ಕನ್ನಡ ವಾರ್ತೆಗಳು

ಸಮಾಜ ಶಾಸ್ತ್ರ ಲೇಖಕ ಚ.ನ.ಶಂಕರರಾವ್‌ ದಂಪತಿಗೆ ಅಭಿನಂದನಾ ಸಮಾರಂಭ.

Pinterest LinkedIn Tumblr

shankar_rav_sanmana_1

ಮಂಗಳೂರು,ಜ.05 : ಚ.ನ.ಶಂಕರರಾವ್‌ ಅಭಿನಂದನ ಸಮಿತಿ ವತಿಯಿಂದ ನಗರದ ಉರ್ವ ಕೆನರಾ ಪ್ರೌಢಶಾಲೆಯ ಮಿಜಾರು ಗೋವಿಂದ ಪೈ ಸಭಾಂಗಣ ದಲ್ಲಿ ನಡೆದ ಶಂಕರರಾವ್‌ ಅವರ ಅಭಿನಂದನಾ ಸಮಾರಂಭ ನಡೆಯಿತು.

‘ತುರ್ತು ಪರಿಸ್ಥಿತಿಯ ವಿರುದ್ಧ ರಾಜ್ಯದಲ್ಲಿ ನಡೆದ ಹೋರಾಟದಲ್ಲಿ 35ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದಕ್ಕೆ ಸಮಾಜ ಶಾಸ್ತ್ರ ಲೇಖಕ ಶಂಕರರಾವ್‌ ಅವರು ಭೂಗತರಾಗಿ ನಡೆಸಿದ ಸಂಘಟನಾ ಕಾರ್ಯವೇ ಕಾರಣ ಹಾಗೂ ವಿದ್ಯಾರ್ಥಿ ಸಂಘಟನೆಗಾಗಿ ಜೀವಮಾನವಿಡೀ ಶ್ರಮಿಸಿದ ಇವರ ಪಾತ್ರ ಮಹತ್ವದಾ ಗಿದೆ. ಚರಿತ್ರೆಯಲ್ಲಿ ದಾಖಲಾಗಬೇಕಾದ ಶ್ರೇಷ್ಠ ವ್ಯಕ್ತಿತ್ವ ಅವರದ್ದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಅಖಿಲ ಭಾರತ ಸಹ ಸರಕಾರ್ಯವಾಹಕ ದತ್ತಾತ್ರೇಯ ಹೊಸಬಾಳೆ ಶ್ಲಾಘಿಸಿದರು.

shankar_rav_sanmana_2

ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿ ಪತಿ ಎನ್‌.ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಡಾ.ಸರಸ್ವತಿ ಶಂಕರರಾವ್, ಮನೋಹರ ತುಳಜಾ ರಾಮ ಮತ್ತು ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನಯ್‌ ಬಿದರೆ, ಕೆನರಾ ಹೈಸ್ಕೂಲ್‌ ಅಸೋಸಿಯೇಶನ್‌ ಅಧ್ಯಕ್ಷ ಎಸ್‌.ಎಸ್‌.ಕಾಮತ್‌ ಅವರು ಶಂಕರ ರಾವ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದರು.

ಅಭಿನಂದನಾ ಸಮಿತಿ ಅಧ್ಯಕ್ಷ ಕೆ.ಬಾಲಕೃಷ್ಣ ಭಟ್‌, ಸಂಚಾಲಕ ಕೆ.ರಮೇಶ್ ಉಪಸ್ಥಿತರಿದ್ದರು.

ಶಂಕರರಾವ್‌ ಅವರ ಅಭಿನಂದನ ಗ್ರಂಥ ‘ಶಂಕರ ದರ್ಶನ’, ಶಂಕರರಾವ್‌ ಅವರು ರಚಿಸಿರುವ ಭಾರತೀಯ ಸಾಮಾಜಿಕ ಚಿಂತಕರು ಮತ್ತು ಸಮಾಜ ಶಾಸ್ತ್ರೀಯ ಚಿಂತನೆ ಹಾಗೂ ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಬದುಕು ಮತ್ತು ಸಾಧನೆ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

Write A Comment