ಕುಂದಾಪುರ: ವಕ್ವಾಡಿ ನಿವಾಸಿ ಬೆಂಗಳೂರು ಉದ್ಯಮಿ ವಿ.ಕೆ. ಮೋಹನ್ ಅವರ ಕುಟುಂಬದಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಖ್ಯಾತ ಕಲಾವಿದರು ಪಾಲ್ಘೊಂಡರು.
ಕೋಟೇಶ್ವರದ ಯುವಮೆರಿಡಿಯನ್ ಕನ್ವೆನ್ಶನ್ ಹಾಲಿನಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ಖ್ಯಾತ ನಟ ವಿಜಯ ರಾಘವೇಂದ್ರ, ಶ್ರೀನಗರ ಕಿಟ್ಟಿ, ಹಾಸ್ಯ ಕಲಾವಿದ ಸಾಧುಕೋಕಿಲ, ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ, ನಟ ಬಾಲರಾಜ್ ಮೊದಲಾದವರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ವಿ.ಕೆ. ಮೋಹನ್ ಹಾಗೂ ಕುಟುಂಬಿಕರು ಉಪಸ್ಥಿತರಿದ್ದರು.
ವರದಿ,ಚಿತ್ರ- ಯೋಗೀಶ್ ಕುಂಭಾಸಿ