ಕನ್ನಡ ವಾರ್ತೆಗಳು

ಪೇಜಾವರ ಶ್ರೀ ಪರ್ಯಾಯ: ಮುಸ್ಲೀಂ ಸೌಹಾರ್ಧ ಸಮಿತಿಯಿಂದ ಹೊರೆಕಾಣಿಕೆ, ತಂಪುಪಾನೀಯ ವಿತರಣೆ ಹಾಗೂ ರಕ್ತದಾನ ಶಿಬಿರ

Pinterest LinkedIn Tumblr

ಉಡುಪಿ: ಪೇಜಾವರ ಮಠಾಧೀಶರ ಪರ್ಯಾಯ ಪೀಠವನ್ನು ಅಲಂಕರಿಸುವ ಪುರಪ್ರವೇಶ ಸಂದರ್ಭ ಉಡುಪಿ ಜಿಲ್ಲಾ ಮುಸ್ಲಿಂ ಪರ್ಯಾಯ ಸೌಹಾರ್ಧ ಸಮಿತಿಯ ವತಿಯಿಂದ ನಿರ್ಧಿಷ್ಟ ಸ್ಥಳದಲ್ಲಿ ತಂಪು ಪಾನೀಯವನ್ನು ವಿತರಿಸಲಾಗುವುದು.ಉತ್ಸವ ಅಂಗವಾಗಿ ಜನವರಿ 10ರಂದು ಹೊರೆ ಕಾಣಿಕೆ ಸಮರ್ಪಣೆ ಕಾರ್‍ಯಕ್ರಮವನ್ನು ನಿಗದಿಪಡಿಸಲಾಗಿದ್ದು.ಹೊರೆ ಕಾಣಿಕೆ ನೀಡಲಿಚ್ಚಿಸುವ ಮುಸ್ಲಿಂ ಬಾಂಧವರು ನಿಗದಿತ ದಿನದ ಒಳಗೆ ನೀಡಬೇಕು ಎಂದು ಸಮಿತಿ‌ ಅಧ್ಯಕ್ಷ ಹಾಜಿ.ಕೆ.ಅಬೂಬಕ್ಕರ್ ಹೇಳಿದರು.

state-75

ಅವರು ಉಡುಪಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು,ಜನವರಿ 4ರಂದು ಪೇಜಾವರ ಸ್ವಾಮೀಜಿಯ ಪುರಪ್ರವೇಶ ಮೆರವಣಿಗೆ ಸಂದರ್ಭ ತಂಪು ಪಾನೀಯ ವಿತರಣೆ ನಡೆಯಲಿದೆ.

ಇನ್ನು ಜ.17 ಪರ್ಯಾಯ ದಿನ ಬೆಳ್ಳಿಗ್ಗೆ ಪೇಜಾವರ ಬ್ಲಡ್ ಡೋನೆಟಿಂಗ್ ಟೀಮ್ ಮತ್ತು ಸಮಿತಿಯ ಸಹಭಾಗಿತ್ವದಲ್ಲಿ ಮಧ್ಯಹ್ನ 3 ಗಂಟೆಯವರೆಗೆ ಸಂಸ್ಕೃತ ಕಾಲೇಜಿನ ಆವರಣದಲ್ಲಿ ನಡೆಯುವ ರಕ್ತದಾನ ಶಿಬಿರಕ್ಕೆ ಶ್ರೀಗಳು ಚಾಲನೆ ನೀಡಲಿದ್ದಾರೆ.ಜಿ.ಶಂಕರ್ ಟ್ರಸ್ಟ್‌ವತಿಯಿಂದ 6 ತಿಂಗಳ ಕಾಲಾವಧಿಯ 30,000ರೂ ಉಚಿತ ಆರೋಗ್ಯ ವಿಮೆ ನೀಡಲಿದ್ದಾರೆ ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ಕೆ.ಎಮ್.ಸಿ ಆಸ್ಪತ್ರೆಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರು ಹಾಗೂ ಖ್ಯಾತ ವೈದ್ಯರಾದ ಡಾ.ಕ್ಯಾಪ್ಟನ್.ಎಲ್.ರಾಮಚಂದ್ರ ಇವರಿಬ್ಬರ ಆದರ್ಶ ವ್ಯಕ್ತಿತ್ವ ಮತ್ತು ಜನಸೇವೆ ಗುರುತಿಸಿ ನಮ್ಮ ಸಮಿತಿ ವತಿಯಿಂದ ಸನ್ಮಾನಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಪರ್ಯಾಯ ಸೌಹಾರ್ಧ ಸಮಿತಿ ಉಪಾಧ್ಯಕ್ಷರು ಮೊಹಮ್ಮದ್ ರಫೀಕ್ ದೊಡ್ಡಣಗುಡ್ಡೆ, ಮುಸ್ಲಿಂ ಪರ್ಯಾಯ ಸೌಹಾರ್ಧ ಸಮಿತಿ ಪ್ರಧಾನ ಕಾರ್ಯದರ್ಶಿ ಹಮ್ಜತ್ ಹೆಮಾಡಿ ಕೋಡಿ,ಮೊಹಮ್ಮದ್ ನಬೀಲ್,ಮೊಹಮ್ಮದ್ ಆರೀಫ್ ಉಪಸ್ಥಿತರಿದ್ದರು.

Write A Comment