ಕನ್ನಡ ವಾರ್ತೆಗಳು

ಲಾಡ್ಜ್ ರೂಂನಲ್ಲಿ ಪುರಾತನ ವಸ್ತು ಮಾರಾಟ ಯತ್ನ; 6 ಮಂದಿ ಬಂಧನ: 5 ಲಕ್ಷ ಮೌಲ್ಯದ ವಿಗ್ರಹ ವಶ

Pinterest LinkedIn Tumblr

ಉಡುಪಿ: ಲಾಡ್ಜ್ ರೂಂಗೆ ರೇಡ್ ಮಾಡಿದ ಪೊಲೀಸರು ಪುರಾತನ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರು ಮಂದಿ ಖತರ್ನಾಕ್ ಆರೋಪಿಗಳನ್ನು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.

ಭಟ್ಕಳ ನಿವಾಸಿ ಮಹಾದೇವ ನಾಯ್ಕ್ (41), ಗದಗ ನಿವಾಸಿ ಈಶ್ವರ ರೆಡ್ಡಿ(44), ಸುಳ್ಯದ ಸದಾಶಿವ ಗೌಡ, ಮಲ್ಪೆ ಕೊಡವೂರಿನ ಶೇಖರ ಮೆಂಡನ್(48 ), ಮುರ್ಡೇಶ್ವರದ ವೆಂಕಟರಮಣ ಜಟ್ಟಪ್ಪ ನಾಯ್ಕ್( 27), ಹಾವೇರಿಯ ಬಸವರಾಜ್‌ .ಎಸ್‌ ಹನಗೋಡಿಮಠ (40) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 5 ಲಕ್ಷ ರೂ ಬೆಲೆಬಾಳುವ ಪುರಾತನ ತಾಮ್ರದ ಶ್ರೀನಿವಾಸ ಹಾಗೂ ಪದ್ಮಾವತಿ ವಿಗ್ರಹ, ಸ್ಯಾಮ್ ಸಂಗ್ ಕಂಪೇನಿಯ 2 ಮೊಬೈಲ್ ,ನೋಕಿಯಾ ಕಂಪೆನಿಯ 3 ,ಇ-ಟಚ್ ಮೊಬೈಲ್-1 ,ಪೆಂಟಾ ಮೊಬೈಲ್ -1 ಒಟ್ಟು 7 ಮೊಬೈಲ್ ಪೋನುಗಳನ್ನು ಹಾಗೂ ಆರೋಪಿಗಳು ಉಪಯೋಗಿಸಿರುವ ಬಿಳಿ ಬಣ್ಣದ ಸ್ವೀಪ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ.

Udp_Antick_arrest

ಉಡುಪಿ ವೃತ್ತ ನಿರೀಕ್ಷಕರಾದ ಶ್ರೀಕಾಂತ. ಕೆ ಅವರಿಗೆ ಕೆಲವರು ಯಾವುದೋ ಪುರಾತನ ವಸ್ತುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಸಿಕ್ಕ ಖಚಿತ ವರ್ತಮಾನದಂತೆ ಸಿಬ್ಬಂದಿಯಗಳ ಜೊತೆ ಉಡುಪಿ ಡಯಾನಾ ಸರ್ಕಲ್ ಬಳಿ ಇರುವ ಕಲ್ಪನಾ ಲಾಡ್ಜ್ ರೂಮ್ ನಂಬ್ರ 401 ಕ್ಕೆ ದಾಳಿ ಮಾಡಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಪುರಾತನ ವಸ್ತು & ಕಲಾನಿಧಿ ಅಧಿನಿಯಮ 1972 ರಂತೆ ಪ್ರಕರಣ ದಾಖಲಾಗಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದಲ್ಲಿದ್ದಾರೆ.

ವಿಶೇಷ ಪ್ರಕಟಣೆ: ಪ್ರಕರಣದಲ್ಲಿ ಕಳುವಾದ ಮೂರ್ತಿಯ ವಾರೀಸುದಾರರು ಈವರೆಗೆ ಪತ್ತೆಯಾಗದೇ ಇರುವುದರಿಂದ ಸದ್ರಿ ಪ್ರಕರಣದಲ್ಲಿ ಸ್ವಾಧೀನಪಡಿಸಿದ ವಿಗ್ರಹಗಳು ಕಳವಾದ ಬಗ್ಗೆ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಲ್ಲಿ ಪೊಲೀಸ್ ಉಪನಿರೀಕ್ಷಕರು ಉಡುಪಿ ನಗರ ಪೊಲೀಸ್ ಠಾಣೆ ಇವರನ್ನು ಸಂಪರ್ಕಿಸುವರೇ ಕೋರಿಕೆ ದೂರವಾಣಿ ಸಂಖ್ಯೆ: ಉಡುಪಿ ನಗರ ಠಾಣೆ 0820-2520444, ಪೊಲೀಸ್ ವೃತ್ತ ನಿರೀಕ್ಷಕರು, ಉಡುಪಿ 0820-2520329

Write A Comment