ಕನ್ನಡ ವಾರ್ತೆಗಳು

ಸಮರ್ಪಕವಾಗಿ ಮತದಾನ ಮಾಡಲು  ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ಸೂಚನೆ

Pinterest LinkedIn Tumblr

Dc_election_,atter

ಮ೦ಗಳೂರು ಡಿ.26:  ವಿಧಾನ ಪರಿಷತ್ ಚುನಾವಣೆಯಲ್ಲಿ ಮತದಾರರಿಗೆ ಮತಗಟ್ಟೆಯಲ್ಲಿ ನೀಡುವ ಮತಪತ್ರ ಮತ್ತು ನೇರಳೆ ಬಣ್ಣದ ಶಾಯಿಯ ಸ್ಕೆಚ್ ಪೆನ್‌ನಲ್ಲಿ ಮತದಾರರ ಭಾವಚಿತ್ರದ ಎದುರುಗಡೆ 1,2,3 ಇತ್ಯಾದಿ ಅಂಕೆಗಳಲ್ಲಿ ಮತಗಳನ್ನು ದಾಖಲಿಸಬೇಕಾಗಿರುತ್ತದೆ. ಯಾವುದೇ ರೀತಿಯ ಸರಿ ಅಥವಾ ತಪ್ಪು ಚಿಹ್ನೆ, ಸಹಿ, ಹೆಬ್ಬೆಟ್ಟು ಗುರುತುಗಳನ್ನು ಮತಪತ್ರದಲ್ಲಿ ಹಾಕಿದರೆ ಮತವು ತಿರಸ್ಕರಿಸಲ್ಪಡುತ್ತದೆ.

ಮತದಾರರು ಡಿ. 27  ರಂದು ತಮ್ಮ ಭಾವಚಿತ್ರವಿರುವ ಗುರುತಿನ ಚೀಟಿಯೊಂದಿಗೆ ಬೆಳಿಗ್ಗೆ 8 ಗಂಟೆಯಿಂದ ಮತಗಟ್ಟೆಗೆ ತೆರಳಿ ಮತಗಟ್ಟೆಯಲ್ಲಿ ನೀಡುವ ಪೆನ್ನಿನಿಂದ ಮಾತ್ರ ಗುರುತು ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

Write A Comment