಶಾಲಾ ಸಂಚಾಲಕರಾದ ರೆ. ಫ಼ಾ. ಐವನ್ ಮೆಂಡೋನ್ಸಾರವರು ಅತಿಥಿಗಳನ್ನು ಸ್ವಾಗತಿಸಿದರು. ಶಾಲಾ ಪ್ರಾಂಶುಪಾಲೆ ಶ್ರೀಮತಿ ಗ್ರೇಸ್ ನೊರೊನ್ಹಾರವರು ದ್ರಶ್ಯ ಮಾಧ್ಯಮ ಸಹಿತ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿಗಳಾದ ಮೊಹಮ್ಮದ್ ಅತೀಕ್ ಹಾಗೂ ಅಕೀಫ್ ಆಸೀಫ್ ಕಾರ್ಯಕ್ರಮವನ್ನು ನಿರೂಪಿಸಿದರು.

ಶಾಲಾ ನಾಯಕ ಸಿದ್ಧಾರ್ಥ ಹೊಳ್ಳ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರಗಿದವು. ಶಾಲಾ ಗೀತೆಯೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು, ಶಿಕ್ಷಕ-ರಕ್ಷಕ ಸಂಘದ ಸದಸ್ಯರು, ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

Write A Comment