ಕನ್ನಡ ವಾರ್ತೆಗಳು

ಮುಸ್ಲಿಮ್ ವಿದ್ವಾಂಸ ಡಾ.ಝಾಕಿರ್ ನಾಯ್ಕ ಪ್ರವೇಶ ನಿರ್ಬಂಧ : ಮುಸ್ಲಿಮ್ ಸಂಘಟನೆಗಳ ಖಂಡನೆ

Pinterest LinkedIn Tumblr

Muslim_okkuta_Meet

ಮಂಗಳೂರು, ಡಿ.29: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ (ಎಸ್‌ಕೆಎಸ್‌ಎಂ) ನಗರದಲ್ಲಿ ಹಮ್ಮಿಕೊಂಡ ‘ಮಂಗಳೂರು ಶಾಂತಿ ಸಮ್ಮೇಳನ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದ ಮುಸ್ಲಿಮ್ ವಿದ್ವಾಂಸ ಡಾ.ಝಾಕಿರ್ ನಾಯ್ಕಾರಿಗೆ ನಿರ್ಬಂಧ ಹೇರಿರುವ ವಿಷಯದ ಬಗ್ಗೆ ಚರ್ಚಿಸುವ ಸಲುವಾಗಿ ನಗರದಲ್ಲಿ ಸೋಮವಾರ ಕರೆದ ದ.ಕ. ಜಿಲ್ಲೆಯ ವಿವಿಧ ಮುಸ್ಲಿಮ್ ಸಂಘಟನೆಗಳ ಸಭೆಯಲ್ಲಿ ತೀವ್ರ ಖಂಡನೆ ವ್ಯಕ್ತವಾಯಿತು.

ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಡಾ.ಝಾಕಿರ್ ನಾಯ್ಕ ಮಂಗಳೂರು ಪ್ರವೇಶಕ್ಕೆ ನಿರ್ಬಂಧ ಹೇರಿರುವ ನಗರ ಪೊಲೀಸ್ ಕಮಿಷನರ್ ಎಸ್.ಮುರುಗನ್ ಹಾಗೂ ರಾಜ್ಯ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದರು. ಮುಂದೆ ಎಲ್ಲ ಮುಸ್ಲಿಮ್ ಸಂಘಟನೆಗಳು ಒಂದೇ ವೇದಿಕೆಯಡಿಯಲ್ಲಿ ಈ ಬಗ್ಗೆ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಎಸ್‌ಕೆಎಸ್‌ಎಂ ನಿಕಟಪೂರ್ವ ಅಧ್ಯಕ್ಷ ಅಹ್ಮದ್ ಅನ್ಸಾರ್ ವಹಿಸಿದ್ದರು. ಬಿ.ಎಂ.ಅಬ್ದುರ್ರಹ್ಮಾನ್ ಬಾಶಾ, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಮುಸ್ತಫಾ ಕೆಂಪಿ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ಪಿಎಫ್‌ಐ ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ, ಜಮಾಅತೆ ಇಸ್ಲಾಮೀ ಹಿಂದ್‌ನ ಮುಹಮ್ಮದ್ ಕುಂಞಿ, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಎಚ್‌ಐಎಫ್ ಅಧ್ಯಕ್ಷ ಆಸಿಫ್, ಹೋಪ್ ಫೌಂಡೇಶನ್‌ನ ಅಧ್ಯಕ್ಷ ಸೈಫ್, ಹಿದಾಯ ಫೌಂಡೇಶನ್‌ನ ಇಬ್ರಾಹೀಂ, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ಕುಂಞಿ ವಿಟ್ಲ, ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಅಬ್ದುಲ್ ಅಝೀಝ್, ಝೀನತ್ ಬಕ್ಷ್ ಯತೀಂ ಖಾನದ ಅಧ್ಯಕ್ಷ ಮನ್ಸೂರ್, ಹೆಲ್ಪ್‌ಲೈನ್‌ನ ಅಬ್ದುಲ್ ರಾಝಿಕ್, ಸೈಯದ್ ಕರ್ನಿರೆ, ಮಾಂಸ ವ್ಯಾಪಾರಸ್ಥರ ಒಕ್ಕೂಟದ ಅಧ್ಯಕ್ಷ ಅಬ್ದುಲ್ ಖಾದರ್, ಟಿ.ಸಿ.ಗ್ರೂಪ್‌ನ ಅಬ್ದುಸ್ಸಲಾಂ, ಸಾಮ್ನಾ ಗ್ರೂಪ್‌ನ ಶಂಸುದ್ದೀನ್, ಅಶ್ರಫ್ ಕಲ್ಲೇರವರು ಕಮಿಷನರ್ ಕ್ರಮವನ್ನು ಖಂಡಿಸಿದರು.

ಡಾ.ಹಬೀಬುರ್ರಹ್ಮಾನ್, ಪ್ರೆಸಿಡೆನ್ಸಿ ಹೈದರ್, ಡಿ.ಎಂ.ಅಸ್ಲಂ, ಕಾರ್ಪೊರೇಟರ್‌ಗಳಾದ ಅಬ್ದುಲ್ ಅಝೀಝ್, ಅಬ್ದುಲ್ಲತೀಫ್ ಹಾಗೂ ಕಾಂಗ್ರೆಸ್ ಮುಖಂಡ ಫಝ್ಲುರ್ರಹ್ಮಾನ್ ಉಪಸ್ಥಿತರಿದ್ದರು. ಕೆ.ಅಬ್ದುರ್ರಹ್ಮಾನ್ ಸ್ವಾಗತಿಸಿದರು. ಶರೀಫ್ ಮುಲ್ಕಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Write A Comment