ಕನ್ನಡ ವಾರ್ತೆಗಳು

ಕೈದಿಗಳಿಗೆ ಗಾಂಜಾ ಪೂರೈಸಲು ಬಂದ ಇಬ್ಬರು ಮಹಿಳೆಯರ ಬಂಧನ : ಗಾಂಜಾ ವಶ.

Pinterest LinkedIn Tumblr

Mangalor_sub_jail

                                                                                             ( ಕಡತ ಚಿತ್ರ )

ಮಂಗಳೂರು,ಜ.07 : ವಿಚಾರಣಾಧೀನ ಕೈದಿಗಳಿಗೆ ಗಾಂಜಾ ಪೂರೈಸಲು ಬಂದ ಇಬ್ಬರು ಮಹಿಳೆಯರನ್ನು ಗಾಂಜಾ ಸಹಿತ ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಾದ ಹ್ಯಾರೀಸ್ ಮತ್ತು ಅಲ್ತಾಫ್ ಎಂಬಿಬ್ಬರಿಗೆ ಬಟ್ಟೆ ನೀಡಲು ಇಬ್ಬರು ಮಹಿಳೆ ಯರು ಕಾರಾಗೃಹದೊಳಗೆ ಬಂದಿದ್ದರು. ಬಟ್ಟೆಯಿದ್ದ ಪ್ಲಾಸ್ಟಿಕ್ ಚೀಲವನ್ನು ಮುಖ್ಯ ದ್ವಾರದಲ್ಲಿರುವ ಸ್ಕ್ಯಾನಿಂಗ್ ಯಂತ್ರದಲ್ಲಿ ಜೈಲು ಸಿಬ್ಬಂದಿ ಪುಟ್ಟಣ್ಣ ಆಚಾರಿ ಮತ್ತು ಜಯರಾಂ ಸ್ಕ್ಯಾನಿಂಗ್ ಮಾಡಿದಾಗ ಅದರೊಳಗೆ ತಿಳಿ ಬೂದು ಬಣ್ಣದ ಜೀನ್ಸ್ ಪ್ಯಾಂಟ್‌ನಲ್ಲಿ ಗಾಂಜಾ ಪತ್ತೆಯಾಗಿದೆ.

ಅವರು ವಿಷಯವನ್ನು ಬರ್ಕ ಪೊಲೀಸ್ ಠಾಣೆಯ ಗಮನಕ್ಕೆ ತಂದು, ಸ್ಥಳಕ್ಕೆ ಬಂದ ಬರ್ಕೆ ಪೊಲೀಸ್ ನಿರೀಕ್ಷಕರು ಆರೋಪಿ ಮಹಿಳೆಯ ರಿಬ್ಬರನ್ನು 3 ಸಾವಿರ ರೂ. ಮೌಲ್ಯದ 150 ಗ್ರಾಂ. ಗಾಂಜಾದೊಂದಿಗೆ ಬಂಧಿಸಿದ್ದಾರೆ.

ಘಟನೆಯ ವಿವರ :

ದಿನಾಂಕ: 05-01-2016 ರಂದು ಸಂಜೆ ಸುಮಾರು 17.30 ಗಂಟೆಗೆ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಗಳಾಧ ಹ್ಯಾರೀಸ್‌ ಮತ್ತು ಅಲ್ತಾಫ್‌ ನನ್ನು 2 ಜನ ಮಹಿಳೆಯರು ಭೇಟಿ ಮಾಡಿ ಬಟ್ಟೆಗಳನ್ನು ಕೊಡಲು ಜಿಲ್ಲಾ ಕಾರಾಗೃಹದೊಳಗೆ ಬಂದಿದ್ದು, ಅವರ ಕೈಯಲ್ಲಿ ಬಟ್ಟೆಯಿದ್ದ ಪ್ಲಾಸ್ಟಿಕ್‌ ಚೀಲವನ್ನು ಮುಖ್ಯ ದ್ವಾರದಲ್ಲಿರುವ ಸ್ಕ್ಯಾನಿಂಗ್‌ ಯಂತ್ರದಲ್ಲಿ ಜೈಲು ಸಿಬ್ಬಂದಿಗಳಾದ ಪುಟ್ಟಣ್ಣ ಆಚಾರಿ ಮತ್ತು ಜಯರಾಂ ಎಂಬವರು ಸ್ಕ್ಯಾನಿಂಗ್‌ ಮಾಡಿದಾಗ ಅದರೊಳಗೆ ಇರುವ ತಿಳಿ ಬೂದು ಬಣ್ಣದ ಜೀನ್ಸ್‌ ಪ್ಯಾಂಟ್‌ ನಲ್ಲಿ ಗಾಂಜಾದಂತಹ ಮಾದಕ ವಸ್ತು ಇದ್ದು, ಈ ವಿಷಯವನ್ನು ಬರ್ಕೆ ಪೊಲೀಸು ಠಾಣಾ ನಿರೀಕ್ಷಕರ ಗಮನಕ್ಕೆ ತಂದಿದ್ದು, ಬರ್ಕೆ ಪೊಲೀಸು ಠಾಣಾ ನಿರೀಕ್ಷಕರು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬಂದಾಗ ಆರೋಪಿಗಳನ್ನು ಮತ್ತು ಗಾಂಜಾ ಎಂಬ ಮಾದಕ ವಸ್ತುವನ್ನು ಪಿರ್ಯಾದಿಯೊಂದಿಗೆ ಹಸ್ತಾಂತರಿಸಿದ್ದು, ಗಾಂಜಾದ ಒಟ್ಟು ತೂಕ ಸುಮಾರು 150 ಗ್ರಾಂ ಆಗಿದ್ದು, ಬೆಲೆ ಸುಮಾರು 3,000/- ರೂಪಾಯಿ ಆಗಬಹುದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ .

Write A Comment