ಕನ್ನಡ ವಾರ್ತೆಗಳು

ಇಂದಿನಿಂದ ನಂದಿನಿ ಹಾಲು ಮತ್ತು ಮೊಸರಿನ ದರ ಏರಿಕೆ

Pinterest LinkedIn Tumblr

milk_curd_rate

ಮಂಗಳೂರು,ಜ.05 : ಗ್ರಾಮೀಣ ಪ್ರದೇಶದಲ್ಲಿ ಹಾಲಿನ ಉತ್ಪಾದನೆ, ರಾಸುಗಳ ಸಾಕಾಧಿಣಿಕೆಯಲ್ಲಿ ಬಳಸುವ ಮೇವು, ಪಶು ಆಹಾರಗಳ ಬೆಲೆ ಹಾಗೂ ನಂದಿನಿ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ಬೆಲೆ ಪರಿಷ್ಕರಿಸಲಾಗಿದ್ದು, ಇಂದಿನಿಂದ ಈ ದರ ಅನ್ವಯವಾಗುವಂತೆ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರ ಪರಿಷ್ಕರಿಸಲಾಗಿದೆ ಎಂದು ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನಿರುವ ಹಳೆಯ ದರ ನಮೂದಿಸಿರುವ ಪ್ಯಾಕಿಂಗ್‌ ಫಿಲಂ ಮುಗಿಯುವವರೆಗೆ ಅದೇ ಫಿಲಂನಲ್ಲಿ ನಂದಿನಿ ಹಾಲು ಹಾಗೂ ಮೊಸರನ್ನು ಪ್ಯಾಕ್‌ ಮಾಡಿ ಸರಬರಾಜು ಮಾಡಲಾಗುವುದು. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಮೊಸರನ್ನು ಹೊಸ ಮಾರಾಟ ದರದಲ್ಲಿ ನಂದಿನಿ ಡೀಲರುಗಳು ಗರಿಷ್ಠ ಮಾರಾಟ ದರಕ್ಕೆ ಮೀರದಂತೆ ಮಾರಾಟ ಮಾಡಿ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಎಂದು ತಿಳಿಸಿದ್ದಾರೆ.
ನಂದಿನಿ ಟೋನ್ದ್ ಹಾಲು (500 ಮಿ.ಲೀ.) ಹಳೆಯ ದರ 15 ರೂ., ಪರಿಷ್ಕೃತ ದರ 17 ರೂ,
ನಂದಿನಿ ಟೋನ್ದ್ ಹಾಲು (1,000 ಮಿ.ಲೀ.): 30 ರೂ.- 34 ರೂ,
ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (515 ಮಿ.ಲೀ.): 17 ರೂ.-19 ರೂ,
ನಂದಿನಿ ಹೋಮೊಜಿನೈಸ್ಡ್ ಹಸುವಿನ ಹಾಲು (6 ಲೀ. ಜಂಬೋ): 198 ರೂ.-222 ರೂ,
ನಂದಿನಿ ಶುಭಂ ಹಾಲು (500 ಮಿ.ಲೀ.): 18 ರೂ.-20 ರೂ,
ನಂದಿನಿ ಸಮೃದ್ಧಿ ಹಾಲು (500 ಮಿ.ಲೀ.): 19 ರೂ.-21 ರೂ.ಗಳಾಗಿವೆ.
ಮೊಸರು (200 ಗ್ರಾಂ): 10 ರೂ.-10 ರೂ.;
ಮೊಸರು (415 ಗ್ರಾಂ): 18 ರೂ.-19 ರೂ.;
ಮೊಸರು (1 ಕೆಜಿ): 39 ರೂ.-41 ರೂ.;
ಮೊಸರು (6 ಕೆಜಿ ಜಂಬೋ): 228 ರೂ.-240 ರೂ.ಗಳಾಗಿವೆ.

Write A Comment