ಮಂಗಳೂರು,ಡಿ.29: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವತಿಯಿಂದ ಮುದ್ರಿಸಲ್ಪಟ್ಟ ಧಾರ್ಮಿಕ ಆಚರಣೆಗಳ ಸಮಗ್ರ ವಿವರಣೆಗಳುಳ್ಳ ಶ್ರೀ ಮಂಜುನಾಥ ಕ್ಯಾಲೆಂಡರ್‌ನ್ನು ಕದ್ರಿ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.
ಕ್ಷೇತ್ರದ ಅರ್ಚಕರಾದ ಶ್ರೀ ರಾಮ ಅಡಿಗ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಎ.ಜೆ. ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯ ಎಸ್. ಪ್ರದೀಪ ಕುಮಾರ ಕಲ್ಕೂರ ಹಾಗೂ ಸಿಬ್ಬಂದಿ ಅರುಣ್ ಕುಮಾರ್ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದ ಕಚೇರಿಯಲ್ಲಿ ಕ್ಯಾಲೆಂಡರ್ ಲಭ್ಯವಿದ್ದು ಸಾರ್ವಜನಿಕರು ಪಡೆದುಕೊಳ್ಳಬಹುದೆಂದು ಪ್ರಕಟಣೆ ತಿಳಿಸಿದೆ.