ಕನ್ನಡ ವಾರ್ತೆಗಳು

ಮೀಸಲು ಅರಣ್ಯ ಕಡಿಮೆಯಿಂದ ಹವಮಾನ ವೈಪರಿತ್ಯ; ಡಾ.ಟಿ.ವಿಮೋಹನ ದಾಸ

Pinterest LinkedIn Tumblr

ಉಡುಪಿ: ಸಾಮಾಜಿಕ ಅರಣ್ಯ ಅಭಿವೃದ್ಧಿಯಲ್ಲಿ ಉಡುಪಿಯು ರಾಜ್ಯದಲ್ಲೇ ಮೂಂಚಿಣಿಯಲಿರುವುದು ಹೆಮ್ಮೆಯ ವಿಷಯ ಎಂದು ಅಪರ ಪ್ರಧಾನ ಮಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಟಿ.ವಿಮೋಹನ ದಾಸ ಹೇಳಿದ್ದಾರೆ.

Udp_Forest_News

ಭಾನುವಾರ ಪವನ್ ರೂಪ್ ಟಾಪ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ(ರಿ) ಉಡುಪಿ ಜಿಲ್ಲೆಯ ಆಯೋಜಿಲಾಸದ 16ನೇ ವರ್ಷದ ಸಮಾರಂಭ 2016 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮೀಸಲು ಅರಣ್ಯ ನಮ್ಮಲ್ಲಿ ಕಡಿಮೆ ಆಗ್ತಿದೆ ಇದರಿಂದ ರಾಜ್ಯದಲ್ಲಿ ಹವಾಮಾನ ವೈಪರಿತ್ಯ ಬದಲಾವಣೆ ಆಗುತ್ತಿದೆ.ಅರಣ್ಯಗಳನ್ನು ಬೆಳಸುವುದರಿಂದ ಮುಂದಾಗುವ ದುಷ ಪರಿಣಾಮವನ್ನು ತಡೆಹಿಡಿಯ ಬಹುದು.ಇದು ಎಲ್ಲಾ ಅರಣ್ಯಧಿಕಾರಿಗಳ ಮುಖ್ಯ ಜವಾಬ್ದಾರಿಯಾಗಿದೆ ಎಂದು ಹೇಳಿದರು.

2015 ಸಾಲಿನಲ್ಲಿ ನಿವೃತ್ತರಾದ ಕೆರೆಕಟ್ಟೆ ವನ್ಯ ಜೀವಿ ವಲಯದ ಅರಣ್ಯಧಿಕಾರಿ ಎಚ್.ಎಸ್ ಸಣ್ಣ ಸಿದ್ಧಯ್ಯ ರವರಿಗೆ ಸನ್ಮಾನಿಸಲಾಯಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸಂಜಯ ಎಸ್.ಬಿಜ್ಜೂರ್,ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಅಣ್ಣಾಮಲೈ.ಕೆ, ಉಪ ಅರಣ್ಯ ಕು.ವಿ ಸಂರಕ್ಷಣಾಧಿಕಾರಿ ಪ್ರಕಾಶ ಎಸ್.ನೆಟಾಲ್ಕರ್, ಉಪ ಅರಣ್ಯ ಕುದರೆ ಮುಖ ವನ್ಯ ಜೀವಿ ವಿಭಾಗದ ಸಂರಕ್ಷಣಾಧಿಕಾರಿ ಬಿ.ಸದಾಶಿವ ಭಟ್, ಸಾಮಾಜಿಕ ಅರಣ್ಯ ಉ.ಅ ಸಂರಕ್ಷಣಾಧಿಕಾರಿ ಆರ್.ಜಿ.ಭಟ್ ಉಪಸ್ಥಿತರು.

ಕಾರ್ಯಕ್ರಮವನ್ನು ಪ್ರಶಾಂತ ನಿರೂಪಿಸಿ,ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ(ರಿ) ಉಡುಪಿ ಜಿಲ್ಲೆಯ ಕಾರ್ಯದರ್ಶಿ ಕರುಣಾಕರ.ಜಿ ಅತಿಥಿಗಳನ್ನು ಸ್ವಾಗತಿಸಿ, ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘ(ರಿ) ಉಡುಪಿ ಜಿಲ್ಲೆಯ ಉಪಾಧ್ಯಕ್ಷ ನಾಗೇಶ್ ಬಿಲ್ಲವ ವಂದಿಸಿದರು.

Write A Comment