ಕನ್ನಡ ವಾರ್ತೆಗಳು

ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪುಟ್ಟ ಪುಟ್ಟ ಮಕ್ಕಳ ವಿಶೇಷ ಅಕರ್ಷಣೆಯ ಸ್ವಚ್ಚತಾ ಕಾರ್ಯ.

Pinterest LinkedIn Tumblr

Ramkrshna_savchatha_1

ಮಂಗಳೂರು,ಜ.05: ರಾಮಕೃಷ್ಣ ಮಿಷನ್ ನೇತೃತ್ವದ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು 33ನೇ ಸ್ವಚ್ಛತಾ‌ ಅಭಿಯಾನವನ್ನು ನಗರದ ನಂತೂರಿನಲ್ಲಿ ಹಮ್ಮಿಕೊಳ್ಳಲಾಯಿತು. ನಂತೂರ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಠದ‌ ಅಧ್ಯಕ್ಷರಾದ ಸ್ವಾಮಿಜಿತ ಕಾಮಾನಂದಜಿ ಹಾಗೂ ಅಭಿಯಾನದ ಮಾರ್ಗದರ್ಶಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ ಇವರುಗಳ ಉಪಸ್ಥಿತಿಯಲ್ಲಿ ನಿವೃತ್ತ ಪ್ರಾಂಶುಪಾಲ ಡಾ. ರಾಧಾಕೃಷ್ಣ ಕೆ ಹಾಗೂ ಆರ್ಟ್‌ ಆಫ್ ಲೀವಿಂಗ್ ನ ಶ್ರೀ ಸದಾಶಿವ ಪ್ರಭು ಇವರುಗಳು ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿದರು.

ಶುಚಿತ್ವ :ನಂತೂರ ವೃತ್ತದಲ್ಲಿ‌ ಅಭಿಯಾನಕ್ಕೆ ಚಾಲನೆ ದೊರಕಿದ ಬಳಿಕ ಕಾರ್ಯಕರ್ತರೆಲ್ಲ‌ ಐದು ತಂಡಗಳಾಗಿ ವಿಂಗಡಿಸಿಕೊಂಡು ಸ್ವಚ್ಛತಾಕಾರ್ಯಕ್ಕೆ ತೆರಳಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್ ಹಾಗೂ ಹಿರಿಯ ಕಾರ್ಯಕರ್ತರು ಮುಖ್ಯ ವೃತ್ತದಲ್ಲಿ ಸ್ವಚ್ಛತೆ ನಡೆಸಿದರು. ಎರಡನೇ ಗುಂಪು ಶ್ರೀ ಸುರೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ರಸ್ತೆಯ ಮತ್ತೊಂದು ಭಾಗದತ್ತ ತೆರಳಿ ಕಾರ್ಯ ಪ್ರಾರಂಭಿಸಿದರು. ಪೂರ್ವ ಪ್ರಾಚಾರ್ಯ ಶ್ರೀ ಸತೀಶ್ ಭಟ್, ಶ್ರೀ ಉಮಾನಾಥ ಕೋಟೆಕಾರ್, ಶ್ರೀ ಮುಖೇಶ್ ಆಳ್ವ ತಲಾ‌ ಒಂದೊಂದು ತಂಡಗಳನ್ನು ಮಾರ್ಗದರ್ಶಿಸಿ ಸ್ವಚ್ಛತೆಯನ್ನು ಕೈಗೊಂಡರು.

ನಂತೂರ ವೃತ್ತದ ಸ್ವಚ್ಛತೆ :ನಿತ್ಯ ಸಾವಿರಾರು ವಾಹನಗಳು ಹಾಗೂ ಅನೇಕ ಜನ ಸಂಚರಿಸುವ, ನಗರದ ಪ್ರವೇಶ ದ್ವಾರದಂತಿರುವ ನಂತೂರ ವೃತ್ತಹುಲ್ಲು ಕಸ ಕಡ್ದಿ ಕೊಳೆ ತುಂಬಿತ್ತು. ಅಲ್ಲಲ್ಲಿ ಮಣ್ಣಿನ ರಾಶಿಯನ್ನೂ ಹಾಕಲಾಗಿತ್ತು. ಮೊದಲಿಗೆ ಹುಲ್ಲುನ್ನು ಕತ್ತರಿಸಲಾಯಿತು ನಂತರ ಸ್ವಚ್ಛತೆ ಮಾಡಿಕಸವನ್ನೆಲ್ಲ ತೆಗೆದು ಸ್ವಚ್ಛಗೊಳಿಸಲಾಯಿತು. ಕೊನೆಗೆ ಅಲ್ಲಲ್ಲಿ ರಾಶಿಯಾಗಿದ್ದ ಮಣ್ಣಿನ ರಾಶಿ ಮತ್ತು ಕಸವನ್ನು ತೆರವುಗೊಳಿಸಲಾಯಿತು. ಇಂದು‌ ಅದನ್ನು ಜೆಸಿಬಿ ಟಿಪ್ಪರ ಬಳಸಿ ತೆರವುಗೊಳಿಸಲಾಗಿದೆ. ಇದೀಗ ಆ ವೃತ್ತ ಸ್ವಚ್ಛತೆಯಿಂದ ಕಂಗೊಳಿಸುತ್ತಿದೆ.

Ramkrshna_savchatha_2 Ramkrshna_savchatha_3 Ramkrshna_savchatha_4 Ramkrshna_savchatha_5 Ramkrshna_savchatha_6 Ramkrshna_savchatha_7 Ramkrshna_savchatha_8 Ramkrshna_savchatha_9 Ramkrshna_savchatha_10 Ramkrshna_savchatha_11 Ramkrshna_savchatha_12 Ramkrshna_savchatha_13 Ramkrshna_savchatha_14 Ramkrshna_savchatha_15 Ramkrshna_savchatha_16 Ramkrshna_savchatha_17 Ramkrshna_savchatha_18 Ramkrshna_savchatha_19 Ramkrshna_savchatha_20 Ramkrshna_savchatha_21 Ramkrshna_savchatha_22 Ramkrshna_savchatha_23 Ramkrshna_savchatha_24 Ramkrshna_savchatha_25 Ramkrshna_savchatha_26 Ramkrshna_savchatha_27 Ramkrshna_savchatha_28

ರಸ್ತೆ ವಿಭಾಜಕಗಳಲ್ಲಿನ ಕಳೆ ತೆರವು: ಹೆದ್ದಾರಿಯಲ್ಲಿರುವ ಬೃಹತ್ ಮೂರು ರಸ್ತೆಯ ವಿಭಾಜಕಗಳನ್ನು ಸ್ವಚ್ಛಗೊಳಿಸಲಾಯಿತು. ಕಳೆಕೊಚ್ಚುವಯಂತ್ರದ ಸಹಾಯದಿಂದ ಹಾಗೂ ರಥಬೀದಿ ಕಾಲೇಜಿನ ವಿದ್ಯಾರ್ಥಿಗಳ ಶ್ರಮದಿಂದ ಅನೇಕ ಸಮಯದಿಂದ ಶೇಖರವಾಗಿದ್ದ ಕಳೆ ಹಾಗೂ ಕಸವನ್ನು ಸಂಪೂರ್ಣವಾಗಿ ತೆಗೆದುಹಾಕಿ ಶುಚಿಗೊಳಿಸಲಾಗಿದೆ. ಶ್ರೀ ನಿವೇದಿತ ಬಳಗದ ಸದಸ್ಯರು ಮಾರ್ಗದಲ್ಲಿ ಹೋಗುತ್ತಿದ್ದ ದಾರಿಹೋಕರಿಗೆ ಹಾಗೂ ನಂತೂರ ಪರಿಸರದಲ್ಲಿರುವ ಮನೆಮನೆಗೆ ತೆರಳಿ ಸ್ವಚ್ಚ ಪರಿಸರಕುರಿತಕರಪತ್ರ ಹಂಚಿಜಾಗೃತಿ ಮಾಡಿದರು.

ಬಸ್ ತಂಗುದಾಣಕ್ಕೆ ಬಣ್ಣ : ನಂತೂರ ವೃತ್ತದ ಬಳಿಯಿರುವ ಬಸ್ ತಂಗುದಾಣ ಕಸದಿಂದ ತುಂಬಿ ಹೋಗಿತ್ತಲ್ಲದೇ ‌ಅಲ್ಲಲ್ಲಿ ಅಂಟಿಸಿದ್ದ ಭಿತ್ತಿಚಿತ್ರಗಳು ತಂಗುದಾಣದ ಅಂದಗೆಡಿಸಿದ್ದವು. ಮಂಗಳುರು ವಿಶ್ವವಿದ್ಯಾನಿಲಯದ ಡಾ. ಶರತ ಚಂದ್ರ‌ ಇವರ ಜೊತೆಗೂಡಿ ‌ಇತರೆ‌ ಆರು ಜನ ಸ್ವಯಂಸೇವಕರು ಬಸ್ ತಂಗುದಾಣಕ್ಕೆ‌ಅಂಟಿಸಲಾಗಿದ್ದ ಪೋಸ್ಟರ್‌ಗಳನ್ನು ಕಿತ್ತು‌ ಇಡೀ ತಂಗುದಾಣವನ್ನು ನೀರಿನಿಂದ ಶುಚಿಗೊಳಿಸಿದರು. ತದನಂತರ ಬಣ್ಣ ಹಚ್ಚಿ ಅಂದಗೊಳಿಸಿದರು. ಇದೀಗ ಬಸ್ ತಂಗುದಾಣ ಶುಚಿಯಾಗಿ, ಸುಂದರವಾಗಿಕಾಣುತ್ತಿದೆ.

ಅಭಿಯಾನದಕ್ಕೆ ನಮ್ಮೊಂದಿಗೆ :ಆರ್ಟ್‌ಆಫ ಲೀವಿಂಗ ಇದರ ಸದಸ್ಯರು‌ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಹಾಗೇ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರಾದ ಶ್ರೀ ಶೇಷಪ್ಪ ಅಮೀನ ಹಾಗೂ ಶ್ರೀ ಮಹೇಶ್ ಕೆ ಬಿ ಇವರ ಮಾರ್ಗದರ್ಶನದಲ್ಲಿ‌ ಅಭಿಯಾನಕ್ಕೆ ಕೈಜೋಡಿಸಿದರು. ಹಿರಿಯರಾದ ಶ್ರೀ ವಿಠಲದಾಸ್ ಪ್ರಭು, ಶ್ರೀ ಎಂ ಆರ್ ವಾಸುದೇವಡಾ. ಸತೀಶ್‌ರಾವ್, ಶ್ರೀಮತಿ ಕಾತ್ಯಾಯನಿ, ಶ್ರೀ ಶುಭೋದಯ ಆಳ್ವ ಮತ್ತಿತರರು ಭಾಗವಹಿಸಿದ್ದರು.ಅನೇಕ ಪುಟ್ಟ ಪುಟ್ಟ ಮಕ್ಕಳು ಈ ಸಲದ 33ನೇ ಅಭಿಯಾನದಲ್ಲಿ ಭಾಗವಹಿಸಿ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ಕೊಡುಗೆ ನೀಡಿದ್ದು ಬಹಳ ವಿಶೇಷವಾಗಿತ್ತು. ಈ ಅಭಿಯಾನಕ್ಕೆ‌ಎಂಆರ್‌ಪಿ‌ಎಲ್ ಸಂಸ್ಥೆ ಧನಸಹಾಯ ನೀಡಿ ಪ್ರೋತ್ಸಾಹಿಸುತ್ತಿದೆ.

Write A Comment