ಕನ್ನಡ ವಾರ್ತೆಗಳು

ಸ್ಯಾಮ್ ಸರ್ಕಿಟ್ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆ-ಆಸ್ಟ್ರೋ ಮೋಹನ್‌ಗೆ 2 ಸ್ವರ್ಣ, 1 ರಜತ ಹಾಗೂ 1 ಕಂಚು

Pinterest LinkedIn Tumblr

ಉಡುಪಿ: ಫೊಟೋಗ್ರಾಫಿಕ್ ಸೊಸೈಟಿ ಆಫ್ ಅಮೆರಿಕಾ ಮತ್ತು ಭಾರತದ ವೈಲ್ಡ್ ಲೈಫ್ ಫೊಟೋಗ್ರಾಫಿ ಅಸೋಸಿಯೇಶನ್ ಆಫ್ ಇಂಡಿಯಾದ ಸಂಯುಕ್ತಾಶ್ರಯದಲ್ಲಿ ಜರಗಿದ ಸ್ಯಾಮ್ ಸರ್ಕಿಟ್ ಅಂತಾರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ 2 ಸ್ವರ್ಣ, 1 ರಜತ ಮತ್ತು 1 ಕಂಚು ಬಹುಮಾನ , 5 ಚಿತ್ರಗಳಿಗೆ ಸರ್ಟಿಫಿಕೇಟ್ ಆಪ್ ಮೆರಿಟ್ ಹಾಗೂ 64 ಚಿತ್ರಗಳು ಸ್ವೀಕೃತಿಯನ್ನು ಪಡೆದಿವೆ.

Astro-Mohan

(ಆಸ್ಟ್ರೋ ಮೋಹನ್‌)

astro1

ನೈನಿತಾಲ್, ರತಲಮ್, ಹೊಸದಿಲ್ಲಿ, ಇಟಾರಸಿ, ವಿಜಯವಾಡ ಹಾಗೂ ಪಿಲ್‌ಖ್ವಾಗಳಲ್ಲಿ ವಿವಿಧ ತೀರ್ಪುಗಾರರು ಈ ಚಿತ್ರಗಳನ್ನು ಅವಲಲೋಕಿಸಿದ್ದರು.

ಕಲರ್, ಕಲರ್ ಆಫ್ ಲೈಫ್, ಮೊನೋ, ಮೊನೋ ಸಿಟಿ ಲೈಫ್, ನೇಚರ್, ಫೊಟೋ ಜರ್ನಲಿಸಮ್, ಫೊಟೋ ಟ್ರಾವೆಲ್, ಹಾಗೂ ವೈಲ್ಡ್ ಲೈಪ್ ವಿಭಾಗಗಳಲ್ಲಿ ಸ್ಪರ್ಧೆ ಜರಗಿತ್ತು. ಕಲರ್ಸ್ ಲೈಫ್‌ನಲ್ಲಿ ಗಾಳಿ ಪಟ ಬಿಡುವ ಚಿತ್ರ, ಆಳ್ವಾಸ್ ನಲ್ಲಿ ಜರಗಿದ ಸ್ವಾತಂತ್ರ್ಯೋತ್ಸವ ಚಿತ್ರಕ್ಕೆ ಬಹುಮಾನ ಬಂದಿದೆ.

ಕಪ್ಪು ಬಿಳುಪು ವಿಭಾಗದಲ್ಲಿ ಇಳಿ ವಯಸ್ಸಿನಲ್ಲಿಯೂ ಹೊಲಿಗೆ ಕೆಲಸವನ್ನು ಮಾಡುತ್ತಿರುವ ಮಹಿಳೆಯ ಚಿತ್ರಕ್ಕೆ ವಿಶೇಷ ಬಹುಮಾನ ಬಂದಿದೆ. ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗದಲ್ಲಿ ರಸ್ತೆ ಬಂದ್ ನಡೆಸುವ ದೃಶ್ಯಗೆ ಬಹುಮಾನ ಬಂದಿದೆ. ಎಳೆ ಮಗುವಿಗೆ ಉಣಿಸುವ ಚಿತ್ರಕ್ಕೆ ಬೆಸ್ಟ್ ಆಫ್ ಚೈಲ್ಡ್ ಸ್ಟಡಿ ಪ್ರಶಸ್ತಿ ಲಭಿಸಿದೆ.

Write A Comment