ಕನ್ನಡ ವಾರ್ತೆಗಳು

ಜ.17-ಫೆ 21: ಮಕ್ಕಳಿಗೆ ಪೊಲೀಯೋ ಲಸಿಕೆ ವ್ಯವಸ್ಥೆ.

Pinterest LinkedIn Tumblr

polio_2278538f

ಮಂಗಳೂರು,ಜ.02 : ಭಾರತ ಸರಕಾರದ ನಿರ್ದೇಶನದಂತೆ ಪೊಲೀಯೊ ನಿರ್ಮೂಲನೆ ಅಂಗವಾಗಿ ಜ.17 ಮತ್ತು ಫೆ.21 ರಂದು ಪಲ್ಸ್ ಪೊಲೀಯೋ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದರು.

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾದಿದ ಅವರು ಕಾರ್ಯಕ್ರಮದ ಮೊದಲನೆ ದಿನ ಪೊಲೀಯೋ ಬೂತ್ ಗಳಲ್ಲಿ ಹಾಗೂ ನಂತರದ 20 ರಿಂದ 3 ದಿನ ಮನೆ ಭೇಟಿಯ ಮೂಲಕ 5 ವರ್ಷದೊಳಗಿನ ಮಕ್ಕಳಿಗೆ ಪೊಲೀಯೋ ಹನಿ ನೀಡುವ ವ್ಯಸಸ್ಥೆ ಕಲ್ಫಿಸಲಾಗುವುದು ಎಂದರು.

ಜಿಲ್ಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳು ಸೇರಿದಂತೆ 921 ಲಸಿಕಾ ಕೇಂದ್ರಗಳಲ್ಲಿ 1,68,947 ಮಕ್ಕಳಿಗೆ ಪೊಲೀಯೋ ಹನಿ ನಿಡುವ ಗುರಿ ಹೊಂದಲಾಗಿದೆ ಎಂದರು.

ವಲಸೆ ಬಂದಿರುವ ಕುಟುಂಬಗಳು ಹಗೂ ಕೊಳಚೆ ಪ್ರದೇಶಗಳು, ಲಸಿಕೆ ಬಿಟ್ಟು ಹೋಡ ಪ್ರದೇಶಗಳು, ವಿಬಿಧ ರೀತಿಯ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿದ ಪ್ರದೇಶಗಳು ಮತ್ತು ಆರೋಗ್ಯ ಕಾರ್ಯಕರ್ತರ ತೆರೆವಿನನಿಂದ ಲಸಿಕಾ ಸೇವೆಗಳು ಕುಂಠಿತ ವಾಗಿರುವ ಪ್ರದೇಶಗಳನ್ನು ಪೂರ್ವಭಾವಿ ಸಮೀಕ್ಷೇಯಾ ಮೂಲಕ ಗುರುತಿಸಿ ಮೈಕ್ರೋಪ್ಲಾನ್ ನಲ್ಲಿ ಬಿಟ್ಟುಹೋಗದಂತೆ ಸೇರಿಸಿಕೊಳ್ಳುವುದು ಹಾಗೂ ಗುರುತಿಸಲಾದ ಪ್ರದೇಶಗಳನ್ನು ಮೇಲ್ವಿಚಾರಕರ ಮೂಲಕ ಖಾತ್ರಿಗೊಳಿಸುವ ಕಾರ್ಯ ನಡೆಸಲಾಗಿದೆ.ಎಂದವರು ಹೇಳಿದರು.

Write A Comment