ಕನ್ನಡ ವಾರ್ತೆಗಳು

ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶಿಸಲು ಜ 10 ರೊಳಗೆ ಹೆಸರು ನೊಂದಣೆ.

Pinterest LinkedIn Tumblr

kadri_flwer_show_1

( ಸಾಂಧರ್ಭಿಕ ಚಿತ್ರ)ಮ೦ಗಳೂರು ಜ,06: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಸಿರಿ ತೋಟಗಾರಿಕೆ ಸಂಘ (ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಜ. 23 ರಿಂದ 26 ರವರೆಗೆ ಏರ್ಪಡಿಸಲಾಗಿರುತ್ತದೆ.

ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ಯಂತ್ರೋಪಕರಣಗಳ ಮಾರಾಟ ಗಾರರು ಹಾಗೂ ಸ್ವ-ಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಸಂಘಗಳು ತಮ್ಮ ಉತ್ಪಾದಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಿದ್ದು, ಮಳಿಗೆ ತೆರಯಬಹುದಾಗಿದೆ.

ತರಕಾರಿ ಕೆತ್ತನೆ, ತೋಟಗಾರಿಕೆ ಕರಕುಶಲತೆಗಳು, ಸಾರ್ವಜನಿಕರು ಬೆಳೆಸಿರುವ ಬೊನ್ಸಾಯಿ, ಆರ್ಕಿಡ್, ಆಂಥೋರಿಯಂ ಗಿಡಗಳು, ತಮ್ಮಲ್ಲಿರುವ ಉತ್ಕೃಷ್ಟ ಹಾಗೂ ನವೀನ ಜಾತಿಯ ಹೂವಿನ, ಅಲಂಕಾರಿಕ ಗಿಡಗಳನ್ನು ಪ್ರದರ್ಶಿಸಲು ಉದ್ದೇಶಿಸಿದ್ದು, ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಆಸಕ್ತರು ಜ. 10 ರೊಳಗಾಗಿ ಹೆಸರು ನೊಂದಾಯಿಸಲು ಕೋರಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮತ್ತು ಹೆಸರು ನೊಂದಾಯಿಸಲು ಸಿರಿ ತೋಟಗಾರಿಕೆ ಸಂಘ (ರಿ), ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಆವರಣ ಬೆಂದೂರು, ಮಂಗಳೂರು ಇಲ್ಲಿ ದೂರವಾಣಿ ಸಂ: 9845523944/ 0824-2412628/ 94800354968 ಸಂಪರ್ಕಿಸಬಹುದು

Write A Comment