ಕನ್ನಡ ವಾರ್ತೆಗಳು

ಬ್ಯಾರಿ ಸಾಹಿತ್ಯ ಅಕಾಡಮಿಯ 2015ನೆ ಸಾಲಿನ ಪ್ರಶಸ್ತಿ ಪ್ರಕಟ

Pinterest LinkedIn Tumblr

Beary_Prasasti_Prakata_1

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ 2015ನೆ ಸಾಲಿನ ಗೌರವ ಪ್ರಶಸ್ತಿ, ಅಧ್ಯಯನ ಪ್ರಶಸ್ತಿ, ಮಹಿಳಾ ಸಾಹಿತ್ಯ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಆಯ್ಕೆ ಮಾಡಲಾಗಿದೆ.

ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಕಲಾಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಸಿನೆಮಾ ಕಲಾವಿದ ಮುಹಮ್ಮದ್ ಕೆ. ಮಠ ಉಪ್ಪಿನಂಗಡಿ, ಸಂಸ್ಕೃತಿ ಮತ್ತು ಸಂಘಟನೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮುಹಮ್ಮದ್ ಅಲಿ ಉಚ್ಚಿಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ‘ಗೌರವ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಕನ್ನಡ ಸಂಘಟನೆಗಳನ್ನು ಕಟ್ಟುವ ಮೂಲಕ ಸಾಧನೆ ಮಾಡಿದ ಯಾಕುಬ್ ಖಾದರ್ ಗುಲ್ವಾಡಿ ಅವರು ‘ಡಾ.ವಹಾಬ್ ದೊಡ್ಡಮನೆ ಸ್ಮಾರಕ ಅಧ್ಯಯನ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಮರ್ಯಮ್ ಇಸ್ಮಾಯಿಲ್ ಅವರು ‘ಶ್ರೀಮತಿ ಪಿ.ಸುಶೀಲಾ ಉಪಾಧ್ಯಾಯ ಸ್ಮಾರಕ ಬ್ಯಾರಿ ಮಹಿಳಾ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

Write A Comment